ಪತಿ ಪತ್ನಿಯರ ನಡುವೆ ಸಣ್ಣ ಪುಟ್ಟ ಜಗಳಗಳು, ಮನಸ್ತಾಪಗಳು ಇದ್ದಿದ್ದೆ. ಭಿನ್ನಭಿಪ್ರಾಯ ಉಂಟಾದಾಗ ಪರಸ್ಪರ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಬೇಕು. ಇದನ್ನು ಮಾಡಲು ವಿಫಲವಾದರೆ ಸಂಬಂಧವು ಹದಗೆಡುತ್ತವೆ. ಇದೇ ಕಾರಣದಿಂದ ಅದೆಷ್ಟೋ ದಂಪತಿಗಳು ದೂರವಾಗಿದ್ದಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನಿಸಿ ವ್ಯಕ್ತಿಯೊಬ್ಬ ಕೋಪದ ಕೈಗೆ ಬುದ್ಧಿಕೊಟ್ಟು ಪತ್ನಿಯ ತಲೆಯನ್ನು ಕಡಿದು, ರುಂಡವನ್ನು ಹಿಡಿದುಕೊಂಡು ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾನೆ.
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಪಟಾಶಪುರದಲ್ಲಿ ಬುಧವಾರ (ಫೆಬ್ರವರಿ 14) ಈ ಆಘಾತಕಾರಿ ಘಟನೆ ನಡೆದಿದ್ದು, ಗೌತಮ್ ಗುಚೈತ್ ಎಂಬವನು ತನ್ನ ಪತ್ನಿಯ ರುಂಡವನ್ನು ಕತ್ತರಿಸಿ, ರುಂಡವನ್ನು ಹಿಡಿದುಕೊಂಡು ಊರಿಡಿ ಮೆರವಣಿಗೆ ಮಾಡಿದ್ದಾನೆ. ಈ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಪಟಾಶಪುರ ಠಾಣೆ ಪೋಲೀಸರು ತಕ್ಷಣ ಆಗಮಿಸಿ ಆತನನ್ನು ಬಂಧಿಸಿದ್ದಾರೆ. ಗೌತಮ್ ಮೊದಲು ಮಾರಕಾಸ್ತ್ರದಿಂದ ಪತ್ನಿ ಫುಲ್ರಾಣಿ ಗುಚೈತ್ ತಲೆ ಕಡಿದು, ರುಂಡವನ್ನು ಹಿಡಿದು ಸಾರ್ವಜನಿಕವಾಗಿ ಬೀದಿಗಳಲ್ಲಿ ತಿರುಗಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವೃತ್ತಿಯಲ್ಲಿ ಬೀದಿ ಬದಿ ವ್ಯಾಪಾರಿಯಾಗಿರುವ ಗೌತಮ್ ಗುಚೈತ್ ಕಳೆದ ಕೆಳದಿನಗಳಿಂದ ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಅನುಮಾನಿಸಿ ಆಕೆಯ ಜೊತೆ ದಿನನಿತ್ಯ ಜಗಳವಾಡುತ್ತಿದ್ದ. ಹೀಗೆ ಮೊನ್ನೆ ಬುಧವಾರ (ಫೆಬ್ರವರಿ 14) ಕೋಪದ ಕೈಗೆ ಬುದ್ಧಿ ಕೊಟ್ಟು ಪತ್ನಿಯ ತಲೆಯನ್ನೇ ಕಡಿದಿದ್ದಾನೆ. ತುಂಡರಿಸಿದ ತಲೆ ಹಾಗೂ ಕೊಲೆ ಮಾಡಲು ಬಳಸಿದ ಆಯುಧವನ್ನು ವಶಪಡಿಸಿಕೊಂಡ ಪೋಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಆರೋಪಿಯ ಪೋಷಕರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಇದು ಎಣ್ಣೆ ಎಫೆಕ್ಟ್, ಕಾಲಿನಲ್ಲಿ ಒಂದು ಡಿಚ್ಚಿ, ಕಾರಿನ ಗಾಜು ಪುಡಿ ಪುಡಿ
ಗೌತಮ್ ಗುಚೈತ್ ನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಇದೇ ಕಾರಣದಿಂದ ಈ ಮೊದಲು ಕೂಡ ಈತ ಹಲವಾರು ದುಸ್ಸಾಹಾಸಕ್ಕೆ ಕೈ ಹಾಕಿದ್ದ. ಹೌದು ಈತ 2021 ರಲ್ಲಿ ಕೋಲ್ಕತ್ತಾದ ಅಲಿಪೋರ್ ಝೂಲಾಜಿಕಲ್ ಗಾರ್ಡನ್ ಅಲ್ಲಿ ಸಿಂಹದ ಬೋನಿಗೆ ಪ್ರವೇಶಿಸಿ ಹುಚ್ಚಾಟ ಮೆರೆದಿದ್ದನು. ಇದೀಗ ಈ ಸೈಕೊ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆ ಪತ್ನಿಯ ತಲೆಯನ್ನೇ ಕಡಿದು, ಬರ್ಬರ ಹತ್ಯೆ ನಡೆಸಿದ್ದಾನೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ