Viral Video : ತೈವಾನ್​ನಲ್ಲಿ ಭೂಕಂಪ; ಆಟಿಕೆಯಂತೆ ಅಲ್ಲಾಡಿದ ರೈಲು

| Updated By: ಶ್ರೀದೇವಿ ಕಳಸದ

Updated on: Sep 19, 2022 | 11:01 AM

Earthquake : ತೈವಾನ್​ನ ರೈಲ್ವೇಸ್ಟೇಷ್​ನಲ್ಲಿ ನಿಂತಿದ್ದ ರೈಲು ಆಟಿಕೆಯಂತೆ ಅಲ್ಲಾಡಿದ ವಿಡಿಯೋ ವೈರಲ್ ಆಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಸುನಾಮಿಯೂ ಏಳುವ ಸಾಧ್ಯತೆ ಇದೆ.

Viral Video : ತೈವಾನ್​ನಲ್ಲಿ ಭೂಕಂಪ; ಆಟಿಕೆಯಂತೆ ಅಲ್ಲಾಡಿದ ರೈಲು
ತೈವಾನ್​ನಲ್ಲಿ ಭೂಕಂಪಕ್ಕೊಳಗಾದಾಗ ಅಲ್ಲಾಡಿದ ರೈಲು
Follow us on

Viral Video : ತೈವಾನ್​ನಲ್ಲಿ ನಿನ್ನೆ ತೀವ್ರ ಭೂಕಂಪ ಸಂಭವಿಸಿದೆ. ಆಗ್ನೇಯ ಕರಾವಳಿಯಲ್ಲಿ ಸಂಭವಿಸಿದ ಈ ಭೂಕಂಪ 6.9 ತೀವ್ರತೆಯಿಂದ ಕೂಡಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಭೂಕಂಪದ ಹಿನ್ನೆಲೆಯಲ್ಲಿ ಜಪಾನ್​ ಸುನಾಮಿಯ ಎಚ್ಚರಿಕೆಯನ್ನೂ ನೀಡಿದೆ. ಎನ್‌ಡಿಟಿವಿ ಪತ್ರಕರ್ತ ಉಮಾಶಂಕರ್ ಸಿಂಗ್ ಹಂಚಿಕೊಂಡಿರುವ ವಿಡಿಯೋದಲ್ಲಿ, ರೈಲುನಿಲ್ದಾಣದಲ್ಲಿ ನಿಂತಿರುವ ರೈಲು ಆಟಿಕೆ ಸಾಮಾನಿನಂತೆ ಅಲುಗಾಡುತ್ತಿರುವುದನ್ನು ನೋಡಬಹುದಾಗಿದೆ.

ರಾಯಿಟರ್ಸ್ ವರದಿಯ ಪ್ರಕಾರ, ಭೂಕಂಪವು ತೈತುಂಗ್​ನ ಉತ್ತರ ಭಾಗದಲ್ಲಿ ಮಧ್ಯಾಹ್ನ 2.44ಕ್ಕೆ ಸಂಭವಿಸಿದೆ. 10 ಕಿ.ಮೀ ಆಳದಿಂದ ಉಂಟಾದ ಕಂಪನವು ಸುಮಾರು 50 ಕಿ.ಮೀ. ಪ್ರದೇಶವನ್ನು ಆವರಿಸಿಕೊಂಡಿತ್ತು. ಯುಲಿ ಪ್ರದೇಶದಲ್ಲಿ ಶನಿವಾರ ಭೂಕಂಪನವು ಸಂಭವಿಸಿದ್ದು ನಂತರ ಅಲ್ಲಲ್ಲಿ ಭೂಕಂಪಗಳು  ಸಂಭವಿಸಲಾರಂಭಿಸಿದವು. ಯುಲಿಯಲ್ಲಿ ಮೊದಲ ಕಂಪನವಾದಾಗ ತೀವ್ರತೆ 6.6 ಇತ್ತು. ಆದರೆ ಭಾನುವಾರದ ಹೊತ್ತಿಗೆ ಈ ಕಂಪನ ಪ್ರಬಲವಾಗುತ್ತ ಹೋಯಿತು ಎಂದು ವರದಿಗಳು ತಿಳಿಸಿವೆ.

ಫ್ಯೂಜಿಯಾನ್, ಗುವಾಂಗ್‌ಡಾಂಗ್, ಜಿಯಾಂಗ್‌ಸು ಮತ್ತು ಶಾಂಘೈ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಕಂಪನ ಸ್ಪಷ್ಟವಾಗಿ ಕಂಡುಬಂದಿದೆ. ಈ ಎಲ್ಲ ಪರಿಣಾಮವಾಗಿ ಸುನಾಮಿ ಸಂಭವಿಸುವ ಅಪಾಯವಿದ್ದು, ಇಂದು ಸಂಜೆ ಸುಮಾರು 4 ಗಂಟೆಗೆ ಒಂದು ಮೀಟರ್‌ನಷ್ಟು ಎತ್ತರದ ಅಲೆಗಳುಂಟಾಗುವ ನಿರೀಕ್ಷೆ ಇದೆ. ಈ ಪರಿಣಾಮವಾಗಿ ಜಪಾನಿನ ಹವಾಮಾನ ಸಂಸ್ಥೆ ತೈವಾನ್ ಸುತ್ತಮುತ್ತಲಿನ ದ್ವೀಪಗಳಿಗೆ ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡಿದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:59 am, Mon, 19 September 22