AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪಾಟ್ನಾ ಏರ್‌ಪೋರ್ಟ್‌ನಲ್ಲಿ ಹಾವು-ಮುಂಗುಸಿ ಕಾಳಗ; ವೈರಲ್‌ ಆಯ್ತು ರೋಚಕ ವಿಡಿಯೋ

ಹೇಳಿ ಕೇಳಿ ಹಾವು ಮತ್ತು ಮುಂಗುಸಿ ಬದ್ಧ ವೈರಿಗಳು. ಈ ಎರಡು ಜೀವಿಗಳು ಪರಸ್ಪರ ಎದುರು ಬದುರಾದರೆ ಅಲ್ಲಿ ರಣ ರೋಚಕ ಕಾದಾಟವೇ ನಡೆಯುತ್ತವೆ. ಹಾವು-ಮುಂಗುಸಿಗಳ ಮಧ್ಯೆ ನಡೆಯುವ ಘನಘೋರ ಕಾಳಗದ ವಿಡಿಯೋ ದೃಶ್ಯಾವಳಿಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಏರ್‌ಪೋರ್ಟ್‌ನ ರನ್‌ ವೇ ಯಲ್ಲಿ ಮೂರು ಮುಂಗುಸಿಗಳು ಒಬ್ಬಂಟಿ ಹಾವಿನ ಜೊತೆ ಕಾಳಗಕ್ಕೆ ಇಳಿದಿವೆ. ಈ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ

Video: ಪಾಟ್ನಾ ಏರ್‌ಪೋರ್ಟ್‌ನಲ್ಲಿ ಹಾವು-ಮುಂಗುಸಿ ಕಾಳಗ; ವೈರಲ್‌ ಆಯ್ತು ರೋಚಕ ವಿಡಿಯೋ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 12, 2024 | 12:01 PM

Share

ಹಾವು ಮತ್ತು ಮುಂಗುಸಿಯನ್ನು ಆ ಜನ್ಮದ ಶತ್ರುಗಳೆಂದೇ ಹೇಳಬಹುದು. ಈ ಉಭಯ ಜೀವಿಗಳು ಯಾವುದೇ ಕ್ಷಣದಲ್ಲೂ ಎದುರು ಬದುರಾದರೆ ಅಲ್ಲೊಂದು ಘನಘೋರ ಯುದ್ಧ ನಡೆಯುವುದಂತೂ ಪಕ್ಕ. ಇವುಗಳ ನಡುವಿನ ಕಾಳಗವೇ ಬಲು ರೋಚಕ. ಈ ಪರಮ ಶತ್ರುಗಳ ನಡುವಿನ ರೋಚಕ ಕಾಳಗದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಏರ್‌ಪೋರ್ಟ್‌ನ ರನ್‌ವೇಯಲ್ಲಿಯೇ ಮೂರು ಮುಂಗುಸಿಗಳು ಒಬ್ಬಂಟಿ ಹಾವಿನ ಜೊತೆಗೆ ಕಾಳಗಕ್ಕೆ ಇಳಿದಿವೆ. ಈ ವಿಡಿಯೋ ಇದೀಗ ನೋಡುಗ ಗಮನ ಸೆಳೆಯುತ್ತಿದೆ

ಈ ಘಟನೆ ಪಾಟ್ನಾ ಏರ್‌ಪೋರ್ಟ್‌ನಲ್ಲಿ ನಡೆದಿದ್ದು, ಹಾವು ಮತ್ತು ಮುಂಗುಸಿ ಏರ್‌ಪೋರ್ಟ್‌ನ ರನ್‌ವೇಯಲ್ಲಿಯೇ ಕಾದಾಟಕ್ಕೆ ಇಳಿದಿವೆ. ಒಬ್ಬಂಟಿ ಹಾವನ್ನು ಸುತ್ತುವರಿದ ಮೂರು ಮುಂಗುಸಿಗಳು ಏರ್‌ಪೋರ್ಟ್‌ನ ರನ್‌ವೇಯನ್ನು ಯುದ್ಧ ಭೂಮಿಯನ್ನಾಗಿ ಮಾಡಿದೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

NDTV ತನ್ನ ಅಧೀಕೃತ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, “ಪಾಟ್ನಾ ಏರ್‌ಪೋರ್ಟ್‌ ರನ್‌ವೇಯಲ್ಲಿ ಹಾವು Vs ಮೂರು ಮುಂಗುಸಿಗಳ ಫೈಟ್”‌ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ವಿಡಿಯೋದಲ್ಲಿ ಹಾವಿನ ಮೇಲೆ ಮೂರು ಮುಂಗುಸಿಗಳು ಅಟ್ಯಾಕ್‌ ಮಾಡುವುದನ್ನು ಕಾಣಬಹುದು. ಪಾಟ್ನಾ ಏರ್‌ಪೋರ್ಟ್‌ ರನ್‌ವೇಯಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ಹಾವಿನ ಮೇಲೆ ಮೂರು ಮುಂಗುಸಿಗಳು ಒಟ್ಟಾಗಿ ಅಟ್ಯಾಕ್‌ ಮಾಡುತ್ತವೆ. ನಾನು ಕೂಡಾ ನಿಮಗೇನು ಕಮ್ಮಿಯಿಲ್ಲ, ಒಬ್ಬಂಟಿಯಾಗಿ ಹೋರಾಡಬಲ್ಲೇ ಎನ್ನುತ್ತಾ ಹಾವು ಕೂಡಾ ಮುಂಗುಸಿಗಳಿಗೆ ಸಖತ್‌ ಫೈಟ್‌ ಕೊಟ್ಟಿದೆ.

ಇದನ್ನೂ ಓದಿ; ಇದೆಂಥಾ ಅವಸ್ಥೆ ಮಾರ್ರೆ… ಮೊಟ್ರೋದಲ್ಲಿ ಇಸ್ಪೀಟ್‌ ಆಡುತ್ತಾ ಕುಳಿತ ಪ್ರಯಾಣಿಕರು; ವೈರಲ್‌ ಆಯ್ತು ವಿಡಿಯೋ

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 30 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್‌ ಈ ಫೈಟ್‌ ತುಂಬಾ ರೋಚಕವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ನಿರ್ಭೀತ ಜೀವಿಗಳುʼ ಎಂದು ಕಾಮೆಂಟ್‌ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ