Janani Video Song: ಹೇಗಿದೆ ‘ಆರ್ಆರ್ಆರ್’ ಚಿತ್ರದ ‘ಜನನಿ’ ಹಾಡು? ಪ್ರೇಕ್ಷಕರ ಕಣ್ಣುಗಳನ್ನು ತೇವ ಆಗಿಸುತ್ತೆ ಈ ಸಾಂಗ್
RRR Movie Songs: ಆರ್ಆರ್ಆರ್ ಸಿನಿಮಾದ ‘ಜನನಿ’ ಗೀತೆಯನ್ನು ಇಂದು (ನ.26) ರಿಲೀಸ್ ಮಾಡಲಾಗಿದೆ. ಈ ಹಾಡು ಹೆಚ್ಚು ಭಾವುಕವಾಗಿ ಮೂಡಿಬಂದಿದ್ದು, ಕಥೆಯ ಎಳೆಯನ್ನು ಬಿಟ್ಟುಕೊಡುವಂತಿದೆ.

ನಿರ್ದೇಶಕ ರಾಜಮೌಳಿ (Rajamouli) ಅವರ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಈಗ ಬಿಡುಗಡೆಗೆ ಸಜ್ಜಾಗಿರುವ ‘ಆರ್ಆರ್ಆರ್’ (RRR Movie) ಸಿನಿಮಾದಲ್ಲೂ ಅದು ಮುಂದುವರಿದಿದೆ. ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ದೋಸ್ತಿ’ ಮತ್ತು ‘ಹಳ್ಳಿ ನಾಟು’ ಹಾಡುಗಳನ್ನು ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗ ‘ಜನನಿ’ ಗೀತೆಯನ್ನು (Janani Song) ರಿಲೀಸ್ ಮಾಡಿದೆ ಚಿತ್ರತಂಡ. ಈ ಹಾಡು ಹೆಚ್ಚು ಭಾವುಕವಾಗಿ ಮೂಡಿಬಂದಿದ್ದು, ಕಥೆಯ ಎಳೆಯನ್ನು ಬಿಟ್ಟುಕೊಡುವಂತಿದೆ. ರಾಮ್ ಚರಣ್ (Ram Charan), ಆಲಿಯಾ ಭಟ್, ಅಜಯ್ ದೇವಗನ್, ಜ್ಯೂ. ಎನ್ಟಿಆರ್ (Jr NTR) ಮುಂತಾದ ಕಲಾವಿದರು ಎಮೋಷನಲ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗಳಲ್ಲೂ ಈ ಸಾಂಗ್ ಬಿಡುಗಡೆ ಆಗಿದೆ.
ಸಿನಿಮಾದ ಪ್ರಚಾರ ಕಾರ್ಯಗಳು ಆರಂಭ ಆಗಿವೆ. ‘ಜನನಿ’ ಹಾಡು ಬಿಡುಗಡೆ ಮಾಡಲು ನಿರ್ದೇಶಕ ರಾಜಮೌಳಿ ಅವರು ಇಂದು (ನ.26) ಬೆಂಗಳೂರಿಗೆ ಆಗಮಿಸಿದ್ದರು. ಹಾಡಿನ ಬಗ್ಗೆ ಅವರು ಒಂದಷ್ಟು ಮಾಹಿತಿ ಹಂಚಿಕೊಂಡರು. ಶೀಘ್ರದಲ್ಲೇ ಸಿನಿಮಾದ ಟ್ರೇಲರ್ ರಿಲೀಸ್ಗಾಗಿ ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡುವುದಾಗಿ ಅವರು ಹೇಳಿದ್ದಾರೆ. ಆ ಕಾರ್ಯಕ್ರಮಕ್ಕೆ ಜ್ಯೂ. ಎನ್ಟಿಆರ್, ರಾಮ್ ಚರಣ್ ಸೇರಿದಂತೆ ಎಲ್ಲ ಕಲಾವಿದರು ಆಗಮಿಸುತ್ತಾರೆ ಎಂದು ರಾಜಮೌಳಿ ತಿಳಿಸಿದ್ದಾರೆ.
‘ನಾನು ಇಂದು ‘ಜನನಿ..’ ಹಾಡಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಇದನ್ನು ಸಾಂಗ್ ಲಾಂಚ್ ಎಂದು ಹೇಳಲ್ಲ ಅಥವಾ ಇದು ಪ್ರಮೋಷನ್ ಕಾರ್ಯಕ್ರಮ ಅಲ್ಲ. ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಇದೆ ಎಂಬುದನ್ನು ನೋಡಿದ್ದೀರಿ. ಇದರ ಜತೆಗೆ ಭಾವನೆ ಕೂಡ ಇದೆ. ಎಮೋಷನ್ ಇಲ್ಲದೆ ನಾನೇನನ್ನೂ ಮಾಡಲ್ಲ. ಹಳ್ಳಿ ನಾಟುದಲ್ಲೂ ಕೂಡ ಒಂದು ಭಾವನೆ ಇದೆ. ‘ಆರ್ಆರ್ಆರ್’ನ ಜೀವಾಳ ಜನನಿ’ ಎಂದು ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು.
The unrivaled, unmatched and unparalleled emotional extravaganza, #Janani/#Uyire out now!❤️#RRRSoulAnthem…
Telugu: https://t.co/AbDnephlt5 Hindi: https://t.co/4IcB4Oy4XZ Tamil: https://t.co/BFBqvI0VPU Kannada: https://t.co/6bk8Q0B54Q Malayalam: https://t.co/kfeylXeAS9 pic.twitter.com/P8ym7icsmq
— RRR Movie (@RRRMovie) November 26, 2021
‘ಆರ್ಆರ್ಆರ್’ ಚಿತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಪೋಸ್ಟರ್ ಮತ್ತು ಹಾಡುಗಳು ಧೂಳೆಬ್ಬಿಸಿವೆ.
ಇದನ್ನೂ ಓದಿ:
S.S.Rajamouli: ಕನ್ನಡಿಗರಲ್ಲಿ ಎರಡು ವಿಚಾರಕ್ಕೆ ಕ್ಷಮೆ ಕೇಳಿ ಮಾತು ಆರಂಭಿಸಿದ ಎಸ್.ಎಸ್. ರಾಜಮೌಳಿ
Published On - 3:59 pm, Fri, 26 November 21