ರಷ್ಯಾ ವಾಯುಗಡಿ ಪ್ರವೇಶಿಸಿ ಉಕ್ರೇನ್​ನ ಸೇನಾ ಹೆಲಿಕಾಪ್ಟರ್: ಇಂಧನ ಸ್ಥಾವರದ ಮೇಲೆ ಬಾಂಬ್ ದಾಳಿ

ರಷ್ಯಾ ವಾಯುಗಡಿ ಪ್ರವೇಶಿಸಿ ಉಕ್ರೇನ್​ನ ಸೇನಾ ಹೆಲಿಕಾಪ್ಟರ್: ಇಂಧನ ಸ್ಥಾವರದ ಮೇಲೆ ಬಾಂಬ್ ದಾಳಿ
ಉಕ್ರೇನ್ ದಾಳಿಯಿಂದ ಹೊತ್ತಿ ಉರಿದ ರಷ್ಯಾದ ಇಂಧನ ಸ್ಥಾವರ

ಉಕ್ರೇನ್​ನ ಸೇನಾ ಹೆಲಿಕಾಪ್ಟರ್ ಪಶ್ಚಿಮ ರಷ್ಯಾದಲ್ಲಿರುವ ಬೆಲ್​ಗೊರೊಡ್​ನ ಇಂಧನ ಸ್ಥಾವರದ ಮೇಲೆ ಬಾಂಬ್ ದಾಳಿ ನಡೆಸಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 02, 2022 | 9:27 AM

ಕೀವ್: ಉಕ್ರೇನ್​ ಮೇಲಿನ ರಷ್ಯಾ ದಾಳಿ (Ukraine Russia Conflict) ಇದೀಗ ಮತ್ತೊದು ತಿರುವು ಪಡೆದುಕೊಂಡಿದೆ. ರಷ್ಯಾ ವಾಯುಗಡಿ ಪ್ರವೇಶಿಸಿದ ಉಕ್ರೇನ್​ನ ಸೇನಾ ಹೆಲಿಕಾಪ್ಟರ್ ಪಶ್ಚಿಮ ರಷ್ಯಾದಲ್ಲಿರುವ ಬೆಲ್​ಗೊರೊಡ್​ನ ಇಂಧನ ಸ್ಥಾವರದ ಮೇಲೆ ಬಾಂಬ್ ದಾಳಿ ನಡೆಸಿದೆ. ತೈಲ ಸ್ಥಾವರದಲ್ಲಿ ಅಗ್ನಿಯ ಕೆನ್ನಾಲಗೆ ಆವರಿಸಿದೆ. 1950ರ ಕೊರಿಯಾ ಯುದ್ಧದ ನಂತರ ಇದೇ ಮೊದಲ ಬಾರಿಗೆ ರಷ್ಯಾ ನೆಲದ ಮೇಲೆ ವಿದೇಶಿ ದಾಳಿ ನಡೆದಿದೆ.

ನೆಲಕ್ಕೆ ಸಮೀಪದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್​ನಿಂದ ಚಿಮ್ಮಿದ ರಾಕೆಟ್ ನೇರವಾಗಿ ಇಂಧನ ಸ್ಥಾವರದ ಮೇಲೆಯೇ ಸ್ಫೋಟಿಸಿದೆ. ತಕ್ಷಣ ದೊಡ್ಡಮಟ್ಟದ ಸದ್ದಿನೊಂದಿಗೆ ಬೆಂಕಿ ವ್ಯಾಪಿಸಿತು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಹಲವು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

‘ಪೆಟ್ರೋಲ್ ಡಿಪೊದ ಮೇಲೆ ಉಕ್ರೇನ್​ನ ಸೇನಾ ಹೆಲಿಕಾಪ್ಟರ್​ಗಳು ವಾಯುದಾಳಿ ನಡೆಸಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಕೆಳಮಟ್ಟದಲ್ಲಿ ಹಾರಾಡುತ್ತಾ ರಷ್ಯಾದ ವಾಯುಗಡಿಯನ್ನು ಈ ಹೆಲಿಕಾಪ್ಟರ್​ಗಳು ಪ್ರವೇಶಿಸಿದವು. ಅಗ್ನಿ ಅನಾಹುತದಲ್ಲಿ ಇಬ್ಬರು ಉದ್ಯೋಗಿಗಳಿಗೆ ಗಾಯಗಳಾಗಿವೆ’ ಎಂದು ರಷ್ಯಾದ ಬೆಲ್​ಗೊರೊಡ್​ ಪ್ರಾಂತ್ಯದ ರಾಜ್ಯಪಾಲ ವ್ಯಾಚೆಸ್ಲಾವ್ ಗ್ಲಾಡ್​ಕೊವ್ ಟೆಲಿಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ರಷ್ಯಾ ಮೇಲಿನ ದಾಳಿಯನ್ನು ಉಕ್ರೇನ್ ನಿರಾಕರಿಸಿಯೂ ಇಲ್ಲ, ದೃಢಪಡಿಸಿಯೂ ಇಲ್ಲ. ಆದರೆ ಬೆಲ್​ಗೊರೊಡ್ ಪ್ರಾಂತ್ಯದಲ್ಲಿ ದೊಡ್ಡಮಟ್ಟದ ಅಗ್ನಿ ಅನಾಹುತ ಸಂಭವಿಸಿರುವುದು ನಿಜ ಎಂದಿದೆ. ಉಕ್ರೇನ್​ನ ಪ್ರಮುಖ ನಗರ ಖಾರ್ಕಿವ್​ನಿಂದ ಬೆಲ್​ಗೊರೊಡ್ 80 ಕಿಮೀ ದೂರದಲ್ಲಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಈ ನಗರದಿಂದಲೇ ಅತ್ಯಗತ್ಯ ಸೇನಾ ಸರಂಜಾಮು ಸರಬರಾಜಾಗುತ್ತಿದೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಮೊದಲ ದಿನವಾದ ಫೆಬ್ರುವರಿ 24ರಿಂದಲೂ ರಷ್ಯಾ ಪಡೆಗಳು ಖಾರ್ಕಿವ್ ನಗರದ ಮೇಲೆ ದಾಳಿ ನಡೆಸುತ್ತಲೇ ಇವೆ. ಮೇಲುಗೈ ಸಾಧಿಸಿದ್ದರೂ ಖಾರ್ಕಿವ್ ನಗರವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಶಾಂತಿ ಪ್ರಯತ್ನಗಳಿಗೆ ಸಹಕರಿಸಲು ಭಾರತ ಸಿದ್ಧ ಎಂದ ಪ್ರಧಾನಿ ಮೋದಿ

ರಷ್ಯಾದ (Russia)ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ (Sergey Lavrov) ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ಉಕ್ರೇನ್‌ನಲ್ಲಿನ ಹಿಂಸಾಚಾರವನ್ನು ಶೀಘ್ರ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಪುನರುಚ್ಚರಿಸಿದ್ದಾರೆ. ಶಾಂತಿ ಪ್ರಯತ್ನಗಳಿಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಭಾರತ ಸಿದ್ಧ ಎಂದು ಲಾವ್ರೊವ್ ಭೇಟಿ ಮಾಡಿದ ಮೋದಿ ಹೇಳಿದ್ದಾರೆ. ಯುಎನ್ ಚಾರ್ಟರ್ ಮತ್ತು ಎಲ್ಲಾ ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಂತೆ ಭಾರತವು ಪದೇ ಪದೇ ಕರೆ ನೀಡಿದೆ. ಇತ್ತೀಚಿನ ವಾರಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರೊಂದಿಗಿನ ತಮ್ಮ ದೂರವಾಣಿ ಸಂಭಾಷಣೆಯಲ್ಲಿ, ಪಿಎಂ ಮೋದಿ ಅವರು ಹಗೆತನವನ್ನು ಕೊನೆಗೊಳಿಸಲು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ಕರೆ ನೀಡಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ ನಡೆಯುತ್ತಿರುವ ಶಾಂತಿ ಮಾತುಕತೆ ಸೇರಿದಂತೆ ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಸೆರ್ಗೆ ಲಾವ್ರೊವ್ ಅವರನ್ನು ಭೇಟಿಯಾದಾಗ, ಹಿಂಸಾಚಾರವನ್ನು ಕೊನೆಗೊಳಿಸಲು ಮೋದಿ ರಷ್ಯಾಗೆ ಕರೆ ನೀಡಿದ್ದಾರೆ. “ಹಿಂಸಾಚಾರವನ್ನು ಶೀಘ್ರವಾಗಿ ನಿಲ್ಲಿಸಲು ಪ್ರಧಾನಿ ತಮ್ಮ ಕರೆಯನ್ನು ಪುನರುಚ್ಚರಿಸಿದರು ಮತ್ತು ಶಾಂತಿ ಪ್ರಯತ್ನಗಳಿಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಭಾರತವು ಸಿದ್ಧವಾಗಿದೆ” ಎಂದು ಹೇಳಿರುವುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಭಾರತದ ಪ್ರಧಾನಿ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಲಾವ್ರೊವ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ಉಕ್ರೇನ್ ಬಿಕ್ಕಟ್ಟಿನ ಕುರಿತು ಸಮಾಲೋಚನೆಗಾಗಿ ಕಳೆದ ಎರಡು ವಾರಗಳಲ್ಲಿ ನವದೆಹಲಿಗೆ ಪ್ರಯಾಣಿಸಿರುವ ಯಾವುದೇ ಪಾಶ್ಚಿಮಾತ್ಯ ನಾಯಕರು ಅಥವಾ ಹಿರಿಯ ಅಧಿಕಾರಿಗಳನ್ನು ಮೋದಿ ಭೇಟಿ ಮಾಡದ ಕಾರಣ ಪ್ರಧಾನಿಯವರೊಂದಿಗಿನ ಸಂವಾದವು ಮಹತ್ವದ್ದಾಗಿದೆ.

ಇದನ್ನೂ ಓದಿ: Russia Oil To India: ಉಕ್ರೇನ್ ಯುದ್ಧಕ್ಕೂ ಮುಂಚೆ ಇದ್ದ ದರಕ್ಕೆ ಭಾರೀ ರಿಯಾಯಿತಿಯಲ್ಲಿ ಭಾರತಕ್ಕೆ ರಷ್ಯಾ ತೈಲ

ಇದನ್ನೂ ಓದಿ: ಉಕ್ರೇನ್​​ನಲ್ಲಿ ಮುಂದುವರಿದ ಯುದ್ಧ ಸ್ಥಿತಿ; ಇತ್ತ ಭಾರತಕ್ಕೆ ಭೇಟಿ ಕೊಡಲಿರುವ ರಷ್ಯಾ ವಿದೇಶಾಂಗ ಇಲಾಖೆ ಸಚಿವ

Follow us on

Related Stories

Most Read Stories

Click on your DTH Provider to Add TV9 Kannada