Children Health: ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಕೆಲವು ಸಲಹೆಗಳು

ಮಕ್ಕಳ ಆರೋಗ್ಯ: ಮೊಬೈಲ್​ಫೋನ್​ ಮತ್ತು ಕಂಪ್ಯೂಟರ್​ಗಳ ಬಳಕೆಯ ಬದಲಾಗಿ ದೈಹಿಕ ವ್ಯಾಯಾಮವಾಗುವ ಒಳಾಂಗಣ ಆಟವನ್ನು ಆಡಿಸಿ.

Children Health: ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಕೆಲವು ಸಲಹೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jun 25, 2021 | 9:17 AM

ಸಾಮಾನ್ಯವಾಗಿ ಪೋಷಕರಿಗೆ ಮಕ್ಕಳ ಕುರಿತಾಗಿ ಕಾಳಜಿ ಹೆಚ್ಚಾಗಿಯೇ ಇರುತ್ತದೆ. ಚಿಕ್ಕವರಿದ್ದಾಗಿನಿಂದ ಅವರ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿಯ ಜತೆಗೆ ಸದೃಢ ಆರೋಗ್ಯದ ಬೆಳೆವಣಿಗೆಯ ಬಗ್ಗೆ ಗಮನವಹಿಸುತ್ತೇವೆ. ಮಕ್ಕಳು ಎತ್ತರದ ಬೆಳವಣಿಗೆಯ ಕುರಿತಾಗಿ ಪ್ರತಿನಿತ್ಯವೂ ಒಂದಲ್ಲಾ ಒಂದು ರೀತಿಯ ಆರೋಗ್ಯಕರ ಅಭ್ಯಾಸವನ್ನು ರೂಢಿ ಮಾಡಿಸುತ್ತೇವೆ. ಹಾಗಿರುವಾಗ ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನು ಮಕ್ಕಳಿಗೆ ಹೇಳಿಕೊಡಿ.

ಕೊರೊನಾ ಸೋಂಕಿನ​ ಹಾವಳಿಯಿಂದಾಗಿ ಶಾಲೆಗಳೆಲ್ಲ ಮುಚ್ಚಲ್ಪಟ್ಟಿದೆ. ಆನ್​ಲೈನ್​ ತರಗತಿಯ ಮೂಲಕ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಹೀಗಿರುವಾಗ ಮನೆಯಲ್ಲಿಯೇ ಇರುವ ಮಕ್ಕಳಿಗೆ ಯೋಗ, ವ್ಯಾಯಾಮ ಅಭ್ಯಾಸವನ್ನು ಮಾಡಿಸಿ. ಇದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವ ಜತೆಗೆ ಆರೋಗ್ಯವೂ ಕೂಡಾ ಚೆನ್ನಾಗಿ ಬೆಳೆಯಲು ಸಹಾಯವಾಗುತ್ತದೆ.

ಮಕ್ಕಳ ಎತ್ತರವನ್ನು ಹೆಚ್ಚಿಸಲು ಯೋಗಾಸನ ಬಹಳ ಸೂಕ್ತವಾಗಿದೆ. ಅದರಲ್ಲಿಯೂ ಹೆಚ್ಚಾಗಿ ಮಗುವಿಗೆ ಬೆಳಿಗ್ಗೆ ಯೋಗ ಮಾಡಿಸುವ ಅಭ್ಯಾಸವನ್ನು ಹೇಳಿಕೊಡುವುದರ ಮೂಲಕ ಮಕ್ಕಳ ಆರೋಗ್ಯವನ್ನು ಸುಧಾರಿಸಬಹುದು. ಜತೆಗೆ ಮಕ್ಕಳು ಎತ್ತರವಾಗಿ ಸದೃಢವಾಗಿ ಬೆಳೆಯುತ್ತಾರೆ.

ಮೊಬೈಲ್​ಫೋನ್​ ಮತ್ತು ಕಂಪ್ಯೂಟರ್​ಗಳ ಬಳಕೆಯ ಬದಲಾಗಿ ದೈಹಿಕ ವ್ಯಾಯಾಮವಾಗುವ ಒಳಾಂಗಣ ಆಟವನ್ನು ಆಡಿಸಿ. ಬ್ಯಾಡ್ಮಿಂಟನ್, ಟೆನಿಸ್​, ಸೈಕ್ಲಿಂಗ್​, ಓಟ, ಸ್ವಿಮ್ಮಿಂಗ್​ ಈ ತರಹದ ವ್ಯಾಯಾಮವಾಗುವ ಆಟಗಳನ್ನು ಆಡಿಸಿ. ಇದು ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಆಟದ ಜತೆಗೆ ಮಕ್ಕಳ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಆಟಗಳನ್ನು ಆಡಿಸಿ. ಇದರಿಂದ ಮಕ್ಕಳಿಗೆ ಖುಷಿಯೂ ಆಗಬೇಕು, ಜತೆಗೆ ಮಕ್ಕಳ ಸದೃಢ ಬೆಳವಣಿಗೆಗೆ ಸಹಾಯವಾಗಬೇಕು. ಈಗೀಗ ಮಕ್ಕಳು ಮೊಬೈಲ್​ಫೋನ್​ಗಳಿಗೆ ಒಗ್ಗಿಕೊಳ್ಳುವುದು ಹೆಚ್ಚು. ಆದ್ದರಿಂದ ಆದಷ್ಟು ಲ್ಯಾಪ್​ಟಾಪ್​ ಮತ್ತು ಮೊಬೈಲ್​ಫೋನ್​ಗಳಿಂದ ಅವರನ್ನು ದೂರವಿರಿಸಿ. ಮನೆಯ ಅಂಗಳದಲ್ಲಿ ಆಡುವಂತಹ ಆಟಗಳಲ್ಲಿ ಮಕ್ಕಳು ಹೆಚ್ಚು ತೊಡಗಿರುವಂತೆ ಮಾಡಿ.

ಇದನ್ನೂ ಓದಿ:

Health Tips: ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸದಿಂದ ಈ ನಾಲ್ಕು ಕಾಯಿಲೆಗಳನ್ನು ದೂರ ಇಡಬಹುದು

ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ