ಕೆಂಪು ಸುಂದರಿ ವೆಸ್ಪಾ ಎಲೆಟ್ಟ್ರಿಕಾ ಸ್ಕೂಟರ್ ಭಾರತದಲ್ಲಿ ರಸ್ತೆಗಿಳಿದಿದೆ; ಜನ ಬೆರಗುಗಣ್ಣುಗಳಿಂದ ನೋಡುತ್ತಿದ್ದಾರೆ!
ವೆಸ್ಪಾ ಸಂಸ್ಥೆಯು ಈ ಕೆಂಪು ವೆಸ್ಪಾ ಎಲೆಟ್ಟ್ರಿಕಾ ಸ್ಕೂಟರ್ ಅನ್ನು ಆಟೋ ಎಕ್ಸ್ಪೋ 2020 ನಲ್ಲೇ ಪ್ರದರ್ಶಿಸಿತ್ತು. ಈಗ ಅದನ್ನು ಭಾರತದಲ್ಲಿ ತಯಾರಿಸಿ ಮೇಡ್-ಇನ್-ಇಂಡಿಯಾ ಸ್ಕೂಟರ್ ಆಗಿ ಲಾಂಚ್ ಮಾಡುತ್ತಿದೆ.
ಕೆಂಪು ಬಣ್ಣದ ಕಾರು, ದ್ವಿಚಕ್ರವಾಹನಗಳು ನೋಡಲು ಸುಂದರ ಅನ್ನುವುದರಲ್ಲಿ ಎರಡು ಮಾತಿಲ್ಲ. ಭಾರತದಲ್ಲಿ ಜನರಿಗೆ ಕೆಂಪು ಬಣ್ಣ ಇಷ್ಟವಾಗುವುದರಿಂದ ವಾಹನ ಯಾವುದೇ ಮೇಕ್ ಆಗಿರಲಿ ಅದಕ್ಕೆ ಸಹಜವಾಗೇ ಬೇಡಿಕೆ ಹೆಚ್ಚಿರುತ್ತದೆ. ಇಟಲಿಯ ವೆಸ್ಪಾ ಕಂಪನಿಯು ಭಾರತೀಯ ನಾಡಿಮಿಡಿತವನ್ನು ಚೆನ್ನಾಗಿ ಅರ್ಥಮಾಡಿಕೊಂಡಂತಿದೆ. ಹಾಗಾಗೇ, ತನ್ನ ವೆಸ್ಪಾ ಸ್ಕೂಟರ್ಗಳ ಎಲೆಕ್ಟ್ರಿಕ್ ವರ್ಷನ್ ಕಡು ಕೆಂಪು ಬಣ್ಣದಲ್ಲಿ ಲಾಂಚ್ ಮಾಡಿದೆ. ನಾವು ಯಾವಾಗಲೂ ಚರ್ಚಿಸುವ ಹಾಗೆ ಇನ್ನು ಏನಿದ್ದರೂ ಎಲೆಕ್ಟ್ರಿಕ್ ವಾಹನಗಳ ಜಮಾನಾ ಮಾರಾಯ್ರೇ. ಹೆಚ್ಚು ಕಡಿಮೆ ಎಲ್ಲ ಆಟೊಮೊಬೀಲ್ ಕಂಪನಿಗಳು ಎಲೆಕ್ಟ್ರಿಕ್ ಆವೃತ್ತಿಗಳನ್ನು ತಯಾರಿಸಲು ಮುಂದಾಗಿ ಬಿಟ್ಟಿವೆ ಮತ್ತು ಆಗುತ್ತಿವೆ.
ವೆಸ್ಪಾ ಸಂಸ್ಥೆಯು ಈ ಕೆಂಪು ವೆಸ್ಪಾ ಎಲೆಟ್ಟ್ರಿಕಾ ಸ್ಕೂಟರ್ ಅನ್ನು ಆಟೋ ಎಕ್ಸ್ಪೋ 2020 ನಲ್ಲೇ ಪ್ರದರ್ಶಿಸಿತ್ತು. ಈಗ ಅದನ್ನು ಭಾರತದಲ್ಲಿ ತಯಾರಿಸಿ ಮೇಡ್-ಇನ್-ಇಂಡಿಯಾ ಸ್ಕೂಟರ್ ಆಗಿ ಲಾಂಚ್ ಮಾಡುತ್ತಿದೆ.
ವೆಸ್ಪಾ ಎಲೆಟ್ಟ್ರಿಕಾ ಸ್ಕೂಟರ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗೆ ಜೋಡಿಸಲಾದ 4ಕಿವ್ಯಾ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರುತ್ತದೆ. ಗರಿಷ್ಠ ಟಾರ್ಕ್ ಚಕ್ರದಲ್ಲಿ 200 ಎನ್ ಎಮ್ ನಷ್ಟಿದೆ. ಎಲೆಕ್ಟ್ರಿಕ್ ಸ್ಕೂಟರ್ ಇಕೋ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 100 ಕಿಮೀ ಮತ್ತು ಪವರ್ ಮೋಡ್‌ನಲ್ಲಿ 70 ಕಿಮೀ ವ್ಯಾಪ್ತಿಯೊಂದಿಗೆ ಬರುತ್ತದೆ. 220ವಿ ಸಾಕೆಟ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 3.5 ಗಂಟೆ ಸಮಯ ಹಿಡಿಯುತ್ತದೆ.
ವೆಸ್ಪಾದ ಪೆಟ್ರೋಲ್-ಚಾಲಿತ ದ್ವಿಚಕ್ರ ವಾಹನಗಳಿಗೆ ವೆಸ್ಪಾ ಎಲೆಟ್ಟ್ರಿಕಾ ಅಂಡರ್‌ಪಿನ್ನಿಂಗ್‌ಗಳು ಹೋಲುತ್ತವೆ. ಟ್ರೇಲಿಂಗ್ ಲಿಂಕ್ ಫ್ರಂಟ್ ಸಸ್ಪೆನ್ಷನ್, ಸಿಂಗಲ್ ರಿಯರ್ ಶಾಕ್ ಅಬ್ಸಾರ್ಬರ್‌ನೊಂದಿಗೆ ಇದು ವಿನ್ಯಾಸಗೊಂಡಿದೆ. ಸ್ಕೂಟರ್ 12-ಇಂಚು ಮುಂಭಾಗದಲ್ಲಿ ಮತ್ತು 11-ಇಂಚಿನ ಹಿಂಭಾಗದ ಅಲಾಯ್ ವೀಲ್ ಅನ್ನು ಕ್ರಮವಾಗಿ 200 ಎಮ್ ಎಮ್ ಡಿಸ್ಕ್ ಮತ್ತು 140 ಎಮ್ ಎಮ್ ಡ್ರಮ್‌ನೊಂದಿಗೆ ಸುತ್ತುತ್ತದೆ.
ಲೈಟಿಂಗ್ ಸಿಸ್ಟಮ್ ಎಲ್ಲ ಎಲ್ ಇ ಡಿ ವರ್ಷನ್ ಆಗಿದೆ. ಟಿ ಎಫ್ ಟಿ ಸ್ಕ್ರೀನ್, ವೆಸ್ಪಾ ಮೊಬೈಲ್ ಅಪ್ಲಿಕೇಶನ್ ಸಂಪರ್ಕದೊಂದಿಗೆ ಕರೆ ಹಾಗೂ ಸಂದೇಶ ಡಿಸ್ಪ್ಲೇ ಮತ್ತು ಇತರ ಗಮನಾರ್ಹ ವೈಶಿಷ್ಟ್ಯಗಳನ್ನು ವೆಸ್ಪಾ ಎಲೆಟ್ಟ್ರಿಕಾ ಒಳಗೊಂಡಿದೆ.
ಇದನ್ನೂ ಓದಿ: ಸೆಲ್ಫಿ ಕೇಳಿ ನಟಿ ಕವಿತಾ ಗೌಡ ಅವರನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು!; ವೈರಲ್ ವಿಡಿಯೋದ ಅಸಲಿಯತ್ತೇನು?