Viral Video: ಇದೆಂಥಾ ಅವಸ್ಥೆ ಮಾರ್ರೆ… ಮೊಟ್ರೋದಲ್ಲಿ ಇಸ್ಪೀಟ್‌ ಆಡುತ್ತಾ ಕುಳಿತ ಪ್ರಯಾಣಿಕರು; ವೈರಲ್‌ ಆಯ್ತು ವಿಡಿಯೋ

ಇಸ್ಪೀಟ್, ಜೂಜಾಡುವುದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಹೀಗಿದ್ರೂ ಕೂಡಾ ಕೆಲವೊಬ್ಬರು ಗುಟ್ಟಾಗಿ ಮೋಜಿಗಾಗಿ ಇಸ್ಪೀಟ್‌ ಆಡ್ತಾರೆ. ಅದು ಬಿಟ್ರೆ ಸಾರ್ವಜನಿಕ ಸ್ಥಳಗಳಲ್ಲಿ ಯಾರು ಕೂಡಾ ಈ ಒಂದು ಆಟವನ್ನು ಆಡುತ್ತಾ ಕೂರುವುದಿಲ್ಲ. ಆದ್ರೆ ಇಲ್ಲೊಂದಷ್ಟು ಮಹಾನುಭಾವರು, ಯಾವುದೇ ಭಯವಿಲ್ಲದೆ ಮೆಟ್ರೋ ಟ್ರೈನ್‌ನಲ್ಲಿ ಹಾಯಾಗಿ ಕುಳಿತು ಅಂದರ್‌ ಬಾಹರ್‌ ‌ ಆಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral Video: ಇದೆಂಥಾ ಅವಸ್ಥೆ ಮಾರ್ರೆ…  ಮೊಟ್ರೋದಲ್ಲಿ ಇಸ್ಪೀಟ್‌ ಆಡುತ್ತಾ ಕುಳಿತ ಪ್ರಯಾಣಿಕರು; ವೈರಲ್‌ ಆಯ್ತು ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Aug 11, 2024 | 3:21 PM

ಇಸ್ಪೀಟ್‌, ಜೂಜಾಟದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಇನ್ನೂ ಹಲವರು ಮನೆ-ಮಠವನ್ನೇ ಕಳೆದುಕೊಂಡಿದ್ದಾರೆ. ಹೀಗೆ ಈ ಜೂಜಾಟದಿಂದ ಉಂಟಾಗುವ ದುಷ್ಪರಿಣಾಮಗಳ ಈ ಆಟವನ್ನು ಕಾನೂನು ಬಾಹಿರ ಚಟುವಟಿಕೆಯೆಂದು ಪರಿಗಣಿಸಲಾಗಿದೆ. ಹೀಗಿದ್ರೂ ಕೂಡಾ ಕೆಲವೊಂದಷ್ಟು ಜನ ಮೋಜು-ಮಸ್ತಿಗಾಗಿ ಗುಟ್ಟಾಗಿ ಇಸ್ಪೀಟ್‌ ಆಡ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಏನಾದ್ರೂ ಈ ಅಂದರ್‌ ಬಾಹರ್‌ ಆಟವನ್ನು ಆಡಿದ್ರೆ ಪೊಲೀಸರ ಕೈಯಿಂದ ಧರ್ಮದೇಟು ಬೀಳುವುದಂತೂ ಗ್ಯಾರಂಟಿ. ಆದ್ರೆ ಇಲ್ಲೊಂದಷ್ಟು ಮಹಾನುಭಾವರು ಯಾರ ಭಯವೂ ಇಲ್ಲದೆ ಮೆಟ್ರೋ ಟ್ರೈನ್‌ನಲ್ಲಿ ಕುಳಿತು ಸಾರ್ವಜನಿಕವಾಗಿಯೇ ಇಸ್ಪೀಟ್‌ ಆಟವನ್ನು ಆಡಿದ್ದಾರೆ. ಈ ವಿಡಿಯೋ ಇದೀಗ‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗುತ್ತಿದೆ.

ಮೆಟ್ರೋದಲ್ಲಿ ರೊಮ್ಯಾನ್ಸ್‌ ಮಾಡಿದಂತಹ, ಪ್ರಯಾಣಿಕರಿಗೆ ತೊಂದರೆ ಕೊಟ್ಟು ರೀಲ್ಸ್‌, ಡಾನ್ಸ್‌ ಮಾಡಿದಂತಹ ಘಟನೆಗಳು ನಡೆದಿದ್ದವು. ಇದೀಗ ಮೆಟ್ರೋ ಜೂಜಾಟದ ಅಡ್ಡೆಯಾಗಿದೆ. ಹೌದು ದೆಹಲಿ ಮೆಟ್ರೋದಲ್ಲಿ ಒಂದಷ್ಟು ಪ್ರಯಾಣಿಕರು ಕ್ಯಾರೇ ಅನ್ನದೇ ಸಾರ್ವಜನಿಕವಾಗಿ ಇಸ್ಪೀಟ್‌ ಆಡಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ. ರಾಕಿ (rocky_paswan_ji) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ದೆಹಲಿ ಮೆಟ್ರೋ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಮೆಟ್ರೋದಲ್ಲಿ ಹಾಯಾಗಿ ಕೆಳಗೆ ಕುಳಿತು ಒಂದಷ್ಟು ಜನ ಇಸ್ಪೀಟ್‌ ಆಟವನ್ನು ಆಡುವ ದೃಶ್ಯವನ್ನು ಕಾಣಬಹುದು. ದೆಹಲಿ ಮೆಟ್ರೋದಲ್ಲಿ ಒಂದಷ್ಟು ಮಹಾನುಭಾವರು ಯಾವುದೇ ಭಯವಿಲ್ಲದೆ ಸಾರ್ವಜನಿಕವಾಗಿ ಇಸ್ಪೀಟ್‌ ಆಡಿದ್ದಾರೆ.

ಇದನ್ನೂ ಓದಿ: ಹೊರಗೆ ಕಾರು ಅಲುಗಾಟ, ಒಳಗೆ ಜೋಡಿ ಕುಲುಕಾಟ: ಕಾರಿನಲ್ಲಿ ರಾಸಲೀಲೆ

ಏಳು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೇನು ಮೆಟ್ರೋ ಜೂಜಿನ ಅಡ್ಡೆಯಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಮೆಟ್ರೋದಲ್ಲಿ ಪ್ರಯಾಣಿಸುವಾಗ ನನ್ನ ಕಣ್ಣಿಗೆ ಇಂತಹ ದೃಶ್ಯ ಏಕೆ ಬೀಳುವುದಿಲ್ಲʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ