ಅಮ್ಮ ಅಂದರೆ ಪ್ರತಿಯೊಬ್ಬ ಮಕ್ಕಳಿಗೂ ಇಷ್ಟ. ಅಮ್ಮನ ಸುಖವನ್ನೇ ಎಲ್ಲ ಮಕ್ಕಳೂ ಬಯಸುತ್ತಾರೆ. ನಮಗೆ ಈ ಅದ್ಭುತ ಜಗತ್ತನ್ನು ನೋಡಲು ಅವಕಾಶ ಮಾಡಿಕೊಟ್ಟ ದೇವರು ಆಕೆ. ಅವಳನ್ನು ಸಂತೋಷವಾಗಿಡುವುದು ಮಕ್ಕಳ ಜವಾಬ್ದಾರಿಯೂ ಹೌದು. ತನ್ನ ತಾಯಿಗಾಗಿ ಮಗ ಸರ್ಪ್ರೈಸ್ ಕಾರೊಂದನ್ನು ಗಿಫ್ಟ್ ನೀಡಿದ್ದಾನೆ. ಅಮ್ಮನ ಪ್ರತಿಕ್ರಿಯೇ ಅದ್ಭುತವಾಗಿದೆ. ವಿಡಿಯೋ ಇದೆ ನೀವೂ ನೋಡಿ.
ಮಗನ ತನಗಾಗಿ ಮನೆ ಬಾಗಿಲಿಗೆ ತಂದಿರಿಸಿದ ಕಾರನ್ನು ನೋಡಿ ತಾಯಿ ಖುಷಿ ಪಡುತ್ತಾಳೆ. ಆದರೆ ಆ ಕಾರು ಅವಳಿಗಾಗಯೇ ಅನ್ನುವ ಸತ್ಯ ಆಕೆಗೆ ಗೊತ್ತಿಲ್ಲ. ಮಗ ವಿಡಿಯೋ ಮಾಡುತ್ತಾ ಅಮ್ಮ ನಿನಗಾಗಿ ಕಾರು ಅಂದಾಗ ಅವಳಿಗೆ ತಡೆಯಲಾರದಷ್ಟು ಸಂತೋಷವಾಗಿದೆ. ಹೋ…. ಎಂದು ಮಗನ ಕೆನ್ನೆಗೆ ಮುತ್ತು ಕೊಟ್ಟು ಕಾರನ್ನು ತಬ್ಬಿಕೊಳ್ಳುತ್ತಾಳೆ. ಜೋರಾಗಿ ಕೂಗುತ್ತಾ ತನ್ನ ಸಂತೋಷವನ್ನು ಹೊರಹಾಕುತ್ತಾಳೆ. ಇಂತಹ ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಗೆದ್ದಿದೆ.
it’s not a Benz or Bently coupe, but I bought my ma a car today. I love you crazy lady❤️ pic.twitter.com/2f99FfWaDg
— Lue.? (@KhristianLue) May 26, 2021
ಮಗ ತನ್ನ ತಾಯಿಗೆ ಕಾರು ಗಿಫ್ಟ್ ಕೊಡುವ ದೃಶ್ಯವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. 36 ಸೆಕೆಂಡುಗಳ ದೃಶ್ಯವನ್ನು ನೀವು ಗಮನಿಸುವಂತೆ ಕಾರನ್ನು ಮನೆಯ ಬಾಗಿಲಿನ ಮುಂದೆ ತಂದಿರಿಸಲಾಗಿದೆ. ಹೊರಗಿನಿಂದಲೇ ಮಗ ಅಮ್ಮನನ್ನು ಕೂಗುತ್ತಾನೆ. ಒಳಗಿನಿಂದ ಮೆಟ್ಟಿಲು ಇಳಿಯುತ್ತಾ ಬಂದ ತಾಯಿ ಕಾರನ್ನು ನೋಡಿ ಸಂತೋಷ ಪಡುತ್ತಾಳೆ. ಆ ಕಾರು ಅವಳಿಗೇ ಎಂದು ಗೊತ್ತಾದಾಗ ಅವಳ ಸಂತೋಷದ ದೃಶ್ಯ ಹೃದಯಸ್ಪರ್ಶಿಯಾಗಿದೆ.
ತಾಯಿಗೂ ಅಷ್ಟೇ ಮಕ್ಕಳೆಂದರೆ ಪ್ರಪಂಚ. ಅವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ಮಗನು ಹುಟ್ಟಿದಾಗಿನಿಂದ ಅವನನ್ನು ಸಾಕಿ-ಸಲುಹಿ ದೊಡ್ಡವನನ್ನಾಗಿ ಮಾಡುವವರೆಗೆ ಪ್ರತಿಕ್ಷಣವೂ ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ಅವಳ ಆ ಪ್ರೀತಿಗೆ ಪ್ರೀತಿಯಿಂದ ಮಗ ಅವಳಿಗಾಗಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾನೆ.
ಇದನ್ನೂ ಓದಿ:
Viral Video: ಗಿಳಿಯ ಹಾಡಿಗೆ ಸೋಲದವರಿದ್ದಾರೆಯೇ? ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು; ವಿಡಿಯೋ ವೈರಲ್
ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್