ಕ್ಲಾಸ್ನಲ್ಲೇ ಲಾಸ್ಟ್ ಬೆಂಚ್‌ನಲ್ಲಿ ಕುಳಿತು ಹುಡುಗ-ಹುಡ್ಗಿ ಲಿಪ್ಲಾಕ್: ವಿಡಿಯೋ ವೈರಲ್
ಶಾಲೆ ಅಂದ್ರೆ ಜ್ಞಾನ ದೇಗುಲ. ಆದ್ರೆ, ಇತ್ತೀಚೆಗೆ ಈ ಜ್ಞಾನ ದೇಗುಲಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ ಮಾರ್ಪಟ್ಟಿವೆ. ಇದಕ್ಕೆ ಉದಾಹರಣೆ ಎಂಬಂತೆ ತರಗತಿಯಲ್ಲಿ ಕುಳಿತಾಗಲೇ ವಿದ್ಯಾರ್ಥಿ-ವಿದ್ಯಾರ್ಥಿನಿ ಪರಸ್ಪರ ಲಿಪ್ ಲಾಕ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೋಯ್ಡಾ, (ಆಗಸ್ಟ್ 11): ನೋಯ್ಡಾದ ಖಾಸಗಿ ಶಾಲೆಯೊಂದರ ತರಗತಿಯಲ್ಲೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಶಾಲೆಯ ಸಮವಸ್ತ್ರ ಧರಿಸಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರತಿಯ ಕೊನೆ ಬೆಂಚ್‌ನಲ್ಲಿ ಕುಳಿತು ಪರಸ್ಪರ ಕಿಸ್ ಮಾಡಿದ್ದಾರೆ. ಅವರ ಪಕ್ಕದಲ್ಲೇ ಇತರೆ ವಿದ್ಯಾರ್ಥಿಗಳು ಇದ್ದರೂ ಸಹ ಅದ್ಯಾವುದನ್ನೂ ಲೆಕ್ಕಿಸದೇ ತಮ್ಮಷ್ಟಕ್ಕೆ ಯಾವು ಕಿಸ್ಸಿಂಗ್‌ನಲ್ಲಿ ತೊಡಗಿದ್ದು, ಈ ವಿಡಿಯೋ ವೈರಲ್ ಆಗಿದೆ. ಇನ್ನು ವಿದ್ಯಾರ್ಥಿಗಳ ಈ ನಡೆಗೆ ನೆಟ್ಟಿಗರು ಬಾಯಿಗೆ ಬಂದಂಗೆ ಬೈಯುತ್ತಿದ್ದಾರೆ.
ಹುಡುಗಿಯೇ ಹುಡುಗನ ಹೆಗಲ ಮೇಲೆ ಕೈಹಾಕಿ ಎಳೆದುಕೊಂಡು ಲಿಪ್ಲಾಕ್ ಮಾಡಿದ್ದಾಲೆ. ಯಾರಾದರೂ ನೋಡುತ್ತಾರೆ ಎಂದು ಆಕಡೆ ಈ ಕಡೆ ನೋಡುತ್ತಾ ಕಿಸ್ ಮಾಡಿದ್ದಾಳೆ. ಕೊನೆಗೆ ವಿದ್ಯಾರ್ಥಿನಿ ಕಿಸ್ ಮಾಡುವುದನ್ನು ಮುಂದುರಿಸುವಾಗ ವಿದ್ಯಾರ್ಥಿ ಸಾಕು ಬೇಡ ಎಂದು ಕೈ ಅಡ್ಡ ಇಟ್ಟಿದ್ದಾನೆ. ಈ ಎಲ್ಲಾ ದೃಶ್ಯವನ್ನು ವಿಡಿಯೋನಲ್ಲಿ ನೋಡಬಹುದು.
ಇದನ್ನೂ ಓದಿ: ಹೊರಗೆ ಕಾರು ಅಲುಗಾಟ, ಒಳಗೆ ಜೋಡಿ ಕುಲುಕಾಟ: ಕಾರಿನಲ್ಲಿ ರಾಸಲೀಲೆ
ನೋಯ್ಡಾದ ಶಾಲೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದು ಎಲ್ಲಿಯ ವೀಡಿಯೋ ಯಾವ ಶಾಲೆಯಲ್ಲಿ ನಡೆದಿರುವ ಘಟನೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವೀಡಿಯೋ ಮಾತ್ರ ತೀವ್ರ ಆಕ್ರೋಶ ಉಂಟು ಮಾಡಿದ್ದು, ಶಾಲೆಗಳಲ್ಲಿ ಶಿಸ್ತುಬದ್ಧವಾದ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
“अश्लीलता क्लासरूम में”
देखिए नोएडा के अब यहां के भी क्लासरूम में ही काम चल रहा है !! 🙈
किस कालेज (स्कूल) वायरल वीडियो कहा का अभी पता नहीं चल पाया है !!#viralvideo #trendingvideo #Shockingvideo #trending pic.twitter.com/e2td5saMVI
— MANOJ SHARMA LUCKNOW UP🇮🇳🇮🇳🇮🇳 (@ManojSh28986262) August 10, 2024
ಟ್ವಿಟ್ಟರ್‌ನಲ್ಲಿ ಮನೋಜ್ ಶರ್ಮಾ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ‘ ಶಾಲಾ ತರಗತಿಯಲ್ಲೇ ಅಶ್ಲೀಲತೆ, ನೋಡಿ ನೋಯ್ಡಾದ , ಈಗ ಇಲ್ಲಿ ಕ್ಲಾಸ್‌ರೂಮ್‌ನಲ್ಲಿಯೂ ಕಾಮ ನಡೆಯುತ್ತಿದೆ. ಆದರೆ ಇದು ಯಾವ ಕಾಲೇಜು, ಸ್ಕೂಲ್ ಎಂಬ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಇಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಬಹುತೇಕರು ಇದು ಎಲ್ಲಿ ನಡೆದ ಘಟನೆ ಎಂದು ಪ್ರಶ್ನೆ ಮಾಡುತ್ತಿದ್ದು, ಒಂದು ವೇಳೆ ಈ ಘಟನೆ ನಡೆದಿದ್ದೆ ನಿಜ ಆಗಿದ್ದಲ್ಲಿ ಇಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬದಲು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ