Viral Video: ಬರೋಬ್ಬರಿ 115 ಅಡಿ ಎತ್ತರದ ಅಲೆಯಲ್ಲಿ ಸರ್ಫಿಂಗ್ ಸಾಹಸ; ಮೈ ಜುಂ ಎನ್ನಿಸುವ ವಿಡಿಯೋ ಇಲ್ಲಿದೆ

| Updated By: shivaprasad.hs

Updated on: Apr 15, 2022 | 9:46 AM

Surfing | Trending Video: ಸರ್ಫಿಂಗ್ ಸಾಹಸಮಯ ಕ್ರೀಡೆ. ಇದಕ್ಕೆ ವಿಶ್ವಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಕೆಲ ವರ್ಷಗಳ ಹಿಂದೆ 115 ಅಡಿ ಎತ್ತರದ ಅಲೆಯಲ್ಲಿ ಸರ್ಫಿಂಗ್ ಮಾಡಿ ದಾಖಲೆ ಬರೆದಿದ್ದು ಸುದ್ದಿಯಾಗಿತ್ತು. ಇದೀಗ ಆ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

Viral Video: ಬರೋಬ್ಬರಿ 115 ಅಡಿ ಎತ್ತರದ ಅಲೆಯಲ್ಲಿ ಸರ್ಫಿಂಗ್ ಸಾಹಸ; ಮೈ ಜುಂ ಎನ್ನಿಸುವ ವಿಡಿಯೋ ಇಲ್ಲಿದೆ
115 ಅಡಿ ಎತ್ತರದ ಅಲೆಯಲ್ಲಿ ಸರ್ಫಿಂಗ್
Follow us on

ಸರ್ಫಿಂಗ್ (Surfing) ಎನ್ನುವುದು ನೀರಿನ ಮೇಲಿನ ಸಾಹಸ ಕ್ರೀಡೆ. ಇದರ ಬಗ್ಗೆ ಎಲ್ಲರೂ ಕೇಳಿರುತ್ತೀರಿ, ನೋಡಿರುತ್ತೀರಿ. ಈ ಸಾಹಸ ಕ್ರೀಡೆಯಲ್ಲಿ ಸಾಗರದ ಅಲೆಯನ್ನು ಬಳಸಿ ಸರ್ಫಿಂಗ್ ಬೋರ್ಡ್ ಮೂಲಕ ಸವಾರಿ ಮಾಡಲಾಗುತ್ತದೆ. ಇದನ್ನು ಮಾಡುವ ವ್ಯಕ್ತಿಯನ್ನು ಸರ್ಫರ್ (Surfer) ಎಂದು ಗುರುತಿಸಲಾಗುತ್ತದೆ. ಈ ಸಾಹಸ ಕ್ರೀಡೆಯ ಹಲವು ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ, ಅಂತರ್ಜಾಲದಲ್ಲಿ ನೋಡಿರುತ್ತೀರಿ. ಪ್ರತಿಷ್ಠಿತ ಪಂದ್ಯಾವಳಿಗಳಲ್ಲೂ ಈ ಸ್ಪರ್ಧೆ ನಡೆಯುತ್ತದೆ. ಇದೀಗ ಸರ್ಫಿಂಗ್​ನ ಒಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಸಾಹಸಿ ವ್ಯಕ್ತಿಯೋರ್ವನ ಅದ್ಭುತ ಸಾಹಸವನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಕಾರಣ, ಬರೋಬ್ಬರಿ 115 ಅಡಿ ಎತ್ತರದ ಅಲೆಯಲ್ಲಿ ಸರ್ಫಿಂಗ್ ಮಾಡುತ್ತಿರುವುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ವಾಸ್ತವವಾಗಿ ಮೂರು ವರ್ಷಗಳ ಹಳೆಯ ಘಟನೆಯ ವಿಡಿಯೋ ಇದು. ಪ್ರಸ್ತುತ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

115 ಅಡಿ ಎತ್ತರದ ಅಲೆಯಲ್ಲಿ ಸರ್ಫಿಂಗ್ ಮಾಡಿ ಸಾಹಸ ಮೆರೆದವರು ಸೆಬಾಸ್ಟಿಯನ್ ಸ್ಟೀಡ್ಟ್ನರ್. ಈ ಮೂಲಕ ಅವರು ಐತಿಹಾಸಿಕ ಸಾಧನೆಯನ್ನು ಮಾಡಿದ್ದರು. ಮನೋಹರವಾದ ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಜನರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ವೈರಲ್ ಆಗಿದೆ.

ಈ ವಿಡಿಯೋ ಏಕೆ ಎಲ್ಲರ ಗಮನ ಸೆಳೆದಿದೆ ಎನ್ನುವ ಅನುಮಾನ ನಿಮಗಿದೆಯೇ? ಈ ಸಾಹಸ ಕ್ರೀಡೆ ಎಷ್ಟು ಅಪಾಯಕಾರಿ ಎಂಬುದು ಅರಿವಾಗಬೇಕಾದರೆ ನೀವೇ ಆ ವಿಡಿಯೋ ನೋಡಿ.

ವಿಡಿಯೋ ಇಲ್ಲಿದೆ:

ವರದಿಗಳ ಪ್ರಕಾರ, ಸ್ಟೀಡ್ಟ್ನರ್ 2018ರ ಜನವರಿ 18ರಂದು ಪೋರ್ಚುಗಲ್‌ನ ಪ್ರಯಾ ಡಿ ನಾರ್ಟೆಯ ಐಕಾನಿಕ್ ಲೈಟ್‌ಹೌಸ್ ಕೋಟೆಯ ಸಮೀಪ ಈ ಐತಿಹಾಸಿಕ ಸಾಧನೆ ಮಾಡಿದರು. ಯುಟ್ಯೂಬ್​ನಲ್ಲಿ ಕ್ಲಿಪ್ 4.6 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಇತ್ತೀಚೆಗೆ ಸ್ಪೋರ್ಟಿಂಗ್ ನ್ಯೂಸ್ ಇದೇ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದು 6.3 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಕಂಡಿದೆ.

ಸ್ಪೋರ್ಟಿಂಗ್ ನ್ಯೂಸ್ ಹಂಚಿಕೊಂಡ ವಿಡಿಯೋ ಇಲ್ಲಿದೆ:

ಇದನ್ನೂ ಓದಿ: ಮದುವೆ ಆದ ಖುಷಿಗೆ ಹೆಂಡತಿಯನ್ನು ಎತ್ತಿಕೊಂಡು ಓಡಾಡಿದ​ ರಣಬೀರ್​ ಕಪೂರ್​: ವಿಡಿಯೋ ವೈರಲ್​

ಮಿಯಾಮಿಯಲ್ಲಿ ಅಕ್ವೇರಿಯಂ ಪ್ರದರ್ಶನದ ವೇಳೆ ತರಬೇತುದಾರನ ಮೇಲೆ ದಾಳಿ ಮಾಡಿದ ಡಾಲ್ಫಿನ್; ಇಲ್ಲಿದೆ ವೈರಲ್ ವಿಡಿಯೋ