Video: ಪುರುಷರೇ ಇಲ್ಲಿನ ಕಾಗೆಗಳ ಟಾರ್ಗೆಟ್, ಹೋಗೋ-ಬರೋ ಗಂಡಸ್ರ ತಲೆಗೆ ಈ ಕಾಗಕ್ಕಗಳು ಹೇಗೆ ಕುಕ್ಕುತ್ತವೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 12, 2024 | 5:38 PM

ಈ ಭೂಮಿ ಮೇಲೆ ನಡೆಯುವ ಕೆಲವೊಂದು ಘಟನೆಗಳು ನಮ್ಮಲ್ಲಿ ಅಚ್ಚರಿಯನ್ನು ಉಂಟು ಮಾಡುತ್ತವೆ. ಇದೀಗ ಇಲ್ಲೊಂದು ಅಂತಹದೇ ಅಚ್ಚರಿಯ ಘಟನೆ ನಡೆದಿದೆ. ಸಾಮಾನ್ಯವಾಗಿ ಕಾಗೆಗಳು ಮನುಷ್ಯರ ತಂಟೆಗೆ ಬರೋಲ್ಲ, ಒಬ್ಬರನ್ನೇ ಟಾರ್ಗೆಟ್‌ ಮಾಡಿ ಕುಕ್ಕುವುದಿಲ್ಲ. ಆದ್ರೆ ಇಲ್ಲಿರುವ ಕಾಗೆಗಳಿಗೆ ಪುರುಷರೇ ಟಾರ್ಗೆಟ್.‌ ಇಲ್ಲಿ ಹೋಗೋ ಬರೋ ಗಂಡಸ್ರ ತಲೆಗೆ ಈ ಕಾಗೆಗಳು ಪದೇ ಪದೇ ಕುಕ್ಕುತ್ತವೆ. ಈ ಅಚ್ಚರಿಯ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಅಷ್ಟಾಗಿ ಈ ಕಾಗೆಗಳು ಮನುಷ್ಯರಿಗೆ ಕುಕ್ಕುವುದಿಲ್ಲ. ತೀರಾ ಅಪರೂಪದ ಸಂದರ್ಭದಲ್ಲಿ ಆಹಾರವನ್ನರಸುತ್ತಾ ಬರುವ ಕಾಗೆಗಳು ನಮ್ಮ ಕೈಯಲ್ಲಿ ಏನಾದ್ರೂ ತಿಂಡಿ ಕಂಡ್ರೆ ಕುಕ್ಕಿ ಆ ತಿಂಡಿಯನ್ನು ಎತ್ತಿಕೊಂಡು ಹೋಗುತ್ತವೆ. ಇಲ್ಲಾಂದ್ರೆ ಸುಮ್ಮನೆ ಒಮ್ಮೊಮ್ಮೆ ಕೆಲವರ ತಲೆಗೆ ಈ ಕಾಗೆಗಳು ಕುಕ್ಕುತ್ತವೆ. ಹೀಗೆ ಕಾಗೆ ಮನೆ ಹತ್ತಿರ ಬಂದು ಕೂತ್ರೆ ಅಥವಾ ಕಾಗೆ ತಲೆಗೆ ಬಂದು ಕುಕ್ಕಿದರೆ ಅದಕ್ಕೆ ಜನ ನೂರು ಅರ್ಥವನ್ನು ಕಲ್ಪಿಸುತ್ತಾರೆ. ಈ ಕಾಗೆ ಕುಕ್ಕಿದ್ರೂ ಒಬ್ಬರನ್ನೇ ಟಾರ್ಗೆಟ್‌ ಮಾಡಿ ಕುಕ್ಕುವುದಿಲ್ಲ. ಆದ್ರೆ ಇಲ್ಲೊಂದು ಕಾಗೆಗಳಿಗೆ ಮಾತ್ರ ಪುರುಷರೇ ಟಾರ್ಗೆಟ್.‌ ಹೌದು ಹೋಗೋ ಬರೋ ಗಂಡಸ್ರ ತಲೆಗೆ ಈ ಕಾಗೆಗಳು ಪದೇ ಪದೇ ಕುಕ್ಕುತ್ತಲೇ ಇರುತ್ತದೆ. ಈ ಅಚ್ಚರಿಯ ಸಂಗತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಈ ಅಚ್ಚರಿಯ ಘಟನೆ ತೆಲಂಗಾಣದ ಸಿರ್ಸಿಲ್ಲಾ ಎಂಬಲ್ಲಿ ನಡೆದಿದ್ದು, ಇಲ್ಲಿನ ಹಳೆ ಬಸ್‌ಸ್ಟಾಂಡ್‌ ನಿಲ್ದಾಣದ ಬಳಿ ಕಾಗೆಗಳು ಕೇವಲ ಪುರುಷರ ಮೇಲೆ ಮಾತ್ರ ಅಟ್ಯಾಕ್ ಮಾಡುತ್ತಿವೆ. ಕಟ್ಟ ಮೈಸಮ್ಮ ದೇವಸ್ಥಾನದ ಪಕ್ಕದಲ್ಲಿರುವ ಬೇವಿನ ಮರದಲ್ಲಿ ಹತ್ತಾರು ಕಾಗೆಗಳು ಗೂಡು ಕಟ್ಟಿಕೊಂಡಿದ್ದು, ಇಲ್ಲಿ ಹತ್ತಿರದಲ್ಲಿ ಯಾರದ್ರೂ ಗಂಡಸರನ್ನು ಕಂಡ್ರೆ ಈ ಕಾಗೆಗಳು ಹಾರಿ ಬಂದು ಅವರ ತಲೆ ಮೇಲಿ ಕುಕ್ಕುತ್ತವೆ. ಆದ್ರೆ ಈ ಕಾಗೆಗಳು ಪುರುಷರ ಮೇಲೆ ಮಾತ್ರ ಏಕೆ ದಾಳಿ ಮಾಡುತ್ತಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಈ ಕುರಿತ ಪೋಸ್ಟ್‌ ಒಂದನ್ನು TeluguScribe ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪುರುಷರ ಮೇಲೆ ದಾಳಿ ಮಾಡುವ ಕಾಗೆಗಳು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ವಿಡಿಯೋದಲ್ಲಿ ಸಿರ್ಸಿಲ್ಲಾದ ಹಳೆ ಬಸ್‌ಸ್ಟಾಂಡ್‌ ಬಳಿ ಓಡಾಡುತ್ತಿರುವ ಪುರುಷರನ್ನೇ ಟಾರ್ಗೆಟ್‌ ಮಾಡಿ, ಮರದ ಮೇಲಿಂದ ಹಾರಿ ಬರುವ ಕಾಗೆಗಳು ಗಂಡಸ್ರ ತಲೆಗೆ ಕುಕ್ಕಿ ಬಳಿಕ ತಕ್ಷಣ ಅಲ್ಲಿಂದ ಹಾರಿ ಹೋಗುವಂತಹ ಅಚ್ಚರಿಯ ದೃಶ್ಯವನ್ನು ಕಾಣಬಹುದು. ಅಲ್ಲಿ ಓಡಾಡುವ ಮಹಿಳೆಯರಿಗೆ ಈ ಕಾಗೆಗಳು ಏನು ಮಾಡುವುದಿಲ್ಲ ಆದ್ರೆ ಪುರುಷರ ಮೇಲೆ ಮಾತ್ರ ಅಟ್ಯಾಕ್‌ ಮಾಡುತ್ತಿವೆ.

ಇದನ್ನೂ ಓದಿ: ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗೆ ಸೇರ್ಪಡೆಯಾಗಲಿದೆ ‌ ನಾಲ್ಕನೇ ಬಣ್ಣ, ಆ ಬಣ್ಣ ಯಾವುದು ಗೊತ್ತಾ?

ಆಗಸ್ಟ್‌ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 75 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಬಹುಶಃ ಇದು ಸ್ತ್ರೀವಾದಿ ಕಾಗೆಗಳಿರಬೇಕುʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅರೇ ಇದೆಂಥಾ ಅಚ್ಚರಿʼ ಎಂದು ಶಾಕ್‌ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ