ಬಾಹ್ಯಾಕಾಶದಲ್ಲಿ ಮಹತ್ವದ ವಿದ್ಯಮಾನವೊಂದನ್ನು ವೀಕ್ಷಿಸಲು ಇನ್ನೊಂದು ದಿನಗಳ ಅವಕಾಶ ಮಾತ್ರವಷ್ಟೇ ಇದೆ. ನಿನ್ನೆ (ಮಾರ್ಚ್ 27) ಯಿಂದ ಚಂದ್ರ ಅತ್ಯಂತ ಪ್ರಕಾಶಮಾನವಾಗಿಯೂ, ಪೂರ್ಣಪ್ರಮಾಣದಲ್ಲಿಯೂ ಕಾಣಿಸುತ್ತಾನೆ. ಸುಂದರ ಚಂದ್ರ ಈ ಸ್ವರೂಪವನ್ನು ಇಂದು ಮತ್ತು ನಾಳೆ ರಾತ್ರಿ, ಹೆಚ್ಚೆಂದರೆ ಬುಧವಾರದ ಬೆಳಗು ಜಾವದವರೆಗೆ (ಮಾರ್ಚ್ 28, 29ರ ರಾತ್ರಿ ಮತ್ತು ಮಾರ್ಚ್ 30ರ ಬೆಳಗಿನ ಜಾವ) ಮಾತ್ರ ವೀಕ್ಷಿಸಬಹುದಾಗಿದೆ. ಈ ಕುರಿತು ನಾಸಾ ತನ್ನ ವೆಬ್ಸೈಟ್ನಲ್ಲಿ ಬರೆದುಕೊಂಡಿದೆ.
ಪೂರ್ವ ಆಕಾಶದಲ್ಲಿ ಭಾನುವಾರ ರಾತ್ರಿ ಚಂದ್ರನು ತನ್ನ ಪೂರ್ಣ ಮತ್ತು ಪ್ರಕಾಶಮಾನವಾಗಿರುತ್ತಾನೆ, ಶನಿವಾರ ಬೆಳಿಗ್ಗೆಯಿಂದ ಸೋಮವಾರ ರಾತ್ರಿಯವರೆಗೆ ಮಂಗಳವಾರ ಮುಂಜಾನೆ ಸುಮಾರು ಮೂರು ದಿನಗಳವರೆಗೆ ಚಂದ್ರನು ಪೂರ್ಣವಾಗಿ ಕಾಣಿಸಿಕೊಳ್ಳುತ್ತಾನೆ. ಅಲ್ಲದೇ ಉತ್ತರ ಭಾರತದ ಹಲವೆಡೆ ಈ ಸಮಯದಲ್ಲಿ ಹೋಳಿ ಹಬ್ಬದ ಚಂದ್ರ ಎಂದು ಕರೆಯುವ ಪದ್ಧತಿಯೂ ಜನಸಾಮಾನ್ಯರಲ್ಲಿದೆ.
ಸಹಜವಾಗಿ ಈ ಚಂದಿರನೂ ಒಂದು ಬಗೆಯ ಸೂಪರ್ ಮೂನ್ ಆಗಿದ್ದಾನೆ. ಈ ಸಮಯದಲ್ಲಿ ಚಂದಿರನ ಪ್ರಕಾಶಮಾನ ಶೇ 30ರಷ್ಟು ಹೆಚ್ಚಿರುತ್ತದೆ. ಅಲ್ಲದೇ ಗಾತ್ರದಲ್ಲೂ ಶೇ 12ರಷ್ಟು ಹೆಚ್ಚು ದೊಡ್ಡದಾಗಿ ಚಂದ್ರ ಕಾಣಿಸುತ್ತಾನೆ.
ವಸಂತ ಮಾಸದ ಆಗಮನವಾಗಿದೆ. ಇದೇ ಸಮಯದಲ್ಲಿ ಚಂದ್ರ ಸಂಪೂರ್ಣ ಸ್ವರೂಪ ದರ್ಶನವಾಗುತ್ತಿದೆ. ಅಲ್ಲದೇ ಎಂದಿಗಿಂತ ಹೆಚ್ಚು ಪ್ರಕಾಶಮಾನವಾಗಿಯೂ ಚಂದ್ರ ಗೋಚರಿಸಲಿದ್ದಾನೆ. ಹೀಗಾಗಿ ಚಂದ್ರ ದರ್ಶನ ಮಾಡುವ ಅನುಭವ ಮುದ ನೀಡುವುದಂತೂ ಖಚಿತ .
ಹತ್ತರೀ ಸಾಧನಕೇರಿ ಬಸ್: ಸೂರ್ಯ ಮುಳುಗುವ ಮುನ್ನ ಓಡೋಡಿ ಬರುವ ಜನ, ಕೈ ಮುಗಿವ ಹಾಗೆ ಮುಳುಗಲ್ಲಿ ಮುಳುಗಿ…