ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿಯವರ ಶೇರ್ಷಾ ಚಿತ್ರ ಹಾಡು ರಾತನ್ ಲಂಬಿಯಾನ್ಗೆ ಟಾಂಜೇನಿಯಾದ ಅಣ್ಣ-ತಂಗಿಯರಿಬ್ಬರು ಲಿಪ್ ಸಿಂಕ್ ಮಾಡಿರುವ ವಿಡಿಯೊವನ್ನು ನೀವು ಈ ಹಿಂದೆ ನೋಡಿದ್ದೀರಾ? ಇದೀಗ ಮತ್ತೊಂದು ವಿಡಿಯೊದೊಂದಿಗೆ ಟಾಂಜೇನಿಯಾದ ವ್ಯಕ್ತಿ ಬಂದಿದ್ದಾರೆ. ಶಾರುಖ್ ಖಾನ್ ಮತ್ತು ಮಹಿರಾ ಖಾನ್ ಅವರ ಝಾಲಿಮಾ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ವಿಡಿಯೊ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದಿದೆ. 221 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೊವನ್ನು ವೀಕ್ಷಿಸಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಸಕತ್ ವೈರಲ್ ಆಗಿದೆ.
ಇದೀಗ ವೈರಲ್ ಆದ ವಿಡಿಯೊದಲ್ಲಿ ಟಾಂಜೇಲಿಯಾದ ವ್ಯಕ್ತಿ ಕಿಲಿ ಪೌಲ್ ಝಾಲಿಮಾ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ಮಹಿರಾ ಖಾನ್ ನಟಿಸಿರುವ ಚಿತ್ರ ಹಾಡನ್ನು ಇವರು ಹೇಳುತ್ತಿದ್ದಾರೆ. ಒಂದು ಚೂರು ತಪ್ಪದೇ ಲಿಪ್ ಸಿಂಕ್ ಮಾಡಿರುವ ವಿಡಿಯೊ ಕಂಡು ನೆಟ್ಟಿಗರು ವಾವ್! ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಅದ್ಭುತವಾಗಿ ಲಿಪ್ ಸಿಂಕ್ ಮಾಡುತ್ತಿದ್ದಾರೆ ಎಂದು ಇನ್ನು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನನ್ನ ನೆಚ್ಚಿನ ಹಾಡಿದು, ಭಾರತೀಯರಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಬೆಂಬಲವು ಅತ್ಯಂತ ದೊಡ್ಡ ಮಟ್ಟದ್ದು, ನಿಮ್ಮ ಪ್ರೀತಿ ಮತ್ತು ಬೆಂಬಲ ಯಾವಾಗಲೂ ಬೇಕು ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಪೋಸ್ಟ್ ಮಾಡಲಾಗಿದೆ. ಝಾಲಿಮಾ 2017ರಲ್ಲಿ ರಯೀಸ್ ಚಲನ ಚಿತ್ರದ ಹಾಡು. ಇದರನ್ನು ಅರಿಜೀತ್ ಸಿಂಗ್ ಮತ್ತು ಹರ್ಷದೀಪ್ ಕೌರ್ ಹಾಡಿದ್ದಾರೆ. ಹಾಡಿನ ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ರಚಿಸಿದ್ದಾರೆ. ಚಲನ ಚಿತ್ರ ಹಾಡು ಇಲ್ಲಿದೆ;
ಇದನ್ನೂ ಓದಿ:
Viral Video: ಸಂಗೀತ ವಾದ್ಯ ನುಡಿಸುತ್ತಾ ಮನಿಕೆ ಮಗೆ ಹಿತೆ ಹಾಡು ಹಾಡಿದ 10 ವರ್ಷದ ಪುಟ್ಟ ಬಾಲಕ; ವಿಡಿಯೊ ನೋಡಿ
Published On - 10:25 am, Tue, 30 November 21