ಕಂಪನಿಗಳ ಶೇರು ಕೊಳ್ಳುವುದು ಐಪಿಎಲ್​​​ನಲ್ಲಿ ಫ್ರಾಂಚೈಸಿಗಳು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಕ್ರಮಕ್ಕೆ ಹೋಲಿಕೆಯಾಗಿದೆ: ಡಾ ಬಾಲಾಜಿ ರಾವ್

ಕೆಲವು ಸಲ ಕೇವಲ ರೂ. 20 ಲಕ್ಷ ಮೂಲಬೆಲೆಯ ಆಟಗರನೊಬ್ಬನನ್ನು ಫ್ರಾಂಚೈಸಿಗಳು ರೂ. 5-6 ಕೋಟಿಗೆ ಖರೀದಿಸುತ್ತಾರೆ. ಯಾಕೆಂದರೆ ಅವನ ಸಾಮರ್ಥ್ಯದ ಮೇಲೆ ಅವರಿಗೆ ನಂಬಿಕೆ ಇರುತ್ತದೆ.

ಖ್ಯಾತ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಅವರು ಇವತ್ತಿನ ಸಂಚಿಕೆಯಲ್ಲಿ ಒಂದು ಮೂಲಭೂತ ಪ್ರಶ್ನೆಯ ಬಗ್ಗೆ ಚರ್ಚಿಸಿದ್ದಾರೆ. ಹೌದು, ಅನೇಕ ಭಾರತೀಯರ ಮನಸ್ಸಿನಲ್ಲಿ ಏಳುವ ಪ್ರಶ್ನೆಯೇನೆಂದರೆ, ಶೇರು ಮಾರುಕಟ್ಟೆಯ ಬಗ್ಗೆ ತಮಗೆ ಏನೂ ಗೊತ್ತಿಲ್ಲ, ಹಿಂದೆ ಹಣ ಹೂಡಿದ ಅನುಭವವೂ ಇಲ್ಲ, ಯಾವ ಕಂಪನಿಯು ಶೇರುಗಳನ್ನು ಕೊಳ್ಳೋದು, ಹೇಗೆ ಮುಂದುವರಿಯುವುದು ಅನ್ನೋದು. ಶೇರುಗಳಲ್ಲಿ ಹಣ ಹೂಡಲು ಕಂಪನಿ ಆರಿಸಿಕೊಳ್ಳುವುದನ್ನು ಡಾ ರಾವ್ ಅವರು, ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ಆಡುವ ಆಟಗಾರರಿಗೆ ಹೋಲಿಸುತ್ತಾರೆ. ಬೇರೆ ಬೇರೆ ಫ್ರಾಂಚೈಸಿಗಳಿಗೆ ಆಡುವ ಆಟಗಾರರೆಲ್ಲ ಕಮಾಡಿಟಿಗಳಿದ್ದಂತೆ ಅವರು ಹೇಳುತ್ತಾರೆ. ಅವರನ್ನು ಫ್ರಾಂಚೈಸಿಗಳು ಖರೀದಿಸುತ್ತಾರೆ ಮತ್ತು ಮಾರುತ್ತಾರೆ. ಮಾರುತ್ತಾರೆ ಅನ್ನುವುದರ ಅರ್ಥ ಒಬ್ಬ ಆಟಗಾರನ ಪ್ರದರ್ಶನ ಒಂದು ಸೀಸನಲ್ಲಿ ಹೇಳಿಕೊಳ್ಳವುಂಥದ್ದು ಆಗಿರದಿದ್ದರೆ ಅವನನ್ನು ಕೈಬಿಡುತ್ತಾರೆ. ಸೀಸನ್​ಗೆ ಮೊದಲು ನಡೆಯುವ ಹರಾಜಿನಲ್ಲಿ ಅವನ ಸಾಮರ್ಥ್ಯದ ಮೇಲೆ ಭರವಸೆಯಿರುವ ಬೇರೆ ಫ್ರಾಂಚೈಸಿಯೊಂದು ಖರೀದಿಸಬಹುದು.

ಕೆಲವು ಸಲ ಕೇವಲ ರೂ. 20 ಲಕ್ಷ ಮೂಲಬೆಲೆಯ ಆಟಗರನೊಬ್ಬನನ್ನು ಫ್ರಾಂಚೈಸಿಗಳು ರೂ. 5-6 ಕೋಟಿಗೆ ಖರೀದಿಸುತ್ತಾರೆ. ಯಾಕೆಂದರೆ ಅವನ ಸಾಮರ್ಥ್ಯದ ಮೇಲೆ ಅವರಿಗೆ ನಂಬಿಕೆ ಇರುತ್ತದೆ. ಇದೇ ಸೂತ್ರ ಶೇರು ಮಾರ್ಕೆಟ್ ಗೆ ಅನ್ವಯವಾಗುತ್ತದೆ ಎಂದು ಡಾ ರಾವ್ ಹೇಳುತ್ತಾರೆ.

ನಾವು ಬ್ಯಾಂಕ್ ಮತ್ತು ಫೋಸ್ಟ್ ಆಫೀಸಿನಲ್ಲಿ ಹಣವನ್ನು ನಿಶ್ಚಿತ ಠೇವಣಿಯಾಗಿ ಹೂಡುವಾಗ ಮನಸ್ಸಿನಲ್ಲಿ ನಮಗೆ ಯಾವುದೇ ಅನಿಶ್ಚಿತತೆ ಇರುವುದಿಲ್ಲ. ಅದೇ ನಿರಾಳತೆಯೊಂದಿಗೆ ನಾವು ಟಾಪ್ ಪರ್ಫಾರ್ಮಿಂಗ್ ಕಂಪನಿಗಳನ್ನು ಹಣ ಹೂಡಲು ಆರಿಸಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ.

ಎಸಿಸಿ, ಐಟಿಸಿ, ಸಿಪ್ಲಾ, ಐಸಿಐಸಿಐ, ಮಾರುತಿ ಮೊದಲಾದ ಕಂಪನಿಗಳು ಪ್ರತಿವರ್ಷ ತಮ್ಮ ವಹಿವಾಟಿನಲ್ಲಿ ಪ್ರಗತಿ ಕಾಣುತ್ತಲೇ ಸಾಗಿವೆ. ಇಂಥ ಕಂಪನಿಗಳು ವಿರಾಟ್ ಕೊಹ್ಲಿ ಇದ್ದಂತೆ, ಅವುಗಳ ಬ್ರ್ಯಾಂಡ್ ವ್ಯಾಲ್ಯೂ ಯಾವತ್ತೂ ಕಡಿಮೆಯಾಗುವುದಿಲ್ಲ ಅಂತ ಡಾ ರಾವ್ ಹೇಳುತ್ತಾರೆ.

ಹಾಗೆಯೇ, ಇನ್ಫೋಸಿಸ್, ವಿಪ್ರೋ, ಎಸ್ ಬಿ ಐ, ಹೆಚ್ ಡಿ ಎಫ್ ಸಿ, ಏಷ್ಯನ್ ಪೇಂಟ್ಸ್ ಮೊದಲಾದ ಕಂಪನಿಗಳು ಸಹ ಹೂಡಿಕೆಗೆ ಉತ್ತಮ ಆಯ್ಕೆಗಳು ಎಂದು ಡಾ ಬಾಲಾಜಿ ರಾವ್ ಹೇಳುತ್ತಾರೆ.

ಇದನ್ನೂ ಓದಿ:   ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್​ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಪಿಡಬ್ಲೂಡಿ ಶಾಂತಗೌಡ; ವಿಡಿಯೋ ನೋಡಿ

Click on your DTH Provider to Add TV9 Kannada