ಮೊಣಕೈಯಿಂದಲೇ 30 ಸೆಕೆಂಡಿನಲ್ಲಿ 169 ವಾಲ್ ನಟ್ಸ್ ಪುಡಿ ಮಾಡಿ ಗಿನ್ನಿಸ್ ದಾಖಲೆ ಬರೆದ ಮುಹಮ್ಮದ್ ರಶೀದ್
ಯಾರು ಮಾಡದ ಕೆಲಸವನ್ನು ತಾವು ಮಾಡಿ ಗಿನ್ನಿಸ್ ದಾಖಲೆಯಲ್ಲಿ ತಮ್ಮ ಹೆಸರು ಸೇರಬೇಕೆಂದು ಎಲ್ಲರೂ ಬಯಸುವುದು ಸಹಜ. ಇದೀಗ ಪಾಕಿಸ್ತಾನದ ಸೀರಿಯಲ್ ರೆಕಾರ್ಡ್ ಬ್ರೇಕರ್ ಆಗಿರುವ ಮುಹಮ್ಮದ್ ರಶೀದ್ ಕೇವಲ 30 ಸೆಕೆಂಡ್‌ಗಳಲ್ಲಿ ಮೊಣಕೈಯಿಂದಲೇ 169 ವಾಲ್ ನಟ್ಸ್ ಗಳನ್ನು ಪುಡಿ ಮಾಡಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ವಿಶ್ವ ದಾಖಲೆಯನ್ನು ಬರೆಯಲು ಜನರು ಎಂತೆಂತ ಸಾಹಸಕ್ಕೆ ಕೈ ಹಾಕುವುದನ್ನು ನೋಡಿರಬಹುದು. ಕೆಲವರ ಈ ಸಾಹಸವನ್ನು ನೋಡಿದರೆ ಅಚ್ಚರಿಯೂ ಆಗುತ್ತದೆ. ಹೌದು, ಪಾಕಿಸ್ತಾನದ ಸೀರಿಯಲ್ ರೆಕಾರ್ಡ್ ಬ್ರೇಕರ್ ಆಗಿರುವ ಮುಹಮ್ಮದ್ ರಶೀದ್ ಅವರು ಗಿನ್ನಿಸ್ ದಾಖಲೆಯ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಆದರೆ ಇದೀಗ ಮತ್ತೊಮ್ಮೆ 30 ಸೆಕೆಂಡ್‌ಗಳಲ್ಲಿ ತನ್ನ ಮೊಣಕೈಯಿಂದಲೇ 169 ವಾಲ್ ನಟ್ಸ್ ಗಳನ್ನು ಪುಡಿ ಮಾಡಿ ಗಿನ್ನಿಸ್ ದಾಖಲೆ ಬರೆಯುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
2024 ಮೇ 18 ರಂದು ಪಾಕಿಸ್ತಾನದ ಸಿಂಧ್, ಕರಾಚಿಯಲ್ಲಿ ವಾಲ್ ನಟ್ಸ್ ಗಳನ್ನು ಪುಡಿ ಮಾಡಿ ವಿಶ್ವ ದಾಖಲೆಯನ್ನು ಬರೆದಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ವಿಡಿಯೋದ ಜೊತೆಗೆ ಮುಹಮ್ಮದ್ ರಶೀದ್ 30 ಸೆಕೆಂಡ್ ಗಳಲ್ಲಿ 169 ವಾಲ್ ನಟ್ಸ್ ಗಳನ್ನು ಮೊಣಕೈಯಿಂದ ಪುಡಿ ಮಾಡಿದ್ದಾರೆ ಎಂದು ಬರೆಯಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪೇಜ್ ನಲ್ಲಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಮುಹಮ್ಮದ್ ರಶೀದ್ ಅವರು ಸಾಲಾಗಿ ಇರಿಸಲಾದ ವಾಲ್‌ನಟ್ಸ್ ಗಳನ್ನು ಪುಡಿ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋವು ಇಲ್ಲಿಯವರೆಗೆ 2.7 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಮಾಡಲಾಗಿದೆ. ವಿಡಿಯೋ ನೋಡಿದ ಬಳಕೆದಾರರೊಬ್ಬರು, ಮತ್ತೆ ಗಿನ್ನಿಸ್ ಕಾಮಿಡಿ ದಾಖಲೆಗೆ ಸುಸ್ವಾಗತ” ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಈ ದಾಖಲೆಯಲ್ಲಿ ವ್ಯಕ್ತಿಯ ಹೋರಾಟವನ್ನು ನೋಡಬಲ್ಲೆ, ಹೀಗಾಗಿ ನಾನು ಇದನ್ನು ಮಾನ್ಯ ದಾಖಲೆ ಎಂದು ಕರೆಯುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಮಧುಮೇಹಿಗಳು ಹಾಲು ಕುಡಿಯಬಹುದೇ? ತಜ್ಞರು ಹೇಳುವುದೇನು?
ಗಿನ್ನಿಸ್ ವರದಿ ಪ್ರಕಾರ, ಮುಹಮ್ಮದ್ ರಶೀದ್ ಅವರು 2014 ರಲ್ಲಿ ಒಟ್ಟು 150 ವಾಲ್‌ನಟ್‌ಗಳನ್ನು ಒಡೆದು ದಾಖಲೆಯನ್ನು ಸಾಧಿಸಿದ್ದರು. ಆದಾದ ಬಳಿಕ 2016 ರಲ್ಲಿ ಒಟ್ಟು 181 ವಾಲ್ ನಟ್ಸ್ ಪುಡಿ ಅಚ್ಚರಿ ಮೂಡಿಸಿದ್ದರು. ಇನ್ನು 2021 ರಲ್ಲಿ ಮೊಣಕೈಯಿಂದ 315 ವಾಲ್ ನಟ್ಸ್ ಗಳನ್ನು ಪುಡಿ ಮಾಡಿ ದಾಖಲೆ ಬರೆದಿದ್ದರು. ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪಾಕಿಸ್ತಾನದ ಕರಾಚಿಯಲ್ಲಿ ಮುಹಮ್ಮದ್ ರಶೀದ್ ಅವರು ಮೊಣಕೈಯಿಂದ ಒಂದು ನಿಮಿಷದಲ್ಲಿ 329 ವಾಲ್‌ನಟ್ಸ್ ಗಳನ್ನು ಪುಡಿ ಮಾಡಿ ವಿಶ್ವ ದಾಖಲೆ ಬರೆದಿದ್ದರು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ