Viral News: 17 ವರ್ಷದ ಯುವಕನ ಬಾಯಲ್ಲಿದ್ದ 82 ಹಲ್ಲುಗಳನ್ನು ನೋಡಿ ವೈದ್ಯರೇ ಶಾಕ್!

ಬಿಹಾರದ 17 ವರ್ಷದ ನಿತೀಶ್ ಕುಮಾರ್ ಎಂಬ ಯುವಕನ ದವಡೆಯಲ್ಲಿ 82 ಹಲ್ಲುಗಳಿತ್ತು. ನಿತೀಶ್ ಕಳೆದ 5 ವರ್ಷಗಳಿಂದ ಒಡೊಂಟೊಮಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದರು.

Viral News: 17 ವರ್ಷದ ಯುವಕನ ಬಾಯಲ್ಲಿದ್ದ 82 ಹಲ್ಲುಗಳನ್ನು ನೋಡಿ ವೈದ್ಯರೇ ಶಾಕ್!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 14, 2021 | 5:00 PM

ಪಾಟ್ನಾ: ‘ಜಾಸ್ತಿ ಮಾತಾಡಿದ್ರೆ ಹಲ್ಲು ಉದುರಿಸಿಬಿಡ್ತೀನಿ!’ ಕೋಪ ಬಂದಾಗಿ ಈ ರೀತಿ ಧಮ್ಕಿ ಹಾಕುವುದು ಸಾಮಾನ್ಯ. ಅಪ್ಪ, ಅಮ್ಮ, ಅಜ್ಜ, ಸ್ನೇಹಿತರಿಂದ ಆಗಾಗ ಈ ರೀತಿಯ ಡೈಲಾಗ್ ಕೇಳುತ್ತಲೇ ಇರುತ್ತೀರಿ. ಆದರೆ, ಈ ಯುವಕನಿಗೆ ತನ್ನ ಹಲ್ಲು ಉದುರಿಸಿದರೆ ಏನು ಗತಿ ಎಂಬ ಭಯವೇ ಇರಲಿಲ್ಲ. ತನ್ನ ಬಾಯಿಯಲ್ಲಿರುವ ಹಲ್ಲುಗಳು ಒಮ್ಮೆ ಹೋದರೆ ಸಾಕಪ್ಪಾ ಎಂದು ಆತ ಅನೇಕ ಆಸ್ಪತ್ರೆಗಳ ಮೆಟ್ಟಿಲನ್ನು ಹತ್ತಿಳಿದಿಲ್ಲ. ಏಕೆಂದರೆ ಈತನ ಬಾಯಿಯಲ್ಲಿದ್ದುದು ಬರೋಬ್ಬರಿ 82 ಹಲ್ಲುಗಳು! ಬಾಯಿ ತುಂಬ ಹಲ್ಲುಗಳನ್ನೇ ತುಂಬಿಕೊಂಡಿದ್ದ ಈತ ವೈದ್ಯಲೋಕಕ್ಕೂ ಸವಾಲಾಗಿದ್ದ. ಆ ಸವಾಲನ್ನು ಸ್ವೀಕರಿಸಿದ ಪಾಟ್ನಾದ ವೈದ್ಯರು ಆತ ಬಾಯಿಯಲ್ಲಿರುವ ಹೆಚ್ಚುವರಿ ಹಲ್ಲುಗಳನ್ನು ಆಪರೇಷನ್ ಮೂಲಕ ತೆಗೆದಿದ್ದಾರೆ.

ಸಾಮಾನ್ಯವಾಗಿ ಮನುಷ್ಯರ ಬಾಯಿಯಲ್ಲಿ 32 ಹಲ್ಲುಗಳಿರುತ್ತವೆ. ಆದರೆ, ಬಿಹಾರದ 17 ವರ್ಷದ ನಿತೀಶ್ ಕುಮಾರ್ ಎಂಬ ಯುವಕನ ದವಡೆಯಲ್ಲಿ 82 ಹಲ್ಲುಗಳಿತ್ತು. ನಿತೀಶ್ ಕಳೆದ 5 ವರ್ಷಗಳಿಂದ ಒಡೊಂಟೊಮಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಬಾಯಿಯಲ್ಲಿ 82 ಹಲ್ಲುಗಳಿದ್ದುದರಿಂದ ಅವರ ಮುಖ ಕೂಡ ವಿಚಿತ್ರವಾಗಿ ಕಾಣಿಸುತ್ತಿತ್ತು. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಪಡೆಯದ ಕಾರಣದಿಂದ ಈ ಸಮಸ್ಯೆ ಉಲ್ಬಣಗೊಂಡಿತ್ತು. ನೋವು ಹೆಚ್ಚಾಗುತ್ತಿದ್ದಂತೆ ಅನೇಕ ವೈದ್ಯರ ಬಳಿ ಹೋದರೂ ಅವರು ಸರಿಯಾಗಿ ಸ್ಪಂದಿಸಿರಲಿಲ್ಲ.

ಹೀಗಾಗಿ, ಪಾಟ್ನಾದ ಇಂದಿರಾಗಾಂಧಿ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​ಗೆ ತೆರಳಿದ ನಿತೀಶ್ ತನ್ನ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿದ್ದ. ಸ್ಕ್ಯಾನಿಂಗ್ ಮಾಡಿ ನೋಡಿದಾಗ ಆತನ ಬಾಯಿಯಲ್ಲಿ 82 ಹಲ್ಲುಗಳಿರುವುದು ಖಚಿತವಾಗಿತ್ತು. ಆತನ ಬಾಯಿಯಲ್ಲಿದ್ದ ಗೆಡ್ಡೆ ಕ್ಯಾನ್ಸರ್ ಗೆಡ್ಡೆಯಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದುದರಿಂದ ಸತತ 3 ಗಂಟೆಗಳ ಕಾಲ ಆಪರೇಷನ್ ಮಾಡಿ ಹೆಚ್ಚುವರಿ ಹಲ್ಲುಗಳನ್ನು ತೆಗೆದುಹಾಕಿದ್ದಾರೆ.

ಹಾಗಂತ, ಬಾಯಿತುಂಬ ಹಲ್ಲುಗಳಿರುವ ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲೇನಲ್ಲ. 2019ರಲ್ಲಿ ಚೆನ್ನೈನ ವೈದ್ಯರ ತಂಡ ಆಪರೇಷನ್ ಮಾಡಿ 7 ವರ್ಷದ ಬಾಲಕ ರವೀಂದ್ರನಾಥನ ಬಾಯಿಯಿಂದ 527 ಹಲ್ಲುಗಳನ್ನು ಹೊರಗೆ ತೆಗೆದಿದ್ದರು! ಇದೀಗ ಪಾಟ್ನಾದಲ್ಲಿ ಕೂಡ ಅಂತದ್ದೇ ಮತ್ತೊಂದು ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ: Health Tips: ಹಲ್ಲು ನೋವಿನ ಸಮಸ್ಯೆಯಿಂದ ನರಳುತ್ತಿದ್ದೀರಾ? ಇಲ್ಲಿದೆ ಪರಿಹಾರ

Health Tips: ಕೋವಿಡ್ ಲಸಿಕೆಯ ಎರಡನೇ ಡೋಸ್​ನಲ್ಲಿ ಅಡ್ಡ ಪರಿಣಾಮಗಳು ಜಾಸ್ತಿ ಏಕೆ?; ಇಲ್ಲಿದೆ ಕಾರಣ

(Patna Doctors Removed 82 Teeth From Jaw of 17 Year Old Bihar Man)

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?