RRR Press Meet: ಬೆಂಗಳೂರಿನಲ್ಲಿ ‘ಆರ್ಆರ್ಆರ್’ ತಂಡ; ರಾಜಮೌಳಿ ಸಿನಿಮಾದ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್ ಮಾಡಿ
‘ಆರ್ಆರ್ಆರ್’ ಸಿನಿಮಾದಿಂದ ‘ದೋಸ್ತಿ’ ಮತ್ತು ‘ಹಳ್ಳಿ ನಾಟು’ ಹಾಡುಗಳು ಭರ್ಜರಿ ಸೌಂಡು ಮಾಡಿದ ಬಳಿಕ ‘ಜನನಿ’ ಗೀತೆಯನ್ನು ಜನರ ಮುಂದೆ ಇಡಲಾಗಿದೆ. ಸಾಂಗ್ ರಿಲೀಸ್ ಕಾರ್ಯಕ್ರಮ ಇಂದು (ನ.26) ಬೆಂಗಳೂರಿನಲ್ಲಿ ನಡೆದಿದೆ.
ಖ್ಯಾತ ನಿರ್ದೇಶಕ ರಾಜಮೌಳಿ (Rajamouli) ಅವರ ಬತ್ತಳಿಕೆಯಿಂದ ಬರುತ್ತಿರುವ ‘ಆರ್ಆರ್ಆರ್’ ಸಿನಿಮಾ (RRR Movie) ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾದ ಪ್ರಚಾರ ಕಾರ್ಯಗಳು ಆರಂಭ ಆಗಿವೆ. ಇಂದು (ನ.26) ರಾಜಮೌಳಿ ಮತ್ತು ಅವರ ತಂಡದವರು ಬೆಂಗಳೂರಿಗೆ ಆಗಮಿಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಈ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಜ್ಯೂ. ಎನ್ಟಿಆರ್ (Jr NTR) ಮತ್ತು ರಾಮ್ ಚರಣ್ (Ram Charam) ಮುಖ್ಯಭೂಮಿಕೆ ನಿಭಾಯಿಸಿರುವ ‘ಆರ್ಆರ್ಆರ್’ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಜನನಿ..’ ಸಾಂಗ್ (Janani Song) ರಿಲೀಸ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ. ಜ.7ರಂದು ವಿಶ್ವಾದ್ಯಂತ ಈ ಸಿನಿಮಾ ತೆರೆಕಾಣಲಿದೆ.
‘ಆರ್ಆರ್ಆರ್’ ಚಿತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಪೋಸ್ಟರ್ಗಳು ಧೂಳೆಬ್ಬಿಸಿವೆ. ‘ದೋಸ್ತಿ’ ಮತ್ತು ‘ಹಳ್ಳಿ ನಾಟು’ ಹಾಡುಗಳು ಭರ್ಜರಿ ಸೌಂಡು ಮಾಡಿದ ಬಳಿಕ ‘ಜನನಿ’ ಗೀತೆಯನ್ನು ಜನರ ಮುಂದೆ ಇಡಲಾಗಿದೆ.
ಇದನ್ನೂ ಓದಿ:
ಆರ್ಆರ್ಆರ್ ಚಿತ್ರದ ಪ್ರಮೋಷನ್ಗಾಗಿ ದೊಡ್ಡ ತ್ಯಾಗಕ್ಕೆ ಸಿದ್ಧರಾದ ಜ್ಯೂ.ಎನ್ಟಿಆರ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

