AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಿಶ್ವಾಸ ನಿರ್ಣಯ ಮತದಾನ ಮೊದಲು ಪಾಕ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಎಂದಿಗೂ ಸೋಲೊಪ್ಪಲಾರೆ: ಇಮ್ರಾನ್ ಖಾನ್

ಬಾಲ್ಯದಲ್ಲಿ ಪಾಕಿಸ್ತಾನವು ಅಗ್ರಸ್ಥಾನಕ್ಕೆ ಏರಿದ್ದು ನನಗೆ ನೆನಪಿದೆ. ನಾವು ಹೇಗೆ ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಯಲು ದಕ್ಷಿಣ ಕೊರಿಯಾ ಪಾಕಿಸ್ತಾನಕ್ಕೆ ಬಂದಿತ್ತು, ಮಲೇಷಿಯಾದ ರಾಜಕುಮಾರರು ನನ್ನೊಂದಿಗೆ ಶಾಲೆಯಲ್ಲಿ ಓದುತ್ತಿದ್ದರು.

ಅವಿಶ್ವಾಸ ನಿರ್ಣಯ ಮತದಾನ ಮೊದಲು ಪಾಕ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಎಂದಿಗೂ ಸೋಲೊಪ್ಪಲಾರೆ: ಇಮ್ರಾನ್ ಖಾನ್
ಇಮ್ರಾನ್ ಖಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 31, 2022 | 10:23 PM

ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ಗುರುವಾರ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದು ಭಾನುವಾರದಂದು ಅವಿಶ್ವಾಸ ನಿರ್ಣಯದ ಮತದಾನದ (No-trust vote) ಸಂದರ್ಭದಲ್ಲಿ ಕೊನೆಯ ಎಸೆತದವರೆಗೂ ಹೋರಾಡುವುದಾಗಿ ಹೇಳಿದ್ದಾರೆ. ಮಾರ್ಚ್ 7 ರಂದು, ಯುನೈಟೆಡ್ ಸ್ಟೇಟ್ಸ್, ಯುಎಸ್ ಅಲ್ಲ. ಆದರೆ ವಿದೇಶಿ ಶಕ್ತಿ ಸಂದೇಶವನ್ನು ಕಳುಹಿಸಿದೆ. ಅವಿಶ್ವಾಸ ನಿರ್ಣಯ ಬರಲಿದೆ ಎಂಬುದು ಅವರಿಗೆ ಮೊದಲೇ ಗೊತ್ತಿತ್ತು. ಆಗ ಅವಿಶ್ವಾಸ ಗೊತ್ತುವಳಿಯನ್ನೂ ಸಲ್ಲಿಸಿರಲಿಲ್ಲ. ಅವರು (ಪ್ರತಿಪಕ್ಷಗಳು) ವಿದೇಶದಲ್ಲಿ ಈ ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದರ್ಥ, ಅವರು ಪಾಕಿಸ್ತಾನದ ಮೇಲೆ ಕೋಪಗೊಂಡಿದ್ದಾರೆ ಎಂದು ಅವರು ಹೇಳುತ್ತಾರೆ. ಅವರು ಈ ನೆಪ ಹೇಳುತ್ತಿದ್ದಾರೆ. ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ಖಾನ್ ಸೋತರೆ ನಾವು ಪಾಕಿಸ್ತಾನವನ್ನು ಕ್ಷಮಿಸುತ್ತೇವೆ ಎಂದು ಅವರು ಹೇಳುತ್ತಾರೆ. ಆದರೆ ಈ ಕ್ರಮ ವಿಫಲವಾದರೆ, ಪಾಕಿಸ್ತಾನವು ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ ಎಂದು ಖಾನ್ ಹೇಳಿದ್ದಾರೆ. “ಪಾಕಿಸ್ತಾನವು (Pakistan) ಇತಿಹಾಸದಲ್ಲಿ ನಿರ್ಣಾಯಕ ಕ್ಷಣವನ್ನು ತಲುಪಿದೆ. ನಾನು ತಲೆಬಾಗುವುದಿಲ್ಲ ಮತ್ತು ನಮ್ಮ ಜನರನ್ನು ಇರುವೆಗಳಂತೆ ತೆವಳಲು ಬಿಡುವುದಿಲ್ಲ ಎಂದು ಖಾನ್ ತಮ್ಮ ದೂರದರ್ಶನದ ಭಾಷಣದಲ್ಲಿ ಹೇಳಿದರು. ತಮ್ಮ ಭಾಷಣದಲ್ಲಿ, ಇಮ್ರಾನ್ ಖಾನ್ ಮತ್ತೊಮ್ಮೆ ವಿದೇಶಿ ಕೈವಾಡದ ಬಗ್ಗೆ ಹೇಳಿದ್ದು, ಇದು ಚುನಾಯಿತ ಪ್ರಧಾನಿ ವಿರುದ್ಧದ ಪಿತೂರಿ ಎಂದಿದ್ದಾರೆ.

“ಬಾಲ್ಯದಲ್ಲಿ ಪಾಕಿಸ್ತಾನವು ಅಗ್ರಸ್ಥಾನಕ್ಕೆ ಏರಿದ್ದು ನನಗೆ ನೆನಪಿದೆ. ನಾವು ಹೇಗೆ ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಯಲು ದಕ್ಷಿಣ ಕೊರಿಯಾ ಪಾಕಿಸ್ತಾನಕ್ಕೆ ಬಂದಿತ್ತು, ಮಲೇಷಿಯಾದ ರಾಜಕುಮಾರರು ನನ್ನೊಂದಿಗೆ ಶಾಲೆಯಲ್ಲಿ ಓದುತ್ತಿದ್ದರು. ನಮ್ಮ ವಿಶ್ವವಿದ್ಯಾಲಯಗಳಿಗೆ ಮಧ್ಯಪ್ರಾಚ್ಯದವರು ಬರುತ್ತಿದ್ದರು. ಇದೆಲ್ಲವೂ ಮುಳುಗುವುದನ್ನು ನಾನು ನೋಡಿದ್ದೇನೆ, ನನ್ನ ದೇಶವನ್ನು ಅವಮಾನಿಸುವುದನ್ನು ನೋಡಿದೆ, ”ಎಂದು 69ರ ಹರೆಯದ ಇಮ್ರಾನ್ ಖಾನ್ ಹೇಳಿದ್ದಾರೆ.

ನಾನು ರಾಜಕೀಯಕ್ಕೆ ಬಂದಿದ್ದು ಜನರ ಸೇವೆ ಮಾಡಲು. ಕೀರ್ತಿ ಮತ್ತು ಸಂಪತ್ತು ಸೇರಿದಂತೆ ಎಲ್ಲವನ್ನೂ ಅಲ್ಲಾಹನು ಅನುಗ್ರಹಿಸಿದ ಅದೃಷ್ಟವಂತ ವ್ಯಕ್ತಿ ನಾನು. ನಾನು ಸ್ವತಂತ್ರ ದೇಶದಲ್ಲಿ ಹುಟ್ಟಿದ ಮೊದಲ ತಲೆಮಾರಿನವನು ”ಎಂದು ಖಾನ್ ಹೇಳಿದರು.

ಅವಿಶ್ವಾಸ ನಿರ್ಣಯದ ಮೇಲೆ ಮತ ಚಲಾಯಿಸಬೇಕಿದ್ದ ಪಾಕಿಸ್ತಾನ ವಿಧಾನಸಭೆಯನ್ನು ಭಾನುವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ.  342 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ 164 ಸದಸ್ಯರನ್ನು ಹೊಂದಿರುವ ಇಮ್ರಾನ್ ಖಾನ್ ಅವರ ಆಡಳಿತಾರೂಢ ಪಿಟಿಐ ಮೈತ್ರಿಕೂಟವು ಅಲ್ಪಮತಕ್ಕೆ ಇಳಿದಿದೆ. ಬಹುಮತಕ್ಕೆ ಬೇಕಾದ 172 ಅಂಕಗಳ ವಿರುದ್ಧ ವಿರೋಧ ಪಕ್ಷವು 177 ಬಲವನ್ನು ಹೊಂದಿದೆ.

ಖಾನ್ ವಿಶ್ವಾಸಮತ ಕಳೆದುಕೊಂಡರೆ ದೇಶವನ್ನು ಮುನ್ನಡೆಸಲು ವಿರೋಧ ಪಕ್ಷವು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್ ಅವರನ್ನು ಹೆಸರಿಸಿದೆ.

ಇದನ್ನೂ  ಓದಿ: ಪ್ರಧಾನಿ ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿದೆ; ಪಾಕಿಸ್ತಾನದ ಪಿಟಿಐ ನಾಯಕ ಆರೋಪ

ಇದನ್ನೂ ಓದಿ: Shahbaz Sharif ಇಮ್ರಾನ್ ಖಾನ್ ರಾಜೀನಾಮೆ ನೀಡಿದ ನಂತರ ಪಾಕ್ ಪ್ರಧಾನಿಯಾಗಲಿರುವ ಶಹಬಾಜ್ ಷರೀಫ್ ಯಾರು? ಇಲ್ಲಿದೆ ಪರಿಚಯ

ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ