ಆತ್ಮವಿಶ್ವಾಸದ ಕುರಿತಾಗಿ ಜಾಗೃತಿ ಮೂಡಿಸಲು ಮಹಿಳೆ ಸಮರ ಕಲೆಯನ್ನು ಪ್ರದರ್ಶಿಸಿದ್ದಾರೆ. ತನ್ನ ಮದುವೆಯ ದಿನದಂದೇ ಸಿಂಗಾರಗೊಂಡ ಮದುವೆ ವಸ್ತ್ರದಲ್ಲಿಯೇ ವಧು ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ವಧು ನಿಶಾ ಆತ್ಮರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಸಮರ ಕಲೆಯನ್ನು ಪ್ರದರ್ಶಿಸಿದ್ದಾರೆ. 22 ವರ್ಷದ ನಿಶಾ ತನ್ನ ಮದುವೆಯ ಉಡುಪಿನಲ್ಲಯೇ ಶಸ್ತ್ರಾಸ್ತ್ರಗಳನ್ನು ಹಿಡಿದು ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸುಮಾರು ಮೂರು ವರ್ಷಗಳಿಂದ ಕಲಾ ಪ್ರಕಾರವನ್ನು ಅಭ್ಯಾಸ ಮಾಡುತ್ತಿರುವ ನಿಶಾ, ಮಹಿಳೆಯರಲ್ಲಿ ಆತ್ಮರಕ್ಷಣೆಯ ಮಹತ್ವವನ್ನು ಮತ್ತು ಕಲಾ ಪ್ರಕಾರವನ್ನು ಉತ್ತೇಜಿಸಲು ಬಯಸುತ್ತೇನೆ ಎಂದು ಎಎನ್ಐಗೆ ತಿಳಿಸಿದ್ದಾರೆ.
#WATCH Nisha from Thoothukudi district performed ‘Silambattam’, a form of martial art from Tamil Nadu, soon after her wedding ceremony on 28th June, to spread awareness about the importance of self-defense#TamilNadu pic.twitter.com/giLOPy1iDZ
— ANI (@ANI) July 1, 2021
‘ಆತ್ಮರಕ್ಷಣೆಯ ಮಹತ್ವದ ಜತೆಗೆ ಕಲೆಯ ಪ್ರಕಾರವನ್ನು ತಿಳಿಸಲು ಮದುವೆಯ ಬಳಿಕ ಜನರ ಮುಂದೆ ಸಾಂಪ್ರಾದಾಯಿಕ ಸಮರ ಕಲೆಯನ್ನು ಪ್ರದರ್ಶಿಸಿದ್ದೇನೆ. ಕಳೆದ ಮೂರು ವರ್ಷಗಳಿಂದ ನಾನು ಕಲೆಯನ್ನು ಅಭ್ಯಾಸ ಮಾಡುತ್ತಿದ್ದೇನೆ. ಹೆಚ್ಚಿನ ಜನರು ಈ ಕಲೆಯನ್ನು ಕಲಿಯಬೇಕು ಎಂದು ನಿಶಾ ಅಭಿಪ್ರಾಯ ಹಂಚಿಕೊಂಡಿದ್ದಾರೆ’.
ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ದೌರ್ಜನ್ಯ, ಶೋಷಣೆ ಎದುರಿಸಲು ಮಹಿಳೆಯರು ಮಾರ್ಷಲ್ ಆರ್ಟ್ಸ್, ಕರಾಟೆಯಂತಹ ಸಮರ ಕಲೆಗಳನ್ನು ಕಲಿಯಲು ಮುಂದಾಗುತ್ತಿದ್ದಾರೆ. ತಮ್ಮ ಆತ್ಮ ರಕ್ಷಣೆಗೆ ಇಂತಹ ಕಲೆಗಳು ಅವಶ್ಯಕ ಕೂಡ. ರಕ್ಷಣೆಯ ದಾರಿ ದೀಪವಾಗಿ ಸಮರ ಕಲೆಗಗಳು ಸಹಾಯ ಮಾಡುತ್ತವೆ. ಸಮರ ಕಲೆಯನ್ನು ಜನರೆದುರು ಪ್ರದರ್ಶಿಸಿದ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Viral Video: ಆಶ್ಚರ್ಯ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ಬಾಯಿಂದ ಹೊರ ಹಾಕುತ್ತಿದೆ ನಾಗರಹಾವು! ವಿಡಿಯೋ ನೋಡಿ
Published On - 3:12 pm, Fri, 2 July 21