Health Tips: ಕೋವಿಡ್ ಲಸಿಕೆಯ ಎರಡನೇ ಡೋಸ್ನಲ್ಲಿ ಅಡ್ಡ ಪರಿಣಾಮಗಳು ಜಾಸ್ತಿ ಏಕೆ?; ಇಲ್ಲಿದೆ ಕಾರಣ
Covid Vaccine Side Effects: ಬೇರೆ ಇಂಜೆಕ್ಷನ್ ಹಾಕಿಸಿಕೊಂಡಾಗ ನಿಮ್ಮ ದೇಹದಲ್ಲಿ ಆಗುವ ಪರಿಣಾಮಗಳಿಗಿಂತಲೂ ಕೋವಿಡ್ ಲಸಿಕೆಯ ಪರಿಣಾಮ ಭಿನ್ನವಾಗಿರುತ್ತದೆ. ಹಾಗಂತ ಇದಕ್ಕೆ ಹೆದರಬೇಕಾದ ಅಗತ್ಯವಿಲ್ಲ.
ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ತಲೆನೋವು, ಜ್ವರ, ಮೈ-ಕೈ ನೋವು, ವಾಂತಿ ಹೀಗೆ ನಾನಾ ರೀತಿಯ ಅಡ್ಡಪರಿಣಾಮಗಳಾಗುವುದು ಸಾಮಾನ್ಯ. ಒಂದೆರಡು ದಿನದಲ್ಲಿ ಆ ನೋವೆಲ್ಲ ಗುಣವಾಗುತ್ತದೆ. ನೀವು ಕೊರೋನಾ ಲಸಿಕೆ (Covid-19 Vaccine) ಹಾಕಿಸಿಕೊಂಡಿದ್ದೀರಾ? ಸರ್ಕಾರದಿಂದಲೇ ಉಚಿತವಾಗಿ ಕೋವಿಡ್ ಲಸಿಕೆ (Free Vaccine) ನೀಡುತ್ತಿರುವುದರಿಂದ ಬಹುತೇಕರು ಈಗಾಗಲೇ ಲಸಿಕೆ ಹಾಕಿಸಿಕೊಂಡಿರುತ್ತೀರಿ. ಒಂದುವೇಳೆ ಇನ್ನೂ ಲಸಿಕೆ ಹಾಕಿಸಿಕೊಳ್ಳುವ ಮನಸು ಮಾಡಿಲ್ಲವೆಂದರೆ ತಡಮಾಡದೆ ಹಾಕಿಸಿಕೊಳ್ಳಿ. ಕೊರೋನಾ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡವರಿಗಿಂತಲೂ ಎರಡನೇ ಡೋಸ್ (Second Dose Vaccine Side effects) ಹಾಕಿಸಿಕೊಂಡ ಮೇಲೆ ಹೆಚ್ಚು ಸೈಡ್ ಎಫೆಕ್ಟ್ಗಳಾಗುತ್ತವೆ. ಹಾಗಾದರೆ, ಇದಕ್ಕೆ ಕಾರಣವೇನು? ಇಲ್ಲಿದೆ ಪೂರ್ತಿ ಮಾಹಿತಿ…
ಕೊರೋನಾ ಲಸಿಕೆ ಹಾಕಿಸಿಕೊಂಡಾಗ ಉಂಟಾಗುವ ಅಡ್ಡಪರಿಣಾಮಗಳಿಂದ ಕಿರಿಕಿರಿ ಆಗುವುದು ಸಹಜ. ಕೋವಿಡ್ ಲಸಿಕೆಗೆ ಒಬ್ಬೊಬ್ಬರ ದೇಹ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಮೊದಲ ಡೋಸ್ಗಿಂತಲೂ 2ನೇ ಡೋಸ್ ಹಾಕಿಸಿಕೊಂಡಾಗ ನಮ್ಮ ದೇಹ ಅದಕ್ಕೆ ವಿಭಿನ್ನವಾಗಿ ಸ್ಪಂದಿಸುತ್ತದೆ. ಹಾಗಂತ ಒಂದೇ ಡೋಸ್ ಹಾಕಿಸಿಕೊಂಡು ಸುಮ್ಮನಾಗಬೇಡಿ. ಕೊರೋನಾ ವಿರುದ್ಧ ಹೋರಾಡಿ, ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಎರಡನೇ ಡೋಸ್ ಬಹಳ ಮುಖ್ಯವಾದುದು.
ಎರಡನೇ ಡೋಸ್ ಹಾಕಿಸಿಕೊಂಡ ನಂತರವಷ್ಟೇ ನಿಮ್ಮ ದೇಹ ಕೊರೋನಾ ವಿರುದ್ಧ ಹೋರಾಡಲು ಸಂಪೂರ್ಣವಾಗಿ ಸಜ್ಜಾಗುತ್ತದೆ. ಬೇರೆ ಇಂಜೆಕ್ಷನ್ ಹಾಕಿಸಿಕೊಂಡಾಗ ನಿಮ್ಮ ದೇಹದಲ್ಲಿ ಆಗುವ ಪರಿಣಾಮಗಳಿಗಿಂತಲೂ ಕೋವಿಡ್ ಲಸಿಕೆಯ ಪರಿಣಾಮ ಭಿನ್ನವಾಗಿರುತ್ತದೆ. ಹಾಗಂತ ಇದಕ್ಕೆ ಹೆದರಬೇಕಾದ ಅಗತ್ಯವಿಲ್ಲ ಎಂದು ವೈದ್ಯರೇ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಒಬ್ಬೊಬ್ಬರ ದೇಹದ ಮೇಲೆ ಕೋವಿಡ್ ಲಸಿಕೆಗಳು ಒಂದೊಂದು ರೀತಿಯಲ್ಲಿ ಪ್ರಭಾವ ಬೀರುತ್ತವೆ. ನಮ್ಮ ದೇಹದ ಇಮ್ಯೂನ್ ಸಿಸ್ಟಂ ಒಂದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಒಬ್ಬೊಬ್ಬರ ದೇಹದ ಕಾರ್ಯವೈಖರಿ ಒಂದೊಂದು ರೀತಿಯಲ್ಲಿರುತ್ತದೆ.
ಕೊರೋನಾ ಲಸಿಕೆಯಿಂದ ದೇಹದಲ್ಲಿ ಉಂಟಾಗುವ ಅಡ್ಡ ಪರಿಣಾಮಗಳಿಗೆ ನಮ್ಮ ಜೆನೆಟಿಕ್, ಹಾರ್ಮೋನ್ಗಳು ಕೂಡ ಕಾರಣವಾಗಿರುತ್ತವೆ. ಇದೇ ಕಾರಣಕ್ಕೆ ಪುರುಷರಿಗಿಂತಲೂ ಮಹಿಳೆಯರಲ್ಲಿ ಕೋವಿಡ್ ಲಸಿಕೆಯ ಸೈಡ್ ಎಪೆಕ್ಟ್ ಹೆಚ್ಚಾಗಿರುತ್ತವೆ ಮತ್ತು ವಿಭಿನ್ನವಾಗಿರುತ್ತವೆ. ಮಹಿಳೆಯರ ಹಾರ್ಮೋನ್ನಲ್ಲಿ ವ್ಯತ್ಯಾಸವಾಗುತ್ತಿರುವುದು ಇದಕ್ಕೆ ಮುಖ್ಯ ಕಾರಣ.
ಕೊರೋನಾ ಲಸಿಕೆಯ ಮೊದಲ ಡೋಸ್ ನಿಮ್ಮ ದೇಹದ ಉರಿಯೂತದ ಪರಿಣಾಮವನ್ನು ಕಡಿಮೆಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ, ಎರಡನೇ ಡೋಸ್ ಅದಕ್ಕೆ ಮೆಮೊರಿ ಸೆಲ್ಗಳನ್ನು ತುಂಬುತ್ತದೆ. ಎರಡನೇ ಡೋಸ್ ಲಸಿಕೆ ನಮ್ಮ ದೇಹದೊಳಗೆ ಹೋಗಿ ರೋಗನಿರೋಧಕ ಶಕ್ತಿ ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದ ಸೈಡ್ ಎಫೆಕ್ಟ್ ಕೂಡ ಹೆಚ್ಚಾಗಿರುತ್ತದೆ. ಹಾಗಂತ ಅಡ್ಡ ಪರಿಣಾಮಕ್ಕೆ ಹೆದರಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಇರಬೇಡಿ!
ಇದನ್ನೂ ಓದಿ: Haridwar: ಕೊರೋನಾಗೆ ಡೋಂಟ್ ಕೇರ್; ಹರಿದ್ವಾರದ ಗಂಗಾ ತೀರದಲ್ಲಿ ಸೇರಿದ ಭಕ್ತರ ದಂಡನ್ನು ನೋಡಿದರೆ ಶಾಕ್ ಆಗ್ತೀರ
ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?
(Why Some People Have Stronger Side Effects of Second Dose of COVID-19 Vaccine the First Dose)
Published On - 4:09 pm, Wed, 14 July 21