ನೀಲಿ ಕಲರ್​ ಸ್ಕರ್ಟ್​​ ತೊಟ್ಟ ಮಹಿಳೆಯ ಆಕೃತಿ; ಮಟ ಮಟ ಮಧ್ಯಾಹ್ನವೇ ಭಯಗೊಂಡ ನೆಟ್ಟಿಗರು! ವಿಡಿಯೋ ವೈರಲ್

| Updated By: Digi Tech Desk

Updated on: Jul 14, 2021 | 2:36 PM

Viral Video: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆದರು ಬೊಂಬೆ ಯಾವಾಗಲೂ ಕುಣಿಯುತ್ತಲೇ ಇರುತ್ತದೆ. ಇದು ಹೇಗೆ ಸಾಧ್ಯ? ಎಂದು ಕೆಲವರು ಪ್ರಶ್ನಿಸಿದರೆ, ರಾತ್ರಿಯ ಹೊತ್ತಿನಲ್ಲೊಂದೇ ಅಲ್ಲ ಹಗಲಿನಲ್ಲೂ ಇದನ್ನು ನೋಡಿದರೆ ಮನುಷ್ಯರೇ ಭಯಬೀಳುತ್ತಾರೆ ಎನ್ನುತ್ತಿದ್ದಾರೆ ಕೆಲವರು. ವಿಡಿಯೋ ನೋಡಿ..

ನೀಲಿ ಕಲರ್​ ಸ್ಕರ್ಟ್​​ ತೊಟ್ಟ ಮಹಿಳೆಯ ಆಕೃತಿ; ಮಟ ಮಟ ಮಧ್ಯಾಹ್ನವೇ ಭಯಗೊಂಡ ನೆಟ್ಟಿಗರು! ವಿಡಿಯೋ ವೈರಲ್
ಬೆದರು ಬೊಂಬೆ
Follow us on

ಸಾಮಾನ್ಯವಾಗಿ ತೋಟಗಳಲ್ಲಿ ಅಥವಾ ಹೊಸದಾಗಿ ಕಟ್ಟುತ್ತಿರುವ ಮನೆಗೆ ಬೆದರು ಬೊಂಬೆಗಳನ್ನು ನಿಲ್ಲಿಸುವುದು ಭಾರತೀಯರ ನಂಬಿಕೆ. ಬೆದರು ಬೊಂಬೆಯನ್ನು ಎರಡು ಉದ್ದೇಶದಿಂದ ಕಟ್ಟುತ್ತಾರೆ. ಸಾಮಾನ್ಯವಾಗಿ ತೋಟಗಳಿಗೆ ನುಗ್ಗುವ ಕಾಡು ಪ್ರಾಣಿಗಳಿಂದ ಬೆಳೆದ ಬೆಳೆಯನ್ನು ರಕ್ಷಿಸಲು, ಇನ್ನೊಂದು, ತೊಟಕ್ಕೆ ಅಥವಾ ಹೊಸದಾಗಿ ಕಟ್ಟಿದ ಮನೆಗೆ ದೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಬೆದರು ಬೊಂಬೆಗಳನ್ನು ತಯಾರಿಸಿ ಕಟ್ಟುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆದರು ಬೊಂಬೆ ಯಾವಾಗಲೂ ಕುಣಿಯುತ್ತಲೇ ಇರುತ್ತದೆ. ಇದು ಹೇಗೆ ಸಾಧ್ಯ? ಎಂದು ಕೆಲವರು ಪ್ರಶ್ನಿಸಿದರೆ, ರಾತ್ರಿಯ ಹೊತ್ತಿನಲ್ಲೊಂದೇ ಅಲ್ಲ ಹಗಲಿನಲ್ಲೂ ಇದನ್ನು ನೋಡಿದರೆ ಮನುಷ್ಯರೇ ಭಯಬೀಳುತ್ತಾರೆ ಎನ್ನುತ್ತಿದ್ದಾರೆ ಕೆಲವರು. ವಿಡಿಯೋ ನೋಡಿ ನಿಮಗೂ ಆಶ್ಚರ್ಯವಾಗುತ್ತೆ.

ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಹಸಿರು ಬಣ್ಣದ ಸ್ಟೆಟರ್​, ನೀಲಿ ಬಣ್ಣದ ಉದ್ದನೇಯ ಸ್ಕರ್ಟ್​ ತೊಡಿಸಿ, ಮುಖಕ್ಕೆ ಭಯಾನಕ ಚಿತ್ರವನ್ನು ಅಂಟಿಸಲಾಗಿದೆ. ತಲೆಗೆ ಕೆಂಪು ಬಣ್ಣದ ಸ್ಕಾರ್ಪ್​ ಕಟ್ಟಿಕೊಂಡ ಮಹಿಳೆ ಸ್ಪ್ರಿಂಗ್​ ಆಟ ಆಡುತ್ತಿದ್ದಂತೆ ಅನಿಸುತ್ತದೆ. ಥೇಟ್ ಮಹಿಳೆಯಂತೆಯೇ ಕಾಣಿಸುತ್ತಿದೆ ಬೆದರು ಬೊಂಬೆ. ದೂರದಿಂದ ನೋಡಿದರೆ ನಿಜವಾಗಿಯೂ ಭಯವಾಗುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಸ್ಟ್ರಿಂಗ್​ಗೆ ಹಿಡಿಕೆಯನ್ನು ಅಳವಡಿಸಲಾಗಿದೆ. ಬೆದರು ಬೊಂಬೆಯ ಕೈಗಳನ್ನು ಹಿಡಿಕೆಗೆ ಕಟ್ಟಲಾಗಿದೆ. ಸ್ಪ್ರಿಂಗ್​ ಅಲುಗಾಡುತ್ತಿದ್ದಂತೆಯೇ ಬೆದರು ಬೊಂಬೆಯೂ ಕುಣಿಯಲು ಆರಂಭಿಸುತ್ತದೆ. ಕೆಲವು ನಿಜವಾಗಿಯೂ ಭಯವಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದರೆ ಇನ್ನು ಕೆಲವರು ತಮಾಷೆ ಮಾಡುತ್ತಿದ್ದಾರೆ. ಬೆದರು ಬೊಂಬೆ ತಯಾರಿಸಿದವನ ಯೋಚನೆಗೆ ಮೆಚ್ಚಲೇ ಬೇಕು ಎಂದು ಇನ್ನು ಕೆಲವರು ಹೇಳಿದ್ದಾರೆ.

ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. 23 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಲಭ್ಯವಾಗಿವೆ. 5,000 ಕ್ಕೂ ಹೆಚ್ಚು ಷೇರ್​ಗಳನ್ನು ಮಾಡಲಾಗಿದೆ. ರಾತ್ರಿಯಲ್ಲಿ ಇದನ್ನು ನೋಡಿದರೆ ನಿಜವಾಗಿಯೂ ಭಯವಾಗುವಂತಿದೆ.. ಎಚ್ಚರ! ಎಂದು ಹೇಳಿದ್ದಾರೆ. ಇನ್ನೋರ್ವರು, ಸುಲಭದಲ್ಲಿ ಯಾರನ್ನೂ ಬೇಕಾದರೂ ಹೆದರಿಸಬಹುದು, ರಾತ್ರಿಯಲ್ಲಿ ತೋಟ ಕಾಯ್ದುಕೊಳ್ಳಲು ಒಳ್ಳೆಯ ಉಪಾಯವೂ ಹೌದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಓ.. ದೇವರೆ ನಗುವನ್ನು ತಡೆಯಲೇ ಆಗುತ್ತಿಲ್ಲ ಎಂದು ಕೆಲವರು ತಮಾಷೆ ಮಾಡಿದ್ದಾರೆ. ನಕ್ಕು.. ನಕ್ಕು ಕಣ್ಣಲ್ಲಿ ನೀರು ಬಂತು ಎಂದು ಇನ್ನು ಕೆಲವರು ವಿಡಿಯೋ ಕುರಿತಾದ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಕತ್ತಲಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ದೆವ್ವವೂ ಅಲ್ಲ, ಏಲಿಯನ್ ಕೂಡ ಅಲ್ಲ; ಮತ್ತೇನು?!

Viral Photo: ಮರದ ಕೊಂಬೆಗೆ ನೇತಾಡುತ್ತಿದೆ ನಿಗೂಢ ಗೊಂಬೆಯ ಆಕೃತಿ; ಭಯಾನಕ ದೃಶ್ಯದ ಹಿಂದಿನ ಸತ್ಯವೇನು?

Published On - 2:11 pm, Wed, 14 July 21