Health Tips: ಅಕ್ಕಿ ಬೇಯಿಸಿದ ನೀರನ್ನು ಕುಡಿಯುವ ಅಭ್ಯಾಸ ಇದೆಯೇ? ಆರೋಗ್ಯ ಮಾತ್ರವಲ್ಲದೇ ಸೌಂದರ್ಯವನ್ನೂ ಹೆಚ್ಚಿಸುತ್ತದೆ
Rice Water: ಬಿಸಾಡುತ್ತಿರುವ ಅಕ್ಕಿ ಬೇಯಿಸಿ ನಂತರ ಉಳಿದ ನೀರನ್ನು ಸೇವಿಸುವುದರಿಂದ ಆರೋಗ್ಯದ ಆರೈಕೆ ಮಾಡಿಕೊಳ್ಳಬಹುದು.
ಈಗೆಲ್ಲಾ ಕುಕ್ಕರ್ನಲ್ಲಿಯೇ ಅನ್ನ ತಯಾರಿಸುವುದು ಹೆಚ್ಚು. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಪಾತ್ರೆಯಲ್ಲಿ ಅಕ್ಕಿಗೆ ನೀರು ಹಾಕಿ ಕುದಿಸಿ ನಂತರ ನೀರನ್ನು ಬಾಗಿಸಿ ಅನ್ನ ಮಾಡುವ ಪ್ರಕ್ರಿಯೆ ಇದೆ. ಹೀಗೆ ತೆಗೆದ ತಿಳಿಯನ್ನು ಸಾಮಾನ್ಯವಾಗಿ ಹಸುವಿಗೆ ಗಂಜಿಯಾಗಿ ನೀಡುತ್ತೇವೆ. ಆದರೆ, ಇದನ್ನು ಮನುಷ್ಯರೂ ಸೇವಿಸಬಹುದು. ಇದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳೂ ಇವೆ. ಈ ಕುರಿತು ತಿಳಿದುಕೊಳ್ಳೋಣ.
ಮನೆಯಲ್ಲಿ ಸಿಗುವ ಅದೆಷ್ಟೋ ಸಾಮಗ್ರಿಗಳಿಂದ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಇಂತಹ ಆರೋಗ್ಯಯುತ ಆಹಾರವನ್ನು ಬದಿಗಿಟ್ಟು ಬಿಸಿ ಬಿಸಿ ಕುರುಕಲು ಆಹಾರವನ್ನೇ ಹೆಚ್ಚು ಸೇವಿಸುತ್ತೇವೆ. ಅದರ ಬದಲಾಗಿ ಅಕ್ಕಿ ಬೇಯಿಸಿದ ನಂತರ ಬಿಸಾಡುವ ನೀರನ್ನು ಸೇವಿಸುವುದರಿಂದ ಆರೋಗ್ಯ ಆರೈಕೆ ಮಾಡಿಕೊಳ್ಳಬಹುದು.
ಅಕ್ಕಿ ಬೇಯಿಸಿದ ನೀರಿನ ಸೇವನೆಯ ಪ್ರಯೋಜನಗಳು
*ಅಕ್ಕಿ ಬೇಯಿಸಿದ ನೀರನ್ನು ಸೇವಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ
*ದೇಹದ ಉಷ್ಟತೆಯನ್ನು ನಿಯಂತ್ರಿಸುತ್ತದೆ
*ಜ್ವರ, ನೆಗಡಿಯಂತಹ ಸಮಸ್ಯೆಗಳು ವಾಸಿಯಾಗುತ್ತದೆ
*ಗಂಜಿ ಖನಿಜ, ಜೀವಸತ್ವಗಳು ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ
*ಹೊಟ್ಟೆಯ ಉರಿಯೂತ ಹೊಂದಿರುವವರಿಗೆ ಇದು ಉತ್ತಮ ಔಷಧಿ
*ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ
*ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು
*ವಾಂತಿ ಅತಿಸಾರದಿಂದ ಬಳಲುತ್ತಿರುವವರು ಅಕ್ಕಿ ಬೇಯಿಸಿದ ನೀರು (ಗಂಜಿ) ಸೇವಿಸಬಹುದು
*ಇದು ಅತಿಸಾರ ಸಮಸ್ಯೆಯನ್ನು ಕಡಿಮೆ ಮಾಡುವುದರ ಜತೆಗೆ ಹೊಟ್ಟೆ ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ
*ಅಕ್ಕಿ ಬೇಯಿಸಿದ ನೀರು ಹಾಗೆ ಕುಡಿಯಲು ಸಪ್ಪೆ ಅನಿಸಿದರೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಡಿಯಬಹುದು
*ಆರೋಗ್ಯವನ್ನು ಮಾತ್ರವಲ್ಲದೇ ಸೌಂದರ್ಯವನ್ನೂ ಹೆಚ್ಚಿಸುತ್ತದೆ
*ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
*ಮುಖದ ಕಲೆಗಳ ಜತೆಗೆ ತುರಿಕೆಯಂತಹ ಸಮಸ್ಯೆಯಿಂದ ನಿವಾರಣೆ ಹೊಂದಬಹುದು
*ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು
ಇದನ್ನೂ ಓದಿ:
Health Tips: ಆಹಾರ ಕ್ರಮ ಸರಿಯಾಗಿದ್ದಲ್ಲಿ ಆರೋಗ್ಯವೂ ಸುಧಾರಿಸುತ್ತದೆ; ಇಲ್ಲಿದೆ ಕೆಲವು ಸಲಹೆಗಳು
ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?