
ಜೀವನ ಎಂದ ಮೇಲೆ ಏರಿಳಿತಗಳು ಸಹಜ. ಬದುಕು ಕೆಲವೊಮ್ಮೆ ಒಂದರ ಮೇಲೆ ಒಂದರಂತೆ ಹೊಡೆತಗಳನ್ನು ತಂದೊಡ್ದುತ್ತದೆ. ಎಲ್ಲವನ್ನು ಎದುರಿಸಿ ನಿಲ್ಲಬೇಕು ಅಷ್ಟೇ. ಹೌದು, ಹೋಟೆಲ್ ಮ್ಯಾನೇಜ್ ಮೆಂಟ್ ಪದವಿ ಮಾಡಿ, ಸ್ಟಾರ್ಟ್‌ಅಪ್ (startup) ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ಉದ್ಯಮಿಗೆ ಕೋವಿಡ್ ಹೊಡೆತ ತಂದೊಟ್ಟಿತು. ಇದಾದ ಬಳಿಕ ಬದುಕಿಗಾಗಿ ಅವಲಂಬಿಸಿದ್ದು ರ‍್ಯಾಪಿಡೋ ಚಾಲಕ ವೃತ್ತಿ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದ ಚಿರಾಗ್ (Chiraag) ಎಂಬ ವ್ಯಕ್ತಿಗೆ ಈ ಚಾಲಕನ ಬದುಕಿನ ಕಥೆ ಕೇಳಿ ಶಾಕ್ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಉದ್ಯಮಿಯಾಗಿದ್ದ ವ್ಯಕ್ತಿ ರ‍್ಯಾಪಿಡೋ ಚಾಲಕನಾಗಿ ಬದುಕು ಕಟ್ಟಿಕೊಂಡದ್ದನ್ನು ಕೇಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಚಿರಾಗ್ (Chiraaag) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಚಿರಾಗ್ ಚಾಲಕನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದು ಈ ವೇಳೆ ಚಾಲಕನಾಗಿರುವ ವ್ಯಕ್ತಿಯ ಬದುಕಿನ ಅಸಲಿ ಕಥೆ ಹೊರಬಿದ್ದಿದೆ. ಈ ವ್ಯಕ್ತಿಯೂ ಅಮಿಟಿ ವಿಶ್ವವಿದ್ಯಾಲಯದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿದ್ದು, ಇವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಂತೆ. ನಿವೃತ್ತಿಯ ಬಳಿಕ ಕುಟುಂಬವು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಜೀವನವು ಉತ್ತಮ ರೀತಿಯಲ್ಲಿ ಸಾಗುತ್ತಿತ್ತು. ಹೀಗಿರುವಾಗ ಮಹಾಮಾರಿ ಕೋವಿಡ್ 19 ಈ ವ್ಯಕ್ತಿಯ ಬದುಕನ್ನೇ ಅಲ್ಲೋಲ್ಲ ಕಲ್ಲೋಲವಾಗಿಸಿತ್ತಂತೆ. ಹೀಗಾಗಿ ಕೆಲಸಗಾರರ ಸಂಬಳ, ಬ್ಯಾಂಕ್ ಸಾಲ ಸೇರಿ ಸರಿ ಸುಮಾರು 13-14 ಕೋಟಿ ರೂಪಾಯಿ ನಷ್ಟವಾಯಿತು ಎಂದು ಹೇಳಿಕೊಂಡಿದ್ದಾನೆ.
Life is so unfair, man.
I was on a Rapido bike today, just a normal ride. The driver asked me where I live, which college I go to. Casual stuff.
Then out of nowhere, he started telling me his story. He said he did hotel management from Amity. Life was good back then when his…
— Chiraag (@0xChiraag) December 22, 2025
ಹೀಗಾಗಿ ಮತ್ತೆ ಉದ್ಯಮದಲ್ಲಿ ಚೇತರಿಸಿಕೊಳ್ಳುವುದು ಅಸಾಧ್ಯವಾಯಿತು. ಕೈಯಲ್ಲಿದ್ದ ಐದು ಲಕ್ಷ ರೂಪಾಯಿಯಲ್ಲಿ ನಾಲ್ಕು ಲಕ್ಷ ರೂ ಗೆಳೆಯನೊಂದಿಗೆ ಹೂಡಿಕೆ ಮಾಡಿ ಮತ್ತೊಮ್ಮೆ ಸ್ಟಾರ್ಟ್‌ಅಪ್ ಆರಂಭಿಸಿದ್ದು, ಆದರೆ ಮತ್ತೆ ನಷ್ಟವಾಯಿತು. ಕೈಯಲ್ಲಿ ಹಣವಿಲ್ಲದೇ ತನ್ನ ಬಳಿ ಒಂದೇ ಒಂದು ಬೈಕ್ ಎಂದು ತನ್ನ ರ‍್ಯಾಪಿಡೋ ಚಾಲಕ ತನ್ನ ಬದುಕಿನ ಬಗ್ಗೆ ಹೇಳಿಕೊಂಡಿದ್ದಾನೆ.
ಈ ಬೈಕ್ ಇಟ್ಟುಕೊಂಡು ರ‍್ಯಾಪಿಡೋ ಚಾಲಕನಾಗಿ ಈ ವೃತ್ತಿಯನ್ನು ಆರಂಭಿಸಿದೆ. ನಾನು ಯಾವುದನ್ನು ಬಿಟ್ಟುಕೊಡುತ್ತಿಲ್ಲ. ನಾನು ಇನ್ನೂ ದೇವರನ್ನು ನಂಬುತ್ತೇನೆ. ಕೊನೆಯ ಬಾರಿಗೆ ಪ್ರಯತ್ನಿಸುತ್ತೇನೆ. ನಾನು ಬಿಟ್ಟುಕೊಡುವ ಮೊದಲು ಇನ್ನೊಂದು ಹೊಡೆತ ಎಂದು ಹೇಳುತ್ತಿದ್ದಂತೆ ಈ ಪ್ರಯಾಣಿಕನ ಕಣ್ಣು ಒದ್ದೆಯಾಗಿದೆ. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಸುಮ್ಮನೆ ಕುಳಿತೆ, ಆದರೆ ಅವರ ಮಾತು ನನ್ನ ಹೃದಯ ಮುಟ್ಟಿತು. ಜೀವನ ಕೆಲವೊಮ್ಮೆ ಅನ್ಯಾಯ ಮಾಡುತ್ತದೆ ಎಂದು ರ‍್ಯಾಪಿಡೋ ಚಾಲಕನ ಬದುಕಿನ ಕಥೆಯ ಕೇಳಿ ಪ್ರಯಾಣಿಕನು ಬೇಸರ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ:ಜೀವನಕ್ಕಾಗಿ ಆಟೋನೇ ಆಧಾರ; ಇದು ದೈಹಿಕ ನ್ಯೂನತೆ ಮೆಟ್ಟಿನಿಂತ ವ್ಯಕ್ತಿಯ ಕಥೆ
ಈ ಪೋಸ್ಟ್ ಇದುವರೆಗೆ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವ್ಯಕ್ತಿಯ ಕಥೆ ನನಗೂ ತುಂಬಾ ನೋವುಂಟು ಮಾಡಿತು.. ಬದುಕು ನಿಜಕ್ಕೂ ಅನಿಶ್ಚಿತ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬದುಕಿನಲ್ಲಿ ಒಳ್ಳೆಯದಾಗುತ್ತೆ, ತಾಳ್ಮೆ ಇರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಕೋವಿಡ್ ಅನೇಕ ಕುಟುಂಬಗಳನ್ನು ಆರ್ಥಿಕವಾಗಿ ನಾಶ ಮಾಡಿತು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ