Viral Video : ಟ್ಯಾಟೂ ಅಥವಾ ಹಚ್ಚೆ ಹಾಕಿಸಿಕೊಳ್ಳಬೇಕೆಂದರೆ ಹಳೆಯ ಕಾಲದಲ್ಲಿ ಎಲ್ಲೂ ಹೋಗಬೇಕಿರಲಿಲ್ಲ. ಹಚ್ಚೆ ಹಾಕುವವರೇ ಮನೆಮನೆಗೆ ಬಂದು ಹಾಕಿ ಹೋಗುತ್ತಿದ್ದರು. ಆದರೆ ಈಗ ಆಧುನಿಕ ಕಾಲದಲ್ಲಿ ಟ್ಯಾಟೂ ಸ್ಟುಡಿಯೋಗೇ ಹೋಗಬೇಕು. ಇಲ್ಲವಾದರೆ ಎಲ್ಲಿ ಹೋಗಿ ಹಾಕಿಸಿಕೊಳ್ಳಬಹುದು. ಈ ಬಗ್ಗೆ ನಿಮಗೇನಾದರೂ ಕಲ್ಪನೆ ಬರುತ್ತದೆಯೇ? ಆದರೆ, ಇಲ್ಲೊಬ್ಬ ಟ್ಯಾಟೂ ಕಲಾವಿದರು ಸಾವಿರಾರು ಅಡಿಗಳಷ್ಟು ಮೇಲೆ ಅಂದರೆ ವಿಮಾನದಲ್ಲಿ ಅಪರಿಚಿತರೊಬ್ಬರಿಗೆ ಟ್ಯಾಟೂ ಹಾಕಿದ ಘಟನೆ ನಡೆದಿದೆ.
ಟ್ಯಾಟೂ ಕಲಾವಿದ ಆ್ಯಶರ್ ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ. ಪಕ್ಕದಲ್ಲಿದ್ದ ಪ್ರಯಾಣಿಕರು ಆ್ಯಶರ್ ಮೈಮೇಲಿನ ಟ್ಯಾಟೂ ನೋಡಿ ಆಕರ್ಷಿತರಾಗಿ ಹೊಗಳಲಾರಂಭಿಸಿದರು. ನಂತರ ತನಗೂ ಟ್ಯಾಟೂ ಹಾಕಿಸಿಕೊಳ್ಳುವುದಿದೆ. ಆದರೆ ಎಲ್ಲಿ ಹಾಕಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೇನೆ ಎಂದು ಆ್ಯಶರ್ ಅವರನ್ನುದ್ದೇಶಿಸಿ ಹೇಳಿದರು. ಆಗ ಆ್ಯಶರ್, ‘ಓಹ್ ಹೌದಾ, ನನ್ನ ಬಳಿ ಟ್ಯಾಟೂ ಹಾಕುವ ಎಲ್ಲಾ ಟೂಲ್ಸ್ ಇವೆ ಎಂದು ಸಾಂದರ್ಭಿಕವಾಗಿ ತಮಾಷೆಗಾಗಿ ಹೇಳಿದೆ. ನಂತರ ಪರಸ್ಪರ ಮಾತನ್ನು ಮುಂದುವರಿಸಿದೆವು. ಆದರೆ, ಆಕೆ ತುಂಬಾ ಉತ್ಸುಕತೆಯಿಂದ ಮಾತನಾಡುತ್ತಿದ್ದಳು. ಪ್ರವಾಸದಲ್ಲಿ ಸಾಹಸವನ್ನು ಹುಡುಕುತ್ತಿರುವಂತೆಯೂ ತೋರಿತು. ನಂತರ ಅವಳ ಬಲಗೈ ಮೇಲೆ Hello ಎಂದು ಟ್ಯಾಟೂ ಹಾಕಿದೆ’ ಎಂದು ‘ಬಝ್ಫೀಡ್’ಗೆ ತಿಳಿಸಿದರು.
ಆ್ಯಷರ್, ಟ್ಯಾಟೂ ಹಾಕುವ ಮೊದಲು ಶುಚಿತ್ವವನ್ನು ಖಚಿತಪಡಿಸಿಕೊಂಡು ಫ್ಲೈಟ್ ಅಟೆಂಡೆಂಟ್ಗಳಿಂದ ಅನುಮತಿ ಪಡೆದಿದ್ದರು. ವಿಮಾನದೊಳಗಿನ ನಿಶ್ಯಬ್ದದಲ್ಲಿಯೂ, ಯಾರೋ ಒಬ್ಬರು ಇಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ ಎನ್ನುವುದು ಉಳಿದ ಪ್ರಯಾಣಿಕರ ಗಮನಕ್ಕೆ ಬರಲೇ ಇಲ್ಲ!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:21 am, Thu, 1 September 22