ನನ್ನ ರಷ್ಯಾ ಪ್ರವಾಸ ಬಗ್ಗೆ ಪ್ರಬಲ ರಾಷ್ಟ್ರ ಕೋಪಗೊಂಡಿತ್ತು, ಆದರೆ ಮಿತ್ರರಾಷ್ಟ್ರ ಭಾರತವನ್ನು ಅದು ಬೆಂಬಲಿಸುತ್ತಿದೆ: ಇಮ್ರಾನ್ ಖಾನ್
ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಹಿರಿಯ ರಾಜತಾಂತ್ರಿಕರನ್ನು ಕರೆಸಿ ತನ್ನ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕದ ಆಪಾದಿತ "ಹಸ್ತಕ್ಷೇಪ" ದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿದ ನಂತರ ಖಾನ್ ಈ ರೀತಿ ಹೇಳಿಕೆ ನೀಡಿದ್ದಾರೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿ ಮಾಡಲು ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿದ್ದಕ್ಕಾಗಿ ಭಾರತವನ್ನು ಬೆಂಬಲಿಸುವ “ಪ್ರಬಲ ದೇಶ” ಕೋಪಗೊಂಡಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Imran Khan) ಶುಕ್ರವಾರ ಹೇಳಿದ್ದಾರೆ. ಪಾಕಿಸ್ತಾನವು (Pakistan) ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಹಿರಿಯ ರಾಜತಾಂತ್ರಿಕರನ್ನು ಕರೆಸಿ ತನ್ನ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕದ ಆಪಾದಿತ “ಹಸ್ತಕ್ಷೇಪ” ದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿದ ನಂತರ ಖಾನ್ ಈ ರೀತಿ ಹೇಳಿಕೆ ನೀಡಿದ್ದಾರೆ. ಭಾನುವಾರ ಖಾನ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಮತ ಹಾಕಲು ಸಜ್ಜಾಗಿದೆ. ಇಸ್ಲಾಮಾಬಾದ್ ಭದ್ರತಾ ಸಂವಾದವನ್ನು ಉದ್ದೇಶಿಸಿ ಮಾತನಾಡಿದ 69 ವರ್ಷದ ಖಾನ್ ಸ್ವತಂತ್ರ ವಿದೇಶಾಂಗ ನೀತಿಯು ದೇಶಕ್ಕೆ ನಿರ್ಣಾಯಕವಾಗಿದೆ ಮತ್ತು ಪಾಕಿಸ್ತಾನವು ಇತರ ಪ್ರಬಲ ರಾಷ್ಟ್ರಗಳ ಅವಲಂಬಿತ ಸಿಂಡ್ರೋಮ್‌ನಿಂದಾಗಿ ತನ್ನ ನಿಜವಾದ ಸಾಮರ್ಥ್ಯವನ್ನು ಎಂದಿಗೂ ತಲುಪಲು ಸಾಧ್ಯವಾಗಲಿಲ್ಲ. “ಸ್ವತಂತ್ರ ವಿದೇಶಾಂಗ ನೀತಿ ಇಲ್ಲದ ದೇಶವು ತನ್ನ ಜನರ ಹಿತಾಸಕ್ತಿಗಳನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದರು. ಖಾನ್ ಒಂದು ದಿನದ ಹಿಂದೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, ವಿದೇಶಿ ರಾಷ್ಟ್ರವೊಂದು ಸಂದೇಶವನ್ನು ಕಳುಹಿಸುವಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ವಿದೇಶಿ ನೆರವಿಗೆ ಬದಲಾಗಿ ಇತರ ದೇಶಗಳ ಇಚ್ಛೆಗೆ ಮಣಿಯುವುದಕ್ಕಿಂತ ರಾಷ್ಟ್ರದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಮೂಲಕ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಖಾನ್ ಹೇಳಿದರು. ಉಕ್ರೇನ್ ವಿರುದ್ಧ ಮಾಸ್ಕೋ ಯುದ್ಧವನ್ನು ಆರಂಭಿಸಿದಾಗ ರಷ್ಯಾಕ್ಕೆ ಅವರ ಇತ್ತೀಚಿನ ಭೇಟಿಯ ಬಗ್ಗೆ “ಪ್ರಬಲ ದೇಶ” ಅಸಮಾಧಾನ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು. ಮತ್ತೊಂದೆಡೆ, ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವ ತನ್ನ ಮಿತ್ರ ಭಾರತವನ್ನು ಅದು ಬೆಂಬಲಿಸುತ್ತಿದೆ ಎಂದು ಅವರು ಹೇಳಿದರು.
ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರದ ವಿರುದ್ಧ “ಬೆದರಿಕೆಯ” ಪತ್ರ ಮತ್ತು “ವಿದೇಶಿ-ಹಣದಿಂದ ಸಂಚು” ಆರೋಪದ ಮೇಲೆ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಯುಎಸ್ ಹಾಲಿ ರಾಯಭಾರಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿದೆ.
ಗುರುವಾರ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಭದ್ರತೆಯ ಕುರಿತು ದೇಶದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೆಲವೇ ಗಂಟೆಗಳ ನಂತರ ಯುಎಸ್ ರಾಜತಾಂತ್ರಿಕರನ್ನು ಕರೆಸಲಾಯಿತು.
ತಮ್ಮ ಭಾಷಣದಲ್ಲಿ ಖಾನ್ ಅವರು ತಮ್ಮ ಸರ್ಕಾರವು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿದೆ ಎಂದು ಹೇಳಿದರು. “ಒಂದು ದೇಶವು ಸ್ವತಂತ್ರ ರಾಜ್ಯದ ವ್ಯವಹಾರಗಳಲ್ಲಿ ಹೇಗೆ ಹಸ್ತಕ್ಷೇಪ ಮಾಡುತ್ತದೆ? . “ಆದರೆ ಅವರನ್ನು ದೂಷಿಸಬಾರದು, ಏಕೆಂದರೆ ಅದು ನಮ್ಮ ತಪ್ಪು ಏಕೆಂದರೆ ನಾವು ಅವರಿಗೆ ಈ ಅನಿಸಿಕೆ ನೀಡಿದ್ದೇವೆ ಎಂದು ಹೇಳಿದರು.
ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಪಾಕಿಸ್ತಾನದ ಗಣ್ಯರು ರಾಷ್ಟ್ರವನ್ನು ಬಲಿಪೀಠಕ್ಕೆ ಎಸೆದಿದ್ದಾರೆ ಮತ್ತು ಅದರ ಸ್ವಾಭಿಮಾನವನ್ನು ಪಣಕ್ಕಿಟ್ಟಿದ್ದಾರೆ ಎಂದು ಅವರು ಹೇಳಿದರು. ಕಳೆದ ತಿಂಗಳು ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸಲು ರಷ್ಯಾಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ (UNGA) ಮಂಡಿಸಿದ ನಿರ್ಣಯದ ಮೇಲೆ ಪಾಕಿಸ್ತಾನ ಮತದಾನದಿಂದ ದೂರವಿತ್ತು ಮತ್ತು ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ಒತ್ತಾಯಿಸಿತು.
ಇದನ್ನೂ ಓದಿ: ಅವಿಶ್ವಾಸ ನಿರ್ಣಯ ಮತದಾನ ಮೊದಲು ಪಾಕ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಎಂದಿಗೂ ಸೋಲೊಪ್ಪಲಾರೆ: ಇಮ್ರಾನ್ ಖಾನ್