Viral: ಕಾಂಡೋಮ್‌ಗಾಗಿ ಬರೋಬ್ಬರಿ 1 ಲಕ್ಷ ರೂ ಖರ್ಚು ಮಾಡಿದ ಚೆನ್ನೈ ವ್ಯಕ್ತಿ
ಸಾಮಾನ್ಯವಾಗಿ ಬಟ್ಟೆ, ಶೂ, ಮೇಕಪ್ ಕಿಟ್ ಸೇರಿದಂತೆ ಇನ್ನಿತ್ತರ ವಸ್ತುಗಳನ್ನು ಖರೀದಿಸಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುವವರನ್ನು ನೀವು ನೋಡಿರುತ್ತೀರಿ. ಸ್ವಿಗ್ಗಿಯ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಮಾರ್ಟ್‌ನ 2025ರ ವರದಿಯಲ್ಲಿ ಆಘಾತಕಾರಿ ವಿಚಾರ ಬಹಿರಂಗಗೊಂಡಿದೆ. ಚೆನ್ನೈನ ವ್ಯಕ್ತಿಯೊಬ್ಬ ಕಾಂಡೋಮ್‌ಗಾಗಿ ಸಾವಿರವಲ್ಲ, ಲಕ್ಷ ರೂ ಖರ್ಚು ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ (online shopping) ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕುಳಿತಲ್ಲಿಂದಲೇ ತಮಗೆ ಬೇಕಾದ್ದನ್ನು ಆರ್ಡರ್ ಮಾಡುತ್ತಾರೆ. ಹೀಗಾಗಿ ಬ್ಲಿಂಕಿಟ್, ಜೆಪ್ಟೊ ಅಥವಾ ಸ್ವಿಗ್ಗಿಯ ಇನ್‌ಸ್ಟಾಮಾರ್ಟ್ ಹೀಗೆ ಹತ್ತಾರು ಅಪ್ಲಿಕೇಶನ್ ಗಳನ್ನು ಅವಲಂಬಿಸಿಕೊಂಡವರೇ ಹೆಚ್ಚು. ಹೀಗಿರುವಾಗ ಪ್ರತಿ ವರ್ಷದಂತೆ ಈ ವರ್ಷವ ಸ್ವಿಗ್ಗಿಯ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಇನ್‌ಸ್ಟಾಮಾರ್ಟ್‌ನ (Instamarts) 2025ರ ವರದಿಯನ್ನು ಬಿಡುಗಡೆ ಮಾಡಿದೆ. ಆದರೆ ಚೆನ್ನೈನ ವ್ಯಕ್ತಿಯೊಬ್ಬ ಈ ಅಪ್ಲಿಕೇಶನ್ ಮೂಲಕ ಇಡೀ ವರ್ಷದಲ್ಲಿ ಕಾಂಡೋಮ್ ಗಾಗಿ ಒಂದು ಲಕ್ಷ ರೂ ಖರ್ಚು ಮಾಡಿದ್ದಾನೆಯಂತೆ.
ಭಾರಧ್ವಜ್ ರಂಗನ್ (bharadwaj rangan) ಹೆಸರಿನ ಖಾತೆಯಲ್ಲಿ ಇನ್‌ಸ್ಟಾಮಾರ್ಟ್ ವರದಿ ಕುರಿತಾದ ಪೋಸ್ಟ್ ಹಂಚಿಕೊಳ್ಳಲಾಗಿದೆ. 2025ರ ಇನ್‌ಸ್ಟಾಮಾರ್ಟ್ ವರದಿ ಪ್ರಕಾರ, ಚೆನ್ನೈನ ವ್ಯಕ್ತಿಯೂ ಇಡೀ ವರ್ಷದಲ್ಲಿ ಕಾಂಡೋಮ್‌ಗಳಿಗಾಗಿ 1,06,398 ರೂ.ಗಳನ್ನು ಖರ್ಚು ಮಾಡಿದ್ದಾನೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಸತತ 10 ವರ್ಷಗಳಿಂದ ಬಿರಿಯಾನಿಗೆ ಅಗ್ರಸ್ಥಾನ: ಸ್ವಿಗ್ಗಿಯಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್
ಅದಲ್ಲದೇ, ವರ್ಷ ಪೂರ್ತಿ 228 ವಿಭಿನ್ನ ಆರ್ಡರ್‌ಗಳನ್ನು ಮಾಡಿದ್ದಾನೆ ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಅಂದರೆ, ಪ್ರತಿ ತಿಂಗಳು ಸರಾಸರಿ 19 ಆರ್ಡರ್‌ಗಳನ್ನು ಮಾಡಿದ್ದಾನೆ ಎನ್ನಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




