ಚೆಂಗಲಪಟ್ಟು: ಹೊಸ ಬಾಳಿನ ಹೊಸಿಲಲಿ ನಿಂತಿದ್ದ ತಮಿಳುನಾಡಿನ ನವದಂಪತಿಗೆ ಗೆಳೆಯರು ಪೆಟ್ರೋಲ್ ಮತ್ತು ಡೀಸೆಲ್ನ ಒಂದೊಂದು ಬಾಟಲಿಗಳ ಉಡುಗೊರೆ ನೀಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೆಂಗಲಪಟ್ಟು ಜಿಲ್ಲೆಯ ಚೆಯ್ಯೂರ್ ಗ್ರಾಮದಲ್ಲಿ ನಡೆದ ಮದುವೆ ವೇಳೆ ದಂಪತಿಗೆ ಗೆಳೆಯರು ಪೆಟ್ರೋಲ್-ಡೀಸೆಲ್ ಇದ್ದ ಬಾಟಲಿ ಕೊಟ್ಟು ಶುಭ ಹಾರೈಸಿದರು. ದೇಶದ ಇತರೆಲ್ಲ ರಾಜ್ಯಗಳಂತೆ ತಮಿಳುನಾಡಿನಲ್ಲಿಯೂ ಕಳೆದ 15 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂಭತ್ತು ರೂಪಾಯಿಗೂ ಹೆಚ್ಚಾಗಿವೆ. ಚೆನ್ನೈ ನಗರದಲ್ಲಿ ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ಗೆ ₹ 110.85 ಹಾಗೂ ಡೀಸೆಲ್ ₹ 100.94ರಂತೆ ಮಾರಾಟವಾಗುತ್ತಿದೆ. ವರ ಗ್ರೇಸ್ ಕುಮಾರ್ ಮತ್ತು ವಧು ಕೀರ್ತನಾರ ಗೆಳೆಯರು ಬೆಲೆ ಹೆಚ್ಚಳವನ್ನು ಗಮನಿಸಿ, ಪೆಟ್ರೋಲ್-ಡೀಸೆಲ್ ಕೊಡುಗೆ ನೀಡಲು ನಿರ್ಧರಿಸಿದರು.
Amidst rising #PetrolDieselPriceHike, friends of the newly married couple, Girish Kumar and Keerthana decided to gift the couple One Litre #petrol and One Litre #diesel as a wedding present at their Wedding reception in Cheyyur in Chengalpattu district #FuelPriceHike pic.twitter.com/Wr3BErZUwg
— Apoorva Jayachandran (@Jay_Apoorva18) April 7, 2022
ಪೆಟ್ರೋಲ್ ಬಂಕ್ಗಳಲ್ಲಿ ನೋ ಸ್ಟಾಕ್ ಬೋರ್ಡ್
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 111.16 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.86 ರೂಪಾಯಿ ದಾಖಲಾಗಿದೆ. ಬೆಂಗಳೂರಿನ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಸಮಯಕ್ಕೆ ಸರಿಯಾಗಿ ಪೆಟ್ರೋಲ್, ಡೀಸೆಲ್ ಸಿಗದೆ ವಾಹನ ಸವಾರರು ಪರದಾಡುತ್ತಿದ್ದಾರೆ. ತೈಲ ದರ ಏರಿಕೆಯಿಂದ ಕಂಗೆಟ್ಟಿರುವ ಸರಬರಾಜು ಕಂಪನಿಗಳು ಆರ್ಥಿಕ ಹೊರೆ ಇಳಿಸಲು ಸರಬರಾಜಿಗೆ ಮಿತಿ ಹಾಕಿವೆ. ಮಾರುಕಟ್ಟೆಯಲ್ಲಿರುವ ಬೇಡಿಕೆಯಷ್ಟು ಇಂಧನ ಪೂರೈಕೆಯಾಗ್ತಿಲ್ಲ. ರಾಜ್ಯಕ್ಕೆ ಇಂಧನ ಪೂರೈಕೆಯಾಗದೆ ಬಂಕ್ ಮಾಲೀಕರು ಇಕ್ಕಟ್ಟಿನಲ್ಲಿ ಸಿಲುಕಿವೆ. ಹಲವು ಪೆಟ್ರೋಲ್ ಬಂಕ್ಗಳಲ್ಲಿ ನೋ ಸ್ಟಾಕ್ ಬೋರ್ಡ್ ಅಳವಡಿಸಲಾಗಿದೆ. ಇದರಿಂದ ವಾಹನಗಳಲ್ಲಿ ಓಡಾಡುವ ಸವಾರರಿಗೆ ಸಮಸ್ಯೆ ಎದುರಾಗಿದೆ.
ಸತತ ಬೆಲೆ ಏರಿಕೆ?
ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸತತವಾಗಿ ಏರಿಕೆ ಮಾಡಲಾಗುತ್ತಿದೆ. ಈ ಮಧ್ಯೆ, ನಿನ್ನೆ ಮತ್ತು ಇಂದು (ಏಪ್ರಿಲ್ 7-8, 2022) ಇಂಧನ ದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಮಾರ್ಚ್ 22ರಂದು ಆರಂಭವಾದ ಬೆಲೆ ಏರಿಕೆ ಸತತವಾಗಿ ಹೆಚ್ಚುತ್ತಲೇ ಇದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿದಿನ ಏರುತ್ತಲೇ ಇದೆ. ಅದರ ಪರಿಣಾಮ ಕಳೆದ 17 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ಸರಾಸರಿ ₹ 10 ರಷ್ಟು ಹೆಚ್ಚಾಗಿದೆ. ಮೊದಲ ನಾಲ್ಕು ದಿನಗಳಲ್ಲಿ ಇಂಧನ ಬೆಲೆಗಳನ್ನು ದಿನಕ್ಕೆ ಪ್ರತಿ ಲೀಟರ್ಗೆ ತಲಾ 80 ಪೈಸೆಯಂತೆ ಹೆಚ್ಚಿಸಲಾಗಿಯಿತು. ನಂತರದ ದಿನಗಳಲ್ಲಿ ಪೆಟ್ರೋಲ್ ಧಾರಣೆಯನ್ನು ಲೀಟರ್ಗೆ 50 ಮತ್ತು 30, ಮತ್ತೆ 80 ಪೈಸೆಯಷ್ಟು ಹೆಚ್ಚಿಸಲಾಗುತ್ತಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲಯಲ್ಲಿ ಏರಿಕೆ ಮಾಡಲಾಗಿಲ್ಲ.
ತೈಲ ಕಂಪನಿಗಳು ಪ್ರತಿದಿನ ಬೆಳಗ್ಗೆಯೇ ವಿವಿಧ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಇರುವ ಬೆಲೆ ಆಧಾರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ನಿರ್ಧರಿಸಲಾಗುತ್ತದೆ. ಸ್ಥಳೀಯ ಚಿಲ್ಲರೆ ಮಾರಾಟ ದರಕ್ಕೆ ಅನುಗುಣವಾಗಿ ಪ್ರತಿ ರಾಜ್ಯದಲ್ಲಿಯೂ ಪೆಟ್ರೋಲ್-ಡೀಸೆಲ್ ದರಗಳಲ್ಲಿ ವ್ಯತ್ಯಾಸ ಆಗುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ; ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್ ಸುಟ್ಟು ಭಸ್ಮ
ಇದನ್ನೂ ಓದಿ: ರಷ್ಯಾ ವಾಯುಗಡಿ ಪ್ರವೇಶಿಸಿ ಉಕ್ರೇನ್ನ ಸೇನಾ ಹೆಲಿಕಾಪ್ಟರ್: ಇಂಧನ ಸ್ಥಾವರದ ಮೇಲೆ ಬಾಂಬ್ ದಾಳಿ
Published On - 9:17 am, Fri, 8 April 22