Video: ಹೊಳೆಯುವ ತ್ವಚೆಗಾಗಿ ಮುಖಕ್ಕೆ ತನ್ನ ಮಲವನ್ನು ಹಚ್ಚುತ್ತಾಳಂತೆ ಈ ಮಾಡೆಲ್‌

ಹೆಂಗಳೆಯರಿಗೆ ತಮ್ಮ ತ್ವಚೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ಇರುತ್ತದೆ. ಇದಕ್ಕಾಗಿ ದುಬಾರಿ ಕ್ರೀಮ್‌, ನ್ಯಾಚುರಲ್‌ ಫೇಸ್‌ ಪ್ಯಾಕ್‌ ಇತ್ಯಾದಿಗಳನ್ನು ಮುಖಕ್ಕೆ ಹಚ್ಚುತ್ತಾರೆ. ಮತ್ತು ಮುಖದ ಅಂದವನ್ನು ಹೆಚ್ಚಿಸಲು, ಹೊಳೆಯುವ ಚರ್ಮಕ್ಕಾಗಿ ವಿವಿಧ ಸ್ಕಿನ್ ಕೇರ್‌ಗಳನ್ನು ಪಾಲಿಸುತ್ತಾರೆ. ಆದ್ರೆ ಇಲ್ಲೊಬ್ಬಳು ಮಾಡೆಲ್‌ ಮಾತ್ರ ಇವೆಲ್ಲವನ್ನೂ ಬಿಟ್ಟು ತನ್ನ ತ್ವಚೆಯ ಅಂದವನ್ನು ಹೆಚ್ಚಿಸಲು ಮುಖಕ್ಕೆ ತನ್ನ ಮಲವನ್ನೇ ಹಚ್ಚುತ್ತಾಳಂತೆ. ಈಕೆಯ ಈ ವಿಚಿತ್ರ ಸ್ಕಿನ್‌ ಕೇರ್‌ಗೆ ವೈದ್ಯರೇ ದಂಗಾಗಿದ್ದಾರೆ.

Video: ಹೊಳೆಯುವ ತ್ವಚೆಗಾಗಿ ಮುಖಕ್ಕೆ ತನ್ನ ಮಲವನ್ನು ಹಚ್ಚುತ್ತಾಳಂತೆ ಈ ಮಾಡೆಲ್‌
ವೈರಲ್​​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 12, 2024 | 1:44 PM

ಚೆನ್ನಾಗಿ ಕಾಣಿಕೊಳ್ಳಬೇಕು, ಕಾಂತಿಯುತ ತ್ವಚೆ ತಮ್ಮದಾಗಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಹೀಗೆ ಮುಖದ ಅಂದವನ್ನು ಹೆಚ್ಚಿಸಲು, ಹೊಳೆಯುವ ತ್ವಚೆಯನ್ನು ಪಡೆಯಲು ಹೆಚ್ಚಿನವರು ದುಬಾರಿ ಕ್ರೀಮ್‌, ಫೇಶಿಯಲ್‌, ಫೇಸ್‌ಪ್ಯಾಕ್‌ ಇತ್ಯಾದಿಗಳನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬಳು ಮಾಡೆಲ್‌ ಮಾತ್ರ ದುಬಾರಿ ಕ್ರೀಮ್‌, ನ್ಯಾಚುರಲ್‌ ಫೇಸ್‌ಪ್ಯಾಕ್‌ ಎಲ್ಲವನ್ನೂ ಬಿಟ್ಟು ತನ್ನ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಮುಖಕ್ಕೆ ತನ್ನ ಮಲವನ್ನೇ ಹಚ್ಚಿಕೊಳ್ಳುತ್ತಾಳಂತೆ. ಈ ಕುರಿತ ವಿಡಿಯೋವೊಂದನ್ನು ಆಕೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈಕೆಯ ಈ ವಿಲಕ್ಷಣ ಸ್ಕಿನ್‌ ಕೇರ್‌ಗೆ ವೈದ್ಯರೇ ದಂಗಾಗಿದ್ದಾರೆ.

ವೃತ್ತಿಯಲ್ಲಿ ಮಾಡೆಲ್‌ ಆಗಿರುವ ಬ್ರೆಜಿಲ್‌ನ ಡೆಬೊರಾ ಪೀಕ್ಸೊಟೊ (31) ತಾನು ಸುಂದರವಾಗಿ ಕಾಣಲು ಹಾಗೂ ತ್ವಚೆಯ ಅಂದವನ್ನು ಹೆಚ್ಚಿಸಲು ಈಕೆ ಮಲವನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾಳಂತೆ. ಇಂಟರ್‌ನೆಟ್‌ನಲ್ಲಿ ಈ ಕುರಿತ ಒಂದು ಆರ್ಟಿಕಲ್‌ ಓದಿದ್ದೆ. ಅದರಲ್ಲಿ ಹೇಳಿರುವಂತೆ ಮುಖಕ್ಕೆ ಮಲವನ್ನು ಹಚ್ಚುವುದರಿಂದ ಮುಖ ಸುಂದರವಾಗಿ ಕಾಣಿಸುವುದು ಮಾತ್ರವಲ್ಲದೆ, ಇದು ವಯಸ್ಸಾಗುವಿಕೆಯ ಲಕ್ಷಣವನ್ನು ಕೂಡಾ ಕಡಿಮೆ ಮಾಡುತ್ತದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಈ ಕುರಿತ ವಿಡಿಯೋವನ್ನು ಆಕೆ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ (deborapeixoto.ofc) ಹಂಚಿಕೊಂಡಿದ್ದು, ವಿಡಿಯೋದಲ್ಲಿ ಆಕೆ ಫೇಸ್‌ ಪ್ಯಾಕ್‌ ತರಹ ಮುಖಕ್ಕೆ ಮಲವನ್ನು ಹಚ್ಚಿಕೊಳ್ಳುವ ದೃಶ್ಯವನ್ನು ಕಾಣಬಹುದು. ಈಕೆಯ ಈ ವಿಚಿತ್ರ ಅವತಾರಕ್ಕೆ ನೆಟ್ಟಿಗರಂತೂ ಫುಲ್‌ ಗರಂ ಆಗಿದ್ದಾರೆ.

ಇದನ್ನೂ ಓದಿ: ಪಾಟ್ನಾ ಏರ್‌ಪೋರ್ಟ್‌ನಲ್ಲಿ ಹಾವು-ಮುಂಗುಸಿ ಕಾಳಗ; ವೈರಲ್‌ ಆಯ್ತು ರೋಚಕ ವಿಡಿಯೋ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ:

ವೈರಲ್‌ ಆಗುತ್ತಿರುವ ಈ ವಿಡಿಯೋ ಕುರಿತು ಲಂಡನ್‌ನ ಕ್ಯಾಡೋಗನ್‌ ಕ್ಲಿನಿಕ್‌ನ ಕನ್ಸಲ್ಟೆಂಟ್‌ ಡರ್ಮಟಾಲಜಿಸ್ಟ್‌ ಡಾ. ಸೋಫಿ ಮೊಮೆನ್‌ “ಇದು ಅತ್ಯಂತ ಕೆಟ್ಟದಾದ ಸ್ಕಿನ್‌ ಕೇರ್‌” ಎಂದು ಹೇಳಿದ್ದಾರೆ. ಈ ರೀತಿ ಮಾಡುವುದರಿಂದ ಮುಖಕ್ಕೆ ಯಾವುದೇ ರೀತಿಯ ಪ್ರಯೋಜನವೂ ಇಲ್ಲ. ಬದಲಾಗಿ ಇದರಿಂದ ಮುಖದ ಮೇಲೆ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಕುಳಿತುಕೊಳ್ಳುತ್ತವೆ. ಇದರಿಂದ ಗಂಭೀರವಾದ ಅನಾರೋಗ್ಯವೂ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ