‘ಹುಡುಗ್ರು ಪೊಮೆರೇನಿಯನ್ ನಾಯಿ ಥರ ಇದ್ರೆ ಆಗಲ್ಲ’; ನಿರ್ದೇಶಕ ಯೋಗರಾಜ್​ ಭಟ್​ ಹೀಗೆ ಹೇಳಿದ್ದೇಕೆ?

TV9 Digital Desk

| Edited By: ಮದನ್​ ಕುಮಾರ್​

Updated on: Nov 25, 2021 | 10:20 PM

ಖ್ಯಾತ ನಿರ್ದೇಶಕ ಯೋಗರಾಜ್​ ಭಟ್​ ಅವರು ‘ರೇಮೋ’ ಸಿನಿಮಾದ ಟೀಸರ್​ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ನಾಯಕ ನಟ ಇಶಾನ್​ ಬಗ್ಗೆ ಅವರು ಕೆಲವು ಮೆಚ್ಚುಗೆ ಮಾತುಗಳನ್ನು ಹಂಚಿಕೊಂಡರು.

ಪವನ್​ ಒಡೆಯರ್ (Pawan Wadeyar) ನಿರ್ದೇಶನದ ‘ರೇಮೋ’ (Raymo Movie) ಸಿನಿಮಾದಲ್ಲಿ ಇಶಾನ್​ ಮತ್ತು ಆಶಿಕಾ ರಂಗನಾಥ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟೀಸರ್​ ಬಿಡುಗಡೆ ಆಗಿದೆ. ಗುರುವಾರ (ನ.25) ನಡೆದ ಟೀಸರ್​ ರಿಲೀಸ್​ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಯೋಗರಾಜ್​ ಭಟ್​ (Yogaraj Bhat) ಅವರು ಅತಿಥಿಯಾಗಿ ಆಗಮಿಸಿದ್ದರು. ನಾಯಕ ನಟ ಇಶಾನ್​​ (Ishan) ಬಗ್ಗೆ ಅವರು ಕೆಲವು ಮೆಚ್ಚುಗೆ ಮಾತುಗಳನ್ನು ಹಂಚಿಕೊಂಡರು. ತಮ್ಮದೇ ಶೈಲಿಯಲ್ಲಿ ಗುಣಗಾನ ಮಾಡಿದರು. ‘ಇಶಾನ್​ ಸ್ಫುರದ್ರೂಪಿ ನಟ. ಆತ ಹಾಲಿವುಡ್​ ಹೀರೋ ರೀತಿ ಅಥವಾ ಹೃತಿಕ್​ ರೋಷನ್​ ರೀತಿ ಇದ್ದಾನೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಆ ರೀತಿ ನಟನ ಅವಶ್ಯಕತೆ ಬಹಳ ಇದೆ. ಅಂಥ ರೂಪ ಎಲ್ಲರಿಗೂ ಇರೋದಿಲ್ಲ. ಹುಡುಗರು ಸುಮ್ಮನೆ ಸಕ್ಕರೆ ಪೋಂಗಲ್​ ಥರ, ಪೊಮೆರೇನಿಯನ್ ನಾಯಿ ಥರ ಚೆಂದ ಇದ್ದರೆ ಸಾಕಾಗಲ್ಲ. ಒಂದು ರ‍್ಯಾಷ್​ ಲಕ್ಷಣ ಬೇಕು. ಅದು ಇಶಾನ್​ ಮುಖದಲ್ಲಿದೆ’ ಎಂದು ಯೋಗರಾಜ್​ ಭಟ್​ ಹೇಳಿದರು.

ಇದನ್ನೂ ಓದಿ:

ನಿರ್ದೇಶಕ ಪವನ್​ ಒಡೆಯರ್ ಎರಡನೇ ಪತ್ನಿ ಯಾರು? ‘ರೇಮೋ’ ವೇದಿಕೆ ಮೇಲೆ ​ಮಸ್ತ್​ ಮಾತು

ಪುನೀತ್​ ಹೊಸ ಚಿತ್ರ ‘ಲಕ್ಕಿ ಮ್ಯಾನ್​’ ಶೀಘ್ರವೇ ರಿಲೀಸ್​; ಅಪ್ಪು ಅಭಿಮಾನಿಗಳಿಗೆ ಗುಡ್​ ನ್ಯೂಸ್​

Follow us on

Click on your DTH Provider to Add TV9 Kannada