ಇದೆಂಥಾ ಮೌಢ್ಯ! ಸಮವಸ್ತ್ರ ಧರಿಸಿದ ಪೊಲೀಸರೇ ಅಗ್ಗಿಕುಂಡದಲ್ಲಿ ಹೆಜ್ಜೆ ಹಾಕಿದರು, ವಿಡಿಯೋ ವೈರಲ್
Telangana police superstition: ಚೆರುವುಗಟ್ಟು ದೇಗುಲ ಹೈದರಾಬಾದ್‌ನಿಂದ 60 ಕಿಲೋಮೀಟರ್ ದೂರದಲ್ಲಿದೆ. ಶಕ್ತಿಶಾಲಿ ಶಿವ ದೇವಾಲಯ ಇಲ್ಲಿದೆ. ಪ್ರತಿ ತಿಂಗಳ ಅಮವಾಸ್ಯೆ ರಾತ್ರಿಯಲ್ಲಿ ಜನರು ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ತೆಲಂಗಾಣ ಪೊಲೀಸ್ ಸಿಬ್ಬಂದಿ ಯಾವುದೇ ಆತಂಕ, ಉದ್ವೇಗವಿಲ್ಲದೆ, ಸಮರ್ಪಣಾಭಾವದಿಂದ ನಿಗಿನಿಗಿ ಕೆಂಡವಿರುವ ಬೆಂಕಿಯಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.
ತೆಲಂಗಾಣ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ (Telangana police superstition) ಇಂತಹ ದುಸ್ಸಾಹಸಕ್ಕೆ ಯಾಕೆ ಕೈಹಾಕಿದರೋ ಆ ದೇವರೇ ಹೇಳಬೇಕು. ತೆಲಂಗಾಣ ಪೊಲೀಸ್ ಸಿಬ್ಬಂದಿ ಯಾವುದೇ ಆತಂಕ, ಉದ್ವೇಗವಿಲ್ಲದೆ, ಸಮರ್ಪಣಾಭಾವದಿಂದ ನಿಗಿನಿಗಿ ಕೆಂಡಗಳಿರುವ ಬೆಂಕಿಯಲ್ಲಿ (Fire walking ritual) ಹೆಜ್ಜೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಲ್ಲಗೊಂಡ ಜಿಲ್ಲೆಯ ನಾರ್ಕೆಟ್ ಪಲ್ಲಿ ಮಂಡಲದಲ್ಲಿ ವಾರ್ಷಿಕ ಚೆರುವುಗುತ್ತು ಜಾತ್ರೆಯ ಅಂಗವಾಗಿ ಸಮವಸ್ತ್ರ ಧರಿಸಿದ ಪೊಲೀಸರು ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಗಮನಾರ್ಹವೆಂದರೆ ಈ ಘಟನೆಗೂ ತನ್ನ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ತೆಲಂಗಾಣ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ನಲ್ಲಗೊಂಡ (Nalgonda) ಜಿಲ್ಲೆಯ ಪಾರ್ವತಿ ಜಡೆ ರಾಮಲಿಂಗೇಶ್ವರ ಸ್ವಾಮಿ ಜಾತ್ರೆ ಉತ್ಸವಗಳಲ್ಲಿ ಭಕ್ತರು ಅಗ್ನಿಗುಂಡದ ಮೇಲೆ ನಡೆದುಕೊಂಡು ಹೋಗುವ ಸಂಪ್ರದಾಯವಿದೆ. ಹಲವು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಮೌಢ್ಯಾಚರಣೆ ನಿಲ್ಲಿಸಬೇಕಾದ ಪೊಲೀಸರೇ ಸಾಮಾನ್ಯ ಭಕ್ತರ ಜತೆಗೆ ಅಗ್ಗಿಕುಂಡದಲ್ಲಿ ಹೆಜ್ಜೆ ಹಾಕುವ ಮೂಲಕ ಚರ್ಚೆಗೆ ಆಸ್ಪದ ನೀಡಿದ್ದಾರೆ.
Police officers walked barefoot over the fire pit as part of the annual #CheruvugattuJatara ritual in Narketpally Mandal of #Nalgonda District.
Some reported that it is done to create awareness on “superstitions.”
But top police officials confirmed that it has nothing to do… pic.twitter.com/LVTdI0GfJK
— Sudhakar Udumula (@sudhakarudumula) February 21, 2024
ಚೆರುವುಗಟ್ಟು ದೇಗುಲ ಹೈದರಾಬಾದ್‌ನಿಂದ 60 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವು ಬಹಳ ಪ್ರಸಿದ್ಧವಾಗಿದೆ. ಶಕ್ತಿಶಾಲಿ ಶಿವ ದೇವಾಲಯ ಇಲ್ಲಿದೆ. ಪ್ರತಿ ತಿಂಗಳ ಅಮವಾಸ್ಯೆ ರಾತ್ರಿಯಲ್ಲಿ ಜನರು ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈ ಸ್ಥಳವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ದೇಗುಲದಲ್ಲಿ ಸೇವೆ ಮಾಡುತ್ತಾ ಸ್ನಾನ ಮಾಡಿದರೆ ಪವಾಡ ನಡೆಯುತ್ತೆ ಎಂಬುದು ಜನರ ನಂಬಿಕೆ. ಮದುವೆಯಾಗದಿರುವವರು ಅಥವಾ ಮಕ್ಕಳನ್ನು ಹೊಂದಲು ಪ್ರಯತ್ನಿಸುತ್ತಿರುವವರು ಇಲ್ಲಿನ ಶಿವನಿಗೆ ಮೊರೆಹೋಗುತ್ತಾರೆ. ಈ ಬಾರಿಯೂ ದೇವಾಲಯದ ಅರ್ಚಕರ ವೈದಿಕ ಸ್ತೋತ್ರ ಪಠಣಗಳ ನಡುವೆ ಬೆಟ್ಟದ ದೇಗುಲದಲ್ಲಿ ಮುಂಜಾನೆ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಇದನ್ನೂ ಓದಿ: ನಿಮ್ಮ ನೆಚ್ಚಿನ ಡೋರೆಮಾನ್ ಕಾರ್ಟೂನ್ ಪಾತ್ರಗಳ ಹಿನ್ನೆಲೆ ಧ್ವನಿ ಈ ಸುಂದರಿಯದ್ದು
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ