Viral: ಬೇರೆ ಯುವತಿ ಜೊತೆ ಮದುವೆಯಾಗಲು ಹೊರಟ ಪ್ರಿಯಕರ, ಮಂಟಪಕ್ಕೆ ಬಂದು ಆಸಿಡ್ ದಾಳಿಗೆ ಯತ್ನಿಸಿದ ಮಾಜಿ ಪ್ರೇಯಸಿ
ಪ್ರೀತಿಸಿದವರು ಕೈ ಕೊಟ್ರೆ ಅದರಿಂದಾಗುವ ನೋವು ಅಷ್ಟಿಷ್ಟಲ್ಲ. ಕೆಲವರಂತೂ ಈ ನೋವಿನಿಂದ ಹೊರ ಬರಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬ ಯುವತಿಯ ಜೀವನದಲ್ಲೂ ಪ್ರೀತಿಯಲ್ಲಿ ಇದೇ ರೀತಿಯ ಮೋಸವಾಗಿದ್ದು, ಪ್ರಿಯಕರ ಮದುವೆಯಾಗುವುದಾಗಿ ನಂಬಿಸಿ ಈಗ ಕೈಕೊಟ್ಟು ಬೇರೊಬ್ಬ ಯುವತಿಯ ಜೊತೆ ಹಸೆಮಣೆ ಏರಲು ಮುಂದಾಗಿದ್ದ. ತನಗಾದ ಮೋಸಕ್ಕೆ ಪ್ರತೀಕಾರ ತೀರಿಸಲು ಆ ಯುವತಿ ಸೀದಾ ಮದುವೆ ಮಂಟಪಕ್ಕೆ ಹೋಗಿ ಪ್ರಿಯಕರನ ಮುಖಕ್ಕೆ ಆಸಿಡ್ ಎರಚಲು ಮುಂದಾಗಿದ್ದಾಳೆ. ಈ ಸುದ್ದಿ ಸದ್ಯ ಭಾರೀ ವೈರಲ್ ಆಗುತ್ತಿದೆ.
ಪ್ರೇಮಿಗಳ ಮಧ್ಯೆ ಬ್ರೇಕಪ್ ಆಗುವುದು ಸಾಮಾನ್ಯ. ಆದ್ರೆ ಕೆಲವರಂತೂ ಮದುವೆಯಾಗುವುದಾಗಿ ನಂಬಿಸಿ ಬೇರೊಬ್ಬರ ಭಾವನೆಗಳ ಜೊತೆ ಆಟವಾಡುತ್ತಾರೆ. ಇದರಿಂದಾಗುವ ನೋವು ಅಷ್ಟಿಷ್ಟಲ್ಲ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಜೀವದ ಮೋಸದಾಟವನ್ನು ತಾಳಲಾರದೆ ಅದೆಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡಿದ್ದುಂಟು. ಇಲ್ಲೊಬ್ಬ ಯುವತಿಯ ಜೀವನದಲ್ಲೂ ಇದೇ ರೀತಿಯ ಮೋಸವಾಗಿದ್ದು, ಆಕೆಯ ಪ್ರಿಯಕರ ಆಕೆಯನ್ನೇ ಮದುವೆಯಾಗುವುದಾಗಿ ನಂಬಿಸಿ ಇದೀಗ ಬೇರೊಬ್ಬ ಹುಡುಗಿಯ ಜೊತೆ ಹಸೆಮಣೆ ಏರಲು ಮುಂದಾಗಿದ್ದಾನೆ. ಇದರಿಂದ ನೊಂದ ಯುವತಿ ಆತನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು, ಸೀದಾ ಮದುವೆ ಮಂಟಪಕ್ಕೆ ಹೋಗಿ ಆತನ ಮುಖಕ್ಕೆ ಆಸಿಡ್ ಎರಚಲು ಮುಂದಾಗಿದ್ದಾಳೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಆಗಸ್ಟ್ 11 ರಂದು ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ನಂದಲೂರಿನಲ್ಲಿ ಪ್ರೀತಿಸಿ ಕೈಕೊಟ್ಟ ಯುವಕ ಬೋರೊಬ್ಬ ಯುವತಿಯ ಜೊತೆ ಮದುವೆಯಾಗಿದ್ದಕ್ಕಾಗಿ ಪ್ರಿಯತಮೆ ಆತನ ಮೇಲೆ ಆಸಿಡ್ ಅಟ್ಯಾಕ್ ಮಾಡಲು ಮುಂದಾಗಿದ್ದಾಳೆ. ಈ ಗದ್ದಲಕ್ಕೆ ಮದುವೆ ಅರ್ಧಕ್ಕೆ ನಿಂತು ಹೋಗಿದೆ.
ರೈಲ್ವೇ ಕೋಡೂರಿನ ಸಯ್ಯದ್ ಭಾಷಾ ಎಂಬ ವ್ಯಕ್ತಿಯ ಮದುವೆ ನಂದಲೂರಿನ ಮಹಿಳೆಯೊಂದಿಗೆ ನಿಶ್ಚಯವಾಗಿತ್ತು. ಈ ವಿಚಾರವನ್ನು ತಿಳಿದ ಸಯ್ಯದ್ ಗರ್ಲ್‌ಫ್ರೆಂಡ್ ಮದುವೆ ಮಂಟಪಕ್ಕೆ ಬಂದು ಹೈ ಡ್ರಾಮವನ್ನೇ ಸೃಷ್ಟಿಸಿದ್ದಾಳೆ. ಹೌದು ಅದ್ಧೂರಿಯಾಗಿ ಮದುವೆ ನಡೆಯುತ್ತಿದ್ದ ವೇಳೆ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಗರ್ಲ್‌ಫ್ರೆಂಡ್ ಸೈಯದ್ ಮೇಲೆ ಆಸಿಡ್ ಎರಚಲು ಮತ್ತು ಚಾಕುವಿನಿಂದ ದಾಳಿ ಮಾಡಲು ಮುಂದಾಗಿದ್ದಾಳೆ. ಹೀಗೆ ತೀವ್ರ ರೂಪದ ಜಗಳ ನಡೆಯುವಾಗ ವರನ ಪಕ್ಕದಲ್ಲಿ ನಿಂತಿದ್ದ ಮಹಿಳೆಯ ಮೇಲೆ ಆಸಿಡ್ ಬಿದ್ದಿದೆ. ಆಕೆಯನ್ನು ಆ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಹೈ ಡ್ರಾಮಕ್ಕೆ ಮದುವೆಯೇ ನಿಂತು ಹೋಗಿದೆ.
ಇದನ್ನೂ ಓದಿ: ಪುರುಷರೇ ಇಲ್ಲಿನ ಕಾಗೆಗಳ ಟಾರ್ಗೆಟ್, ಹೋಗೋ-ಬರೋ ಗಂಡಸ್ರ ತಲೆಗೆ ಈ ಕಾಗಕ್ಕಗಳು ಹೇಗೆ ಕುಕ್ಕುತ್ತವೆ ನೋಡಿ
ಸೈಯದ್ ಮತ್ತು ನಾನು ಕಳೆದ 10 ವರ್ಷಗಳಿಂದ ಸಂಬಂಧವನ್ನು ಹೊಂದಿದ್ದೇವೆ. ಈಗ ಏಕಾಏಕಿ ಆತ ಬೇರೊಬ್ಬ ಯುವತಿಯ ಜೊತೆ ಮದುವೆಯಾಗಲು ಮುಂದಾಗಿದ್ದಾನೆ. ಇದೇ ಕಾರಣಕ್ಕೆ ನಾನು ಆತನ ಮೇಲೆ ಆಸಿಡ್ ದಾಳಿ ಮಾಡಲು ಮುಂದಾಗಿದ್ದು ಎಂದು ಪ್ರಿಯತಮೆ ಪೊಲೀಸ್ ವಿಚಾರಣೆಯ ವೇಳೆ ಹೇಳಿಕೊಂಡಿದ್ದಾಳೆ. ಇನ್ನೂ ವಧುವಿನ ಕಡೆಯವರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ