AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇಲ್ಲಿ ಸುಂದರಿಯರ ಬೆತ್ತಲೆ ದೇಹದ ಮೇಲೆ ಬಡಿಸಲಾಗುತ್ತದೆ ಭೋಜನ; ಏನಿದು ನ್ಯೋಟೈಮೊರಿ ಡಿನ್ನರ್‌ ಪದ್ಧತಿ

Nyotaimori Dinner At Taiwan: ತೈವಾನ್‌ನ ಖಾಸಗಿ ಕ್ಲಬ್‌ ಒಂದರಲ್ಲಿ ನಗ್ನ ಯುವತಿಯರ ದೇಹದ ಮೇಲೆ ಆಹಾರ ಸರ್ವ್ ಮಾಡುವ ನ್ಯೋಟೈಮೊರಿ ಎಂಬ ವಿಚಿತ್ರ ಭೋಜನ ಪಾರ್ಟಿ ಆಯೋಜನೆ ಮಾಡಿ ಪಜೀತಿಗೆ ಸಿಲುಕಿದೆ. ಇದೀಗ ಈ ಕ್ಲಬ್‌ನ ಕೆಲವು ಫೋಟೋಗಳು ಆನ್‌ಲೈನ್‌ ಅಲ್ಲಿ ಲೀಕ್‌ ಆಗಿದೆ. ಈ ಬಗ್ಗೆ ಭಾರೀ ವಿರೋಧಗಳು ಕೇಳಿಬಂದಿದ್ದು, ತಕ್ಷಣ ಪೊಲೀಸ್‌ ಅಧಿಕಾರಿಗಳು ಕ್ಲಬ್‌ ವಿರುದ್ಧ ಸೂಕ್ತ ತನಿಖೆ ನಡೆಸಲು ಆರಂಭಿಸಿದ್ದಾರೆ.

Viral: ಇಲ್ಲಿ ಸುಂದರಿಯರ  ಬೆತ್ತಲೆ ದೇಹದ ಮೇಲೆ ಬಡಿಸಲಾಗುತ್ತದೆ ಭೋಜನ; ಏನಿದು ನ್ಯೋಟೈಮೊರಿ ಡಿನ್ನರ್‌ ಪದ್ಧತಿ
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on:Jun 30, 2024 | 3:58 PM

Share

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರನ್ನು ಸೆಳೆಯಲು ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಕೆಲವು ಹೋಟೆಲ್‌ಗಳಲ್ಲಿ ಕಡಿಮೆ ಬೆಲೆಗೆ ಉತ್ತಮ ಆಹಾರವನ್ನು ನೀಡಿದರೆ ಇನ್ನೂ ಕೆಲವು ರೆಸ್ಟೋರೆಂಟ್‌ಗಳಲ್ಲಿ ವೆರೈಟಿ ವೆರೈಟಿ ತಟ್ಟೆಗಳಲ್ಲಿ ರುಚಿಕರ ಫುಡ್‌ ಸರ್ವ್‌ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕಸರತ್ತು ಮಾಡುತ್ತಿರುತ್ತಾರೆ. ಆದರೆ ಇಲ್ಲೊಂದು ಕ್ಲಬ್‌ ಗ್ರಾಹಕರನ್ನು ಸೆಳೆಯಲು ಸುಂದರಿಯರ ಬೆತ್ತಲೆ ದೇಹದ ಮೇಲೆ ಭೋಜನ ಸವಿಯುವ ನ್ಯೋಟೈಮೊರಿ ಎಂಬ ವಿಚಿತ್ರ ಭೋಜನ ಕಾರ್ಯಕ್ರಮವನ್ನು ಆಯೋಜಿಸಿ ಪಜೀತಿಗೆ ಸಿಲುಕಿದೆ.

ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿಯ ಪ್ರಕಾರ ತೈವಾನ್‌ನ ಕರಾವಳಿ ನಗರವಅದ ತೈಚುಂಗನ್‌ ನಲ್ಲಿರುವ ಖಾಸಗಿ ಕ್ಲಬ್‌ ಒಂದರಲ್ಲಿ “ಸುಶಿ ಬೋಟ್”‌ ಎಂಬ ಹೆಸರಿನಲ್ಲಿ ಈ ನ್ಯೋಟೈಮೊರಿ ಡಿನ್ನರ್‌ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಸುಮಾರು 20 ಅತಿಥಿಗಳು ಭಾಗವಹಿಸಿದ್ದು, ಅವರುಗಳಲ್ಲಿ ಪ್ರತಿಯೊಬ್ಬರು ಸುಂದರಿಯರ ಬೆತ್ತಲೆ ದೇಹದ ಮೇಲೆ ಸುಶಿ ಮತ್ತು ಸಾಶಿಮಿ ಸವಿಯಲು ಬರೋಬ್ಬರಿ 2.5 ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ. ಇಲ್ಲಿನ ಕೆಲವೊಂದು ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್‌ ಆದ ಬಳಿಕ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಅಧಿಕಾರಿಗಳು ಕ್ಲಬ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.

ಇದನ್ನೂ ಓದಿ: ಮದುವೆಗೆ ಬಂದ ಅತಿಥಿಗಳಿಗೆ 66ಸಾವಿರ ರೂ. ನಗದು ಬಹುಮಾನ ; ಅದ್ದೂರಿ ಮದುವೆಯ ವಿಡಿಯೋ ವೈರಲ್​​​

ಏನಿದು ನ್ಯೋಟೈಮೊರಿ ಡಿನ್ನರ್‌ ಪದ್ಧತಿ?

ನ್ಯೋಟೈಮೊರಿ ಎನ್ನುವುದು 1980 ರ ದಶಕದ ಜಪಾನಿನ ಒಂದು ಸಂಪ್ರದಾಯವಾಗಿತ್ತು. ಹಿಂದಿನ ಕಾಲದಲ್ಲಿ ಜಪಾನ್‌ನಲ್ಲಿ ಯುದ್ಧದಲ್ಲಿ ಗೆದ್ದು ಬಂದವರಿಗೆ ಅದ್ಧೂರಿ ಸ್ವಾಗತ ನೀಡುವುದರ ಜೊತೆಗೆ ಭರ್ಜರಿ ಔತನಕೂಟವನ್ನು ಏರ್ಪಡಿಸಲಾಗುತ್ತಿತ್ತು. ಅದರಲ್ಲಿ ಸುಂದರವಾದ ಯುವತಿಯರನ್ನು ಊಟದ ಟೇಬಲ್‌ ಮೇಲೆ ಬೆತ್ತಲೆಯಾಗಿ ಮಲಗಿಸಿ ನಂತರ ಅವರ ದೇಹದ ಖಾಸಗಿ ಭಾಗವನ್ನು ಹೂವು ಮತ್ತು ಎಲೆಗಳಿಂದ ಮುಚ್ಚಿ ಅದರ ಮೇಲೆ ಭೋಜನವನ್ನು ಬಡಿಸಲಾಗುತ್ತಿತ್ತು. ಇದನ್ನೇ ನ್ಯೋಟೈಮೊರಿ ಡಿನ್ನರ್‌ ಎಂದು ಕರೆಯುತ್ತಾರೆ. ಬಳಿಕ ಈ ಪದ್ಧತಿಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿ ಹಲವೆಡೆ ಇದನ್ನು ನಿಷೇಧಿಸಲಾಗಿತ್ತು. ಇದೀಗ ತೈವಾನ್‌ನ ಕ್ಲಬ್‌ ಒಂದರಲ್ಲಿ ನ್ಯೋಟೈಮೊರಿ ಡಿನ್ನರ್‌ ಪಾರ್ಟಿ ನಡೆಯುತ್ತಿದೆ ಎಂದು ಗೊತ್ತಾದ ಬಳಿಕ ಹಲವರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Sun, 30 June 24