ಆಶಿಕಾ ರಂಗನಾಥ್​ ಮುದ್ದಾಗಿ ಕಾಣೋಕೆ ಪವನ್​ ಒಡೆಯರ್​ ಪತ್ನಿ ಅಪೇಕ್ಷಾ ಕಾರಣ; ಏನಿದು ಸಮಾಚಾರ?

TV9 Digital Desk

| Edited By: ಮದನ್​ ಕುಮಾರ್​

Updated on: Nov 26, 2021 | 9:56 AM

Ashika Ranganath: ಆಶಿಕಾ ರಂಗನಾಥ್​ ಮತ್ತು ಇಶಾನ್​ ಜೋಡಿಯಾಗಿ ಅಭಿನಯಿಸಿರುವ ‘ರೇಮೋ’ ಚಿತ್ರದ ಟೀಸರ್​ ಬಿಡುಗಡೆ ಆಗಿದೆ. ಈ ಸಿನಿಮಾಗೆ ಪವನ್​ ಒಡೆಯರ್​ ನಿರ್ದೇಶನ ಮಾಡಿದ್ದಾರೆ.

‘ರೇಮೋ’ ಸಿನಿಮಾದಲ್ಲಿ (Raymo Movie) ಮೋಹನಾ ಎಂಬ ಪಾತ್ರವನ್ನು ಆಶಿಕಾ ರಂಗನಾಥ್​ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಇಶಾನ್​ ಹೀರೋ. ಪವನ್​ ಒಡೆಯರ್​ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಟೀಸರ್​ ನೋಡಿದ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿರುವುದು ಆಶಿಕಾ ರಂಗನಾಥ್​ (Ashika Ranganath) ಅವರಿಗೆ ಖುಷಿ ನೀಡಿದೆ. ಚಿತ್ರದಲ್ಲಿ ಅವರು ಸಖತ್​ ಮುದ್ದಾಗಿ ಕಾಣುತ್ತಿದ್ದಾರೆ. ಅದಕ್ಕೆ ನಿರ್ದೇಶಕ ಪವನ್​ ಒಡೆಯರ್ (Pawan Wadeyar)​ ಅವರ ಪತ್ನಿ ಅಪೇಕ್ಷಾ ಪುರೋಹಿತ್ (Apeksha Purohit)​ ಕಾರಣ! ಅದು ಹೇಗೆ ಎಂಬುದನ್ನು ಕೂಡ ಆಶಿಕಾ ರಂಗನಾಥ್​ ವಿವರಿಸಿದ್ದಾರೆ. ‘ನಾನು ಮುದ್ದಾಗಿ ಕಾಣುತ್ತೇನೆ ಎಂದರೆ ಅದರ ಕ್ರೆಡಿಟ್​ ಅಪೇಕ್ಷಾ ಅವರಿಗೆ ಸಲ್ಲಬೇಕು. ನಾಯಕಿ ಪಾತ್ರದ ಇಡೀ ಲುಕ್​ ಡಿಸೈನ್​ ಮಾಡಿದ್ದು ಅವರೇ’ ಎಂದಿದ್ದಾರೆ ಆಶಿಕಾ ರಂಗನಾಥ್​.

ಇದನ್ನೂ ಓದಿ:

ನಿರ್ದೇಶಕ ಪವನ್​ ಒಡೆಯರ್ ಎರಡನೇ ಪತ್ನಿ ಯಾರು? ‘ರೇಮೋ’ ವೇದಿಕೆ ಮೇಲೆ ​ಮಸ್ತ್​ ಮಾತು

‘ಹುಡುಗ್ರು ಪೊಮೆರೇನಿಯನ್ ನಾಯಿ ಥರ ಇದ್ರೆ ಆಗಲ್ಲ’; ನಿರ್ದೇಶಕ ಯೋಗರಾಜ್​ ಭಟ್​ ಹೀಗೆ ಹೇಳಿದ್ದೇಕೆ?

Follow us on

Click on your DTH Provider to Add TV9 Kannada