Traffic Lights: ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗೆ ಸೇರ್ಪಡೆಯಾಗಲಿದೆ ‌ ನಾಲ್ಕನೇ ಬಣ್ಣ, ಆ ಬಣ್ಣ ಯಾವುದು ಗೊತ್ತಾ?

ಟ್ರಾಫಿಕ್‌ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಸ್ತೆಗಳಲ್ಲಿ ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಟ್ರಾಫಿಕ್‌ ಲೈಟ್‌ಗಳನ್ನು ಅಳವಡಿಸಿರುತ್ತಾರೆ. ವಿಶ್ವದ ಎಲ್ಲಾ ಕಡೆಯೂ ಇದೇ ಮೂರು ಬಣ್ಣದ ಲೈಟ್‌ಗಳಿರುತ್ತವೆ. ಆದ್ರೆ ಇನ್ಮುಂದೆ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಾಲ್ಕನೆಯ ಬಣ್ಣ ಬರಲಿದೆಯಂತೆ. ಅದು ಏಕೆ ಮತ್ತು ಆ ಬಣ್ಣ ಯಾವುದು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Traffic Lights: ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗೆ ಸೇರ್ಪಡೆಯಾಗಲಿದೆ ‌ ನಾಲ್ಕನೇ ಬಣ್ಣ, ಆ ಬಣ್ಣ ಯಾವುದು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 12, 2024 | 4:54 PM

ಟ್ರಾಫಿಕ್‌ ಸಿಗ್ನಲ್‌ ದೀಪಗಳು ಕೆಂಪು, ಹಸಿರು ಮತ್ತು ಹಳದಿ ಈ ಮೂರು ಬಣ್ಣದಲ್ಲಿರುತ್ತವೆ. ನಮ್ಮ ಭಾರತವಷ್ಟೇ ಅಲ್ಲ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಇದೇ ಬಣ್ಣದ ದೀಪಗಳಿರುತ್ತವೆ. ಟ್ರಾಫಿಕ್‌ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇವುಗಳನ್ನು ಅಳವಡಿಸಲಾಗುತ್ತದೆ. ಶತಮಾನಗಳಿಂದಲೂ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಈ ಮೂರು ಬಣ್ಣದ ಲೈಟ್‌ಗಳು ಮಾತ್ರ ಇವೆ. ಆದ್ರೆ ಇನ್ಮುಂದೆ ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗೆ ನಾಲ್ಕನೆಯ ಬಣ್ಣ ಸೇರ್ಪಡೆಯಾಗಲಿದೆಯಂತೆ. ಅದು ಏಕೆ ಮತ್ತು ಆ ಬಣ್ಣ ಯಾವುದು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಈಗಾಗಲೇ ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗೆ ನಾಲ್ಕನೇ ಬಣ್ಣವನ್ನು ಸೇರಿಸುವ ಪ್ರಸ್ತಾಪವನ್ನು ವಿಜ್ಞಾನಿಗಳು ಮಾಡಿದ್ದಾರೆ. ಹೌದು ನಾರ್ತ್‌ ಕೆರೊಲಿನಾ ಸ್ಟೇಟ್‌ ಯೂನಿವರ್ಸಿಟಿಯ ಇಂಜಿನಿಯರ್‌ಗಳು ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗಳಲ್ಲಿ ಹಳದಿ, ಕೆಂಪು ಮತ್ತು ಹಸಿರು ಲೈಟ್‌ಗಳ ಜೊತೆ ಬಿಳಿ ಬಣ್ಣದ ದೀಪವನ್ನು ಸಹ ಸೇರಿಸುವ ಪ್ರಸ್ತಾವನೆಯನ್ನು ಮಾಡಿದ್ದಾರೆ. ಈ ಹೊಸ ಹಂತವು ಟ್ರಾಫಿಕ್‌ ಸಮಸ್ಯೆಯನ್ನು ಕಡಿಮೆ ಮಾಡಲು, ಸ್ವಯಂ ಚಾಲಿತ ಕಾರುಗಳು (AV) ಹಾಗೂ ಮಾನವ ಚಾಲಕರ ನಡುವೆ ಉತ್ತಮ ಸಂವಹನವನ್ನು ಏರ್ಪಡಿಸುವ ಗುರಿಯನ್ನು ಹೊಂದಿದೆ.

ಈ ಅಧ್ಯಯನದ ಮುಖ್ಯಸ್ಥ ಡಾ. ಅಲಿ ಹಜ್ಬಾಬೈ ಅವರ ಪ್ರಕಾರ, “ಸ್ವಯಂ ಚಾಲಿತ ವಾಹನಗಳ ಕಂಪ್ಯೂಟರ್‌ ಸಾಮರ್ಥ್ಯದ ಮೂಲಕ ಯಾವ ವಾಹನಗಳು ಎಲ್ಲಿವೆ ಎಂಬುದನ್ನು ನಿರ್ಧರಿಸಲು ಬಿಳಿ ದೀಪಗಳನ್ನು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಅಳವಡಿಸುವುದರ ಹಿಂದಿನ ಮುಖ್ಯ ಉದ್ದೇಶವಾಗಿದೆ.”

ಬಿಳಿ ಬಣ್ಣದ ಟ್ರಾಫಿಕ್‌ ದೀಪಗಳು ವಾಹನ ಸವಾರರಿಗೆ ಹೇಗೆ ಸಂಚರಿಸಬೇಕು ಎಂಬ ಮಾಹಿತಿನ್ನು ನೀಡಲಿದೆ. ಮತ್ತು ಇದರಿಂದ ಚಾಲಕರು ತಾವು ಏನು ಮಾಡಬೇಕು ಎಂಬುದನ್ನು ತಿಳಿಯುತ್ತಾರೆ. ಈ ಬಿಳಿ ಬಣ್ಣದ ದೀಪ ಕಾರು ಅಥವಾ ಯಾವುದೇ ವಾಹನವನ್ನು ಸರಳವಾಗಿ ಅನುಸರಿಸಲು ಚಾಲಕರಿಗೆ ಸೂಚನೆಯನ್ನು ನೀಡುವ ಕೆಲಸವನ್ನು ಮಾಡಲಿದೆ. ಅಲ್ಲದೆ ಇದು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಇತರೆ ವಾಹನ ಚಾಲಕರೊಂದಿಗೆ ಸ್ವಯಂ ಚಾಲಿತ ಕಾರು ಸಂವಹನ ನಡೆಸಲು ಅನುವು ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೊಳೆಯುವ ತ್ವಚೆಗಾಗಿ ಮುಖಕ್ಕೆ ತನ್ನ ಮಲವನ್ನು ಹಚ್ಚುತ್ತಾಳಂತೆ ಈ ಮಾಡೆಲ್‌

ಈ ಪ್ರಸ್ತಾವನೆಯ ಪ್ರಕಾರ ಸ್ವಯಂ ಚಾಲಿತ ವಾಹನಗಳು ಟ್ರಾಫಿಕ್‌ ಸಿಗ್ನಲ್‌ಗಳನ್ನು ನಿರ್ವಹಿಸುವ ಕಂಪ್ಯೂಟರ್‌ಗಳೊಂದಿಗೆ ವೈರ್‌ಲೆಸ್‌ ಆಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಸ್ವಯಂ ಚಾಲಿತ ವಾಹನಗಳ ಓಡಾಟ ಹೆಚ್ಚಾದ ಬಳಿಕವೇ ಈ ಹೊಸ ಬಿಳಿ ಬಣ್ಣದ ಸಿಗ್ನಲ್‌ ಲೈಟ್‌ ಅಳವಡಿಸಲಾಗುವುದು. ಈ ಸಂಶೋಧನೆ ಕಂಪ್ಯೂಟರ್‌-ಅಯ್ಡೆಡ್‌ ಸಿವಿಲ್‌ & ಇನ್ಫ್ರಾಸ್ಟ್ರಕ್ಚರ್‌ ಇಂಜಿನಿಯರಿಂಗ್‌ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್