Health Tips: ಹಲ್ಲು ನೋವಿನ ಸಮಸ್ಯೆಯಿಂದ ನರಳುತ್ತಿದ್ದೀರಾ? ಇಲ್ಲಿದೆ ಪರಿಹಾರ
Garlic Benefits: ನೈಸರ್ಗಿಕವಾಗಿ ಸೋಂಕು ನಿವಾರಕವಾದ ಉಪ್ಪು ನೀರು ಹಲ್ಲುಗಳ ಮಧ್ಯೆ ನಿಲುಕಿಬಿದ್ದ ಆಹಾರವನ್ನು ಹೊರಹಾಕುತ್ತದೆ. ಉಪ್ಪು ನೀರಿನ ಮೂಲಕ ಚಿಕಿತ್ಸೆ ಮಾಡುವುದರಿಂದ ಉರಿಯೂತ, ಬಾಯಿಯಲ್ಲಿ ಎದ್ದ ಹುಣ್ಣುಗಳು ವಾಸಿಯಾಗುತ್ತವೆ.
ಸಾಮಾನ್ಯವಾಗಿ ಅಡುಗೆಗೆ ಬೆಳ್ಳುಳ್ಳಿ ಹಾಕದೇ ರುಚಿ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಸ್ಪೈಸಿ ರೆಸಿಪಿಗಳನ್ನು ಮಾಡಿದಾಗ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಇರಲೇಬೇಕು. ಇದರ ಜತೆ ಜತೆಗೆ ಬೆಳ್ಳುಳ್ಳಿಯಿಂದ ಆರೋಗ್ಯಕ್ಕೂ ಉತ್ತಮ ಪ್ರಯೋಜನಗಳಿವೆ. ಅದರಲ್ಲಿಯೂ ಮುಖ್ಯವಾಗಿ ಹಲ್ಲು ನೋವು ನಿವಾರಣೆಗೆ ಬೆಳ್ಳುಳ್ಳಿ ಉತ್ತಮ ಔಷಧಿಯಾಗಿದೆ.
ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಬೆಳ್ಳುಳ್ಳಿಯಲ್ಲಿದೆ. ಬೆಳ್ಳುಳ್ಳಿ ಚೂರು ಮತ್ತು ಲವಂಗವನ್ನು ಪೇಸ್ಟ್ ಮಾಡಿ ಅದನ್ನು ಹಲ್ಲು ನೋವಿರುವ ಜಾಗದಲ್ಲಿ ಸ್ವಲ್ಪ ಸಮಯದವರೆಗೆ ಇಟ್ಟುಕೊಳ್ಳುವುದರ ಮೂಲಕ ಬಹುಬೇಗ ಹಲ್ಲು ನೋವು ನಿವಾರಣೆಯಾಗುತ್ತದೆ. ಇದರ ಜೊತೆಗೆ ಸ್ವಲ್ಪ ಉಪ್ಪನ್ನೂ ಸಹ ಸೇರಿಸಿಕೊಳ್ಳಬಹುದು.
ಇದಲ್ಲದೇ ಹಲ್ಲು ನೋವಿಗೆ ಲವಂಗವನ್ನು ಬಳಸುವುದು ಅನಾದಿ ಕಾಲದಿಂದಲೂ ನಮಗೆ ತಿಳಿದಿರುವ ವಿಷಯ. ಲವಂಗ ಎಣ್ಣೆಯನ್ನು ಅಥವಾ ಬಿಸಿ ನೀರಿನಲ್ಲಿ ಕುದಿಸಿದ ಲವಂಗದ ಮೂಲಕ ಮೌತ್ವಾಶ್ ಕೂಡಾ ಮಾಡಬಹುದು. ಹಲ್ಲು ನೋವಿದ್ದಾಗ ಉಪ್ಪು ನೀರಿನಲ್ಲಿ ಬಾಯಿ ತೊಳೆಯಿರಿ. ಕುದಿಯುತ್ತಿರುವ ಬಿಸಿ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ನಂತರ ಮೌತ್ವಾಶ್ ಮಾಡುವುದರಿಂದಲೂ ಹಲ್ಲು ನೋವಿನ ಉಪಶಮನ ಮಾಡಬಹುದು.
ನೈಸರ್ಗಿಕವಾಗಿ ಸೋಂಕು ನಿವಾರಕವಾದ ಉಪ್ಪು ನೀರು ಹಲ್ಲುಗಳ ಮಧ್ಯೆ ಸಿಲುಕಿ ಬಿದ್ದ ಆಹಾರವನ್ನು ಹೊರ ಹಾಕುತ್ತದೆ. ಉಪ್ಪು ನೀರಿನ ಮೂಲಕ ಚಿಕಿತ್ಸೆ ಮಾಡುವುದರಿಂದ ಉರಿಯೂತ, ಬಾಯಿಯಲ್ಲಿ ಎದ್ದ ಹುಣ್ಣುಗಳು ವಾಸಿಯಾಗುತ್ತವೆ. ಬಾಯಿಯ ಫ್ರೆಶ್ನೆಸ್ ಜತೆಗೆ ಆಹಾರದಿಂದ ಉತ್ಪತ್ತಿಯಾದ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಲು ಈ ಚಿಕಿತ್ಸೆ ಸಹಾಯ ಮಾಡುತ್ತದೆ. ಮನೆಯಲ್ಲಿಯೇ ಸಿಗುವ ಅದೆಷ್ಟೋ ಮದ್ದುಗಳಿಂದ ಆರೋಗ್ಯದ ಆರೈಕೆ ಮಾಡಿಕೊಳ್ಳಬಹುದಾಗಿದೆ.
ನಿಮ್ಮ ಆರೋಗ್ಯದಲ್ಲಿ ಏನೇ ಏರುಪೇರು ಕಂಡುಬಂದರೂ ತಕ್ಷಣ ವೈದ್ಯರಲ್ಲಿ ಪರೀಕ್ಷೆ ಮಾಡಿಕೊಳ್ಳಿ. ಅದರಲ್ಲಿಯೂ ಈಗಿರುವ ಕೊರೊನಾ ಸಾಂಕ್ರಾಮಿಕದಿಂದ ಬಹಳಷ್ಟು ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ನಡುವೆ ನಿಮ್ಮ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ. ಆರೋಗ್ಯದ ಕುರಿತಾಗಿ ಕಾಳಜಿ ಜತೆಗೆ ನಿಮ್ಮ ದೇಹದ ಸದೃಢತೆಯನ್ನು ಹೆಚ್ಚಿಸಿಕೊಳ್ಳುವತ್ತ ನಿಮ್ಮ ಪ್ರಯತ್ನವಿರಲಿ.
ಇದನ್ನೂ ಓದಿ:
Toothpaste Benefits: ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಟೂತ್ಪೇಸ್ಟ್ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ
Published On - 9:49 am, Fri, 25 June 21