Viral: ಗೂಗಲ್​ಮ್ಯಾಪ್​ನಲ್ಲಿ ಕಾಣಿಸಿಕೊಂಡ ಕೈ-ಕಾಲು, ತಲೆಯೇ ಇಲ್ಲದ ಆಕೃತಿ; ಬೆಚ್ಚಿಬಿದ್ದ ಜನ

Google Maps | Headless Man: ನ್ಯೂಯಾರ್ಕ್​ನ ಬಹುಭದ್ರತೆಯ ಬೀದಿಯಲ್ಲಿ ಕೈ- ಕಾಲುಗಳಿಲ್ಲದ ಅಷ್ಟೇ ಏಕೆ ತಲೆಯೇ ಇಲ್ಲದ ಆಕೃತಿಯ ಚಿತ್ರಗಳು ವೈರಲ್ ಆಗಿವೆ. ಇದನ್ನು ನೋಡಿದ ಜನರು ತಲೆಕೆಡಿಸಿಕೊಂಡಿದ್ದಾರೆ. ಗೂಗಲ್ ಮ್ಯಾಪ್​ಗಳಲ್ಲಿ ಕಾಣಿಸಿಕೊಂಡ ಈ ಚಿತ್ರಗಳು ಇದೀಗ ವೈರಲ್ ಆಗಿವೆ.

Viral: ಗೂಗಲ್​ಮ್ಯಾಪ್​ನಲ್ಲಿ ಕಾಣಿಸಿಕೊಂಡ ಕೈ-ಕಾಲು, ತಲೆಯೇ ಇಲ್ಲದ ಆಕೃತಿ; ಬೆಚ್ಚಿಬಿದ್ದ ಜನ
ತಲೆ, ಕೈ- ಕಾಲುಗಳಿಲ್ಲದ ಆಕೃತಿಯ ವೈರಲ್ ಆಗಿರುವ ಫೋಟೋ
Follow us
TV9 Web
| Updated By: shivaprasad.hs

Updated on: Apr 15, 2022 | 1:19 PM

ಅಂತರ್ಜಾಲದಲ್ಲಿ ನಾವು ಹಲವು ಸಂಗತಿಗಳನ್ನು ಗಮನಿಸುತ್ತೇವೆ. ಕೆಲವು ನಮ್ಮ ಮುಖದಲ್ಲಿ ನಗು ಮೂಡಿಸಿದರೆ ಮತ್ತೆ ಕೆಲವು ನಮಗೆ ಆಶ್ಚರ್ಯ ತರಿಸುತ್ತದೆ. ಮತ್ತೆ ಕೆಲವಂತೂ ಬೆಚ್ಚಿಬೀಳಿಸುತ್ತವೆ. ಒಟ್ಟಿನಲ್ಲಿ ಅಂತರ್ಜಾಲದಲ್ಲಿ ನಾವು ನೋಡುವ ವಿಚಾರಗಳು ಹಲವು ಭಾವಗಳ ಸಂಗಮ. ಅದೇನೇ ಇರಲಿ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಕೆಲವು ಫೋಟೋಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅದನ್ನು ನೋಡಿದರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ! ಹೌದು, ಕಾರಣ ನ್ಯೂಯಾರ್ಕ್​ನ ಬಹುಭದ್ರತೆಯ ಬೀದಿಯಲ್ಲಿ ಕೈ- ಕಾಲುಗಳಿಲ್ಲದ ಅಷ್ಟೇ ಏಕೆ ತಲೆಯೇ ಇಲ್ಲದ ಆಕೃತಿಯ ಚಿತ್ರಗಳು ವೈರಲ್ ಆಗಿವೆ. ಇದನ್ನು ನೋಡಿದ ಜನರು ತಲೆಕೆಡಿಸಿಕೊಂಡಿದ್ದಾರೆ. ಗೂಗಲ್ ಮ್ಯಾಪ್​ಗಳಲ್ಲಿ ಕಾಣಿಸಿಕೊಂಡ ಈ ಚಿತ್ರಗಳು ಇದೀಗ ವೈರಲ್ (Viral) ಆಗಿವೆ. ವಾಸ್ತವವಾಗಿ ಈ ಆಕೃತಿ ಕಾಣಿಸಿಕೊಂಡಿದ್ದು 2021ರ ಮೇ ಸಂದರ್ಭದಲ್ಲಿ. ಆದರೆ ಇದೀಗ ಈ ಫೋಟೋಗಳು ಜನರ ಗಮನವನ್ನು ಮತ್ತೆ ತನ್ನೆಡೆಗೆ ಸೆಳೆದಿದ್ದು, ವೈರಲ್ ಆಗಿದೆ.

ಫೋಟೋದಲ್ಲಿ ಏನಿದೆ?

ಗೂಗಲ್ ಮ್ಯಾಪ್ ಬಳಕೆದಾರರು ಸೂಟ್​ ಮಾದರಿಯ ದಿರಿಸೊಂದನ್ನು ಧರಿಸಿದ ಆಕೃತಿಯೊಂದು ಬೀದಿಗಳಲ್ಲಿ ಅಡ್ಡಾಡುವ ಚಿತ್ರಗಳನ್ನು ಗಮನಿಸಿದ್ದಾರೆ. ಅದು ಸಾಮಾನ್ಯ ಬೀದಿಯೂ ಅಲ್ಲ, ಬದಲಾಗಿ ನ್ಯೂಯಾರ್ಕ್​ನ ಬ್ರೂಕ್ಲಿನ್​ನ ನೇವಿ ಯಾರ್ಡ್​! ಅಲ್ಲಿ ಈ ಆಕೃತಿ ಕಾಣಿಸಿಕೊಂಡಿದ್ದು, ಬೀದಿಗಳಲ್ಲಿ ಓಡಾಡುವ, ಮರದ ಬಳಿ ನಿಂತಿರುವ ಚಿತ್ರಗಳು ವೈರಲ್ ಆಗಿವೆ.

ಈ ಚಿತ್ರ ಹೇಗೆ ಗೂಗಲ್ ಮ್ಯಾಪ್​ನಲ್ಲಿ ಕಾಣಿಸಿಕೊಂಡಿದೆ, ಅದಕ್ಕೆ ಕಾರಣವೇನು? ಎಂಬುದು ಬಹುತೇಕರಿಗೆ ಅಚ್ಚರಿ ತಂದಿದೆ. ಮೊದಮೊದಲಿಗೆ ಇದನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ. ನೇವಿ ಯಾರ್ಡ್ ಅತ್ಯಂತ ಸುರಕ್ಷಿತ ಪ್ರದೇಶ. ಕಟ್ಟಡಗಳಿಂದ ಆವೃತವಾಗಿರುವ ಇದರ ಸುತ್ತಮುತ್ತ ಭದ್ರತೆಯೂ ಹೆಚ್ಚಿದೆ. ಹೀಗಿರುವಾಗ ಇಂತಹ ಆಕೃತಿ ಕಾಣಿಸಿಕೊಂಡಿದ್ದು ಹೇಗೆ ಎನ್ನುವುದು ಎಲ್ಲರ ಪ್ರಶ್ನೆ.

ರೆಡ್ಡಿಟ್​ನಲ್ಲಿ ಹಂಚಿಕೊಂಡಿರುವ ಚಿತ್ರಗಳು ವೈರಲ್ ಆಗಿದ್ದು, ಅವು ಇಲ್ಲಿವೆ:

Viral Photos of headless man in NYC (2)

ರೆಡ್ಡಿಟ್​​ನಲ್ಲಿ ವೈರಲ್ ಆಗಿರುವ ಆಕೃತಿ

Viral Photos of headless man in NYC (2)

ರೆಡ್ಡಿಟ್​​ನಲ್ಲಿ ವೈರಲ್ ಆಗಿರುವ ಆಕೃತಿಯ ಫೋಟೋಗಳು

ಈ ಫೋಟೋಗಳ ಅಸಲಿಯತ್ತೇನಿರಬಹುದು?

ಈ ಫೋಟೋಗಳಲ್ಲಿ ಕಂಡುಬಂದಿರುವ ಆಕೃತಿ ಎಲ್ಲರಿಗೂ ಆಶ್ಚರ್ಯ ತಂದಿದೆ. ಇದಕ್ಕೆ ಕಾರಣ ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಹಿಂದೆ ಇಂಥದ್ದೇ ಪ್ರಕರಣಗಳನ್ನು ಗಮನಿಸಿಕೊಂಡು ಇದಕ್ಕೆ ಕಾರಣವನ್ನು ಹೇಳಬಹುದು. ಗೂಗಲ್ ಮ್ಯಾಪ್​ನ ಗ್ಲಿಚ್​ನ ಕಾರಣದಿಂದ ಹೀಗಾಗಿದೆ ಎನ್ನುವುದು ಒಂದು ಊಹೆ. ಈ ಹಿಂದೆಯೂ ತಲೆ, ಕಾಲುಗಳಿಲ್ಲದ ವ್ಯಕ್ತಿಯ ಫೋಟೋಗಳು, ಅಥವಾ ದೇಹದ ಭಾಗಗಳು ನಾಪತ್ತೆಯಾಗಿರುವ ಫೋಟೋಗಳು ವೈರಲ್ ಆಗಿದ್ದವು. 2021ರ ಮೇ ಸಂದರ್ಭದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಿದ್ದ ಕಾರಣ, ಸೂಟ್ ಮಾದರಿಯ ದಿರಿಸನ್ನು ಧರಿಸಿ ವ್ಯಕ್ತಿ ಓಡಾಡಿರಬಹುದು. ತಾಂತ್ರಿಕ ಸಮಸ್ಯೆ ಅರ್ಥಾತ್ ಗ್ಲಿಚ್ ಕಾರಣದಿಂದ ಆಕೃತಿಯ ಮಾದರಿಯಲ್ಲಿ ವ್ಯಕ್ತಿ ಗೋಚರವಾಗಿರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಸ್ಪಷ್ಟೀಕರಣ ಇನ್ನಷ್ಟೇ ಬರಬೇಕಿದೆ.

ಇದನ್ನೂ ಓದಿ: Viral: ಸ್ಕರ್ಟ್ ಧರಿಸಿ ‘ಸಾಮಿ ಸಾಮಿ’ ಹಾಡಿಗೆ ಯುವಕನ ಭರ್ಜರಿ ಡಾನ್ಸ್; ಏನಿದು ಹೊಸ ಟ್ರೆಂಡ್?

ಮದುವೆ ಆದ ಖುಷಿಗೆ ಹೆಂಡತಿಯನ್ನು ಎತ್ತಿಕೊಂಡು ಓಡಾಡಿದ​ ರಣಬೀರ್​ ಕಪೂರ್​: ವಿಡಿಯೋ ವೈರಲ್​

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್