Video: ದೈಹಿಕ ನ್ಯೂನತೆ ಬದಿಗಿರಿಸಿ ಮೈದಾನದಲ್ಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕ

ಬದುಕಿನಲ್ಲಿ ನ್ಯೂನತೆ ಏನೇ ಇದ್ದರೂ ಎದ್ದು ನಿಲ್ಲುವ ಛಲ ಬೇಕು. ನಮ್ಮ ಬದುಕು ಬೇರೆಯವರಿಗೆ ಮಾದರಿಯಾಗಬೇಕು. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ದೈಹಿಕ ನ್ಯೂನತೆಯನ್ನು ಬದಿಗಿಟ್ಟು ಆಟದ ಮೈದಾನದಲ್ಲಿ ‌ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವ ದೈಹಿಕ ಶಿಕ್ಷಕನ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಎಲ್ಲಾ ಸರಿಯಿದ್ದು ಕೈ ಕಟ್ಟಿ ಕುಳಿತುಕೊಳ್ಳುವವರಿಗೆ ಈ ಶಿಕ್ಷಕ ಮಾದರಿ ಎಂದಿದ್ದಾರೆ.

Video: ದೈಹಿಕ ನ್ಯೂನತೆ ಬದಿಗಿರಿಸಿ ಮೈದಾನದಲ್ಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕ
ವೈರಲ್‌ ವಿಡಿಯೋ
Image Credit source: Instagram

Updated on: Nov 17, 2025 | 2:21 PM

ಬದುಕನ್ನು (life) ಬಂದ್ದಂತೆ ಸ್ವೀಕರಿಸಬೇಕು. ಏನೇ ನ್ಯೂನತೆಗಳಿದ್ದರೂ ಎಲ್ಲವನ್ನು ಜಯಿಸುವೆ ಎನ್ನುವ ಮನೋಭಾವವಿದ್ದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ದೈಹಿಕ ಅಂಗ ವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಮಾಡುವ ವ್ಯಕ್ತಿಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ದೈಹಿಕ ನ್ಯೂನತೆಯನ್ನು ಬದಿಗಿರಿಸಿ ದೈಹಿಕ ಶಿಕ್ಷಕರೊಬ್ಬರು (physical education teacher) ವೀಲ್‌ಚೇರ್‌ನಲ್ಲೇ ಕುಳಿತು ಆಟದ ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಕೆಲಸ ಮಾಡುವ ಮನಸ್ಸು ಹಾಗೂ ಛಲವಿದ್ದರೆ ಸಾಕು, ನಿಮ್ಮಲ್ಲಿರುವ ನ್ಯೂನತೆಗಳು ಲೆಕ್ಕಕ್ಕೆ ಬರಲ್ಲ ಎನ್ನುವುದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ದೈಹಿಕ ಶಿಕ್ಷಕರ ವಿಡಿಯೋ ನೆಟ್ಟಿಗರು ಗಮನ ಸೆಳೆದಿದ್ದು ಮೆಚ್ಚುಗೆ ವ್ಯಕ್ತವಾಗಿದೆ.

jpbadakere ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಈ ವಿಡಿಯೋದ ಶೀರ್ಷಿಕೆಯಲ್ಲಿ ಮೊನ್ನೆ ಅಷ್ಟೇ ಇವರ ಪರಿಚಯ ಮಾಡಿದೆ. ಕ್ರೀಡಾ ಅಂಕಣದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಒಂದು ಝಲಕ್.ವೀರರಾಜೇಂದ್ರ ಹೆಗ್ಡೆ ದೈಹಿಕ ಶಿಕ್ಷಕರು. ಜಿ ಹೆಚ್ ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಂಗಡಿ ಕೆಲವೊಂದು ಪ್ರಶಸ್ತಿಗಳು ಮತ್ತು ಸನ್ಮಾನಗಳು ಇವರ ನೆನಪಿಗೆ ಬಾರದೇ ಹೋಯಿತು.ಬೇಜಾರು ಸಂಗತಿ… ಮುಂದಿನ ದಿನದಲಾದರೂ ಇಂತಹ ಕ್ರೀಡಾ ಸ್ಫೂರ್ತಿಯ ಶಿಕ್ಷಕರನ್ನು ಗುರುತಿಸಿ ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ದೈಹಿಕ ಶಿಕ್ಷಕರೊಬ್ಬರು ವೀಲ್‌ಚೇರ್‌ನಲ್ಲೇ ಕುಳಿತು ಮೈದಾನದಲ್ಲಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ಕಾಣಬಹುದು. ಏನೇ ನ್ಯೂನತೆಯಿದ್ದರೂ ತಮ್ಮ ಕಾಯಕವನ್ನು ಯಾವುದಕ್ಕೂ ಅಂಜದೆ ಮಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ:ಮೂರು ಹೊತ್ತಿನ ಊಟಕ್ಕಾಗಿ ದೊಂಬರಾಟ, ಹಗ್ಗದ ಮೇಲೆ ಬಾಲಕಿಯ ಸರ್ಕಸ್ ನೋಡಿ

ಈ ವಿಡಿಯೋ ನಲವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರರು, ಮನಸ್ಸಿದ್ದರೆ ಎಲ್ಲರೂ ಸಾಧ್ಯ. ದೈಹಿಕ ನ್ಯೂನತೆ ಮನಸ್ಸಿಗೆ ದೇಹಕ್ಕಲ್ಲ ಎಂದಿದ್ದಾರೆ. ಇನ್ನೊಬ್ಬರು, ಎಲ್ಲರಿಗೂ ಮಾದರಿಯಂತಿರುವ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ