Video: ನಡು ರಸ್ತೆಯಲ್ಲಿ ನಿಂತು ಜಳಕ ಮಾಡಿದ ಯುವಕ; ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಏನು ಬೇಕಾದರೂ ಮಾಡುತ್ತಾರೆ, ನಾಚಿಕೆ ಬಿಟ್ಟು ಎಂತಹ ಭಂಡ ಧೈರ್ಯಕ್ಕೂ ಕೈ ಹಾಕುತ್ತಾರೆ. ಇಲ್ಲೊಬ್ಬ ಯುವಕ ಕೂಡಾ ಅಂತಹದ್ದೇ ಸಾಹಸಕ್ಕೆ ಕೈ ಹಾಕಿದ್ದು, ಚಾಲೆಂಜ್ ವಿಡಿಯೋ ಸಲುವಾಗಿ ಯಾವುದೇ ಅಂಜಿಕೆ, ನಾಚಿಕೆ ಇಲ್ಲದೆ ಸಾರ್ವಜನಿಕರ ಎದುರೇ ನಡು ರಸ್ತೆಯಲ್ಲಿ ನಿಂತು ಜಳಕ ಮಾಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ರಾತ್ರೋ ರಾತ್ರಿ ಫೇಮಸ್ ಆಗಲು, ಲೈಕ್ಸ್ ಫಾಲೋವರ್ಸ್ ಗಿಟ್ಟಿಸಲು ಕೆಲವೊಬ್ಬರು ಏನಾದರೊಂದು ಸರ್ಕಸ್ ಮಾಡುತ್ತಿರುತ್ತಾರೆ. ಹೀಗೆ ತಮ್ಮ ಹುಚ್ಚು ರೀಲ್ಸ್‌ಗಳಿಂದಲೇ ಫೇಮಸ್ ಆದವರು ಅದೆಷ್ಟೋ ಜನರಿದ್ದಾರೆ. ಹೀಗೆ ಭಂಡ ಧೈರ್ಯದಿಂದ ಕೆಲ ಯುವಕರು ಬೈಕ್ ಮೇಲೆ ಸ್ಟಂಟ್ ಮಾಡುತ್ತಾ ವಿಡಿಯೋಗಳನ್ನು ಮಾಡಿದ್ರೆ, ಇನ್ನೂ ಕೆಲವೊಂದಿಷ್ಟು ಜನ ನಾಚಿಕೆ, ಅಂಜಿಕೆ ಬಿಟ್ಟು ಮೆಟ್ರೋ, ರೈಲ್ವೆ ಸ್ಟೇಷನ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿಯೇ ರೀಲ್ಸ್ ವಿಡಿಯೋ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಇಂತಹದ್ದೇ ಭಂಡ ಧೈರ್ಯವೊಂದನ್ನು ಮಾಡಿದ್ದು, ಚಾಲೆಂಜ್ ವಿಡಿಯೋ ಮಾಡುವ ಸಲುವಾಗಿ ನಾಚಿಕೆ ಬಿಟ್ಟು, ಸಾರ್ವಜನಿಕರ ಎದುರೇ ನಡು ರಸ್ತೆಯಲ್ಲಿ ನಿಂತು ಜಳಕ ಮಾಡಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ವಿಡಿಯೋ ಕ್ರಿಯೇಟರ್ ಸಚಿನ್ ಸಿಂಗ್ (lappusachin295) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ನಡುರಸ್ತೆಯಲ್ಲಿ ನಿಂತು ಸ್ನಾನ ಮಾಡುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಯುವಕನೊಬ್ಬ ಸಾರ್ವಜನಿಕರ ಎದುರು ಸ್ನಾನ ಮಾಡುವ ಸವಾಲು ಸ್ವೀಕರಿಸಿ, ಆ ಸವಾಲನ್ನು ಹೇಗಾದರೂ ಮಾಡಿ ಕಂಪ್ಲೀಟ್ ಮಾಡ್ಲೇಬೇಕು ಅಂತ ನಾಚಿಕೆ ಬಿಟ್ಟು ಭಂಡ ಧೈರ್ಯದಿಂದ ಸಾರ್ವಜನಿಕರ ಎದುರು ನಡು ರಸ್ತೆಯಲ್ಲಿ ನಿಂತು ಸ್ನಾನ ಮಾಡಿದ್ದಾನೆ. ಅಲ್ಲಿದ್ದ ಜನರು ಯುವಕನ ಈ ಅವತಾರವನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಬೇರೆ ಯುವತಿ ಜೊತೆ ಮದುವೆಯಾಗಲು ಹೊರಟ ಪ್ರಿಯಕರ, ಮಂಟಪಕ್ಕೆ ಬಂದು ಆಸಿಡ್ ದಾಳಿಗೆ ಯತ್ನಿಸಿದ ಮಾಜಿ ಪ್ರೇಯಸಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಜುಲೈ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಗೆಳೆಯ ಅದೇನ್ ಕಾನ್ಫಿಡೆನ್ಸ್ ನಿಂದು.. ಮೆಚ್ಚಲೇಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ನೋಡಲು ತುಂಬಾ ತಮಾಷೆಯಾಗಿದೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ