Viral Video: ಕಳ್ಳತನಕ್ಕೆ ಅಂತ ಹೋದ, ಹಣ ಸಿಗದೆ ನಿರಾಶೆಗೊಂಡು ಟೇಬಲ್‌ 20 ರೂ. ಇಟ್ಟು ಬರಿಗೈಲಿ ವಾಪಸ್‌ ಬಂದ…

| Updated By: ಅಕ್ಷತಾ ವರ್ಕಾಡಿ

Updated on: Jul 28, 2024 | 3:25 PM

ರಾತ್ರಿ ಸಮಯದಲ್ಲಿ ಎಲ್ಲರೂ ಮಲಗಿರುವಾಗ ಯಾರಿಗೂ ಅನುಮಾನ ಬರದಂತೆ ಕಳ್ಳತನ ಮಾಡಿ ಖದೀಮರು ಎಸ್ಕೇಪ್‌ ಆಗ್ತಾರೆ. ಏನಾದ್ರೂ ಹಣ ಸಿಕ್ಕಿಲ್ಲ ಅಂದ್ರೆ ಮನೆಯಲ್ಲಿದ್ದ ಯಾವುದಾದ್ರೂ ವಸ್ತುವನ್ನು ಕದ್ದು ಹೋಗ್ತಾರೆ. ಆದ್ರೆ ಇಲ್ಲೊಬ್ಬ ಹೊಟೇಲ್‌ಗೆ ನುಗ್ಗಿದ ಕಳ್ಳ, ಇಲ್ಲಿಗೆ ಯಾಕಾದ್ರೂ ಕಳ್ಳತನ ಮಾಡಲು ಬಂದ್ನೋ ದೇವ್ರೆ.. ಇಲ್ಲಿ ದುಡ್ಡೂ ಇಲ್ಲ ಏನು ಇಲ್ಲ ಎಂದು ನಿರಾಶೆಗೊಂಡು ತನ್ನ ಜೇಬಿನಲ್ಲಿದ್ದ 20 ರೂ. ಹಣವನ್ನು ಟೇಬಲ್‌ ಮೇಲೆ ಇಟ್ಟು ಬರಿಗೈಲಿ ವಾಪಸ್‌ ಹೋಗಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral Video: ಕಳ್ಳತನಕ್ಕೆ ಅಂತ ಹೋದ, ಹಣ ಸಿಗದೆ ನಿರಾಶೆಗೊಂಡು ಟೇಬಲ್‌ 20 ರೂ. ಇಟ್ಟು ಬರಿಗೈಲಿ ವಾಪಸ್‌ ಬಂದ...
Follow us on

ಕಳ್ಳ ಮನೆಗೆ ನುಗ್ಗಿದ್ದರೆ ಒಂದೋ ಮನೆಯಲ್ಲಿ ಚಿನ್ನಾಭರಣ, ಹಣವನ್ನು ದೋಚುತ್ತಾನೆ. ಇಲ್ಲವೇ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಎಗರಿಸುತ್ತಾನೆ. ಹೀಗೆ ರಾತ್ರಿ ಹೊತ್ತು ಎಲ್ಲರೂ ಮಲಗಿರುವ ಸಮಯದಲ್ಲಿ ಕಳ್ಳರು ಮನೆಗೆ ಕನ್ನ ಹಾಕುವ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಹೊಟೇಲ್‌ ಬೀಗ ಒಡೆದು ಕಳ್ಳತನಕ್ಕೆ ಬಂದ ಕಳ್ಳನೊಬ್ಬ ತನಗೆ ಹಣ ಸಿಗಲಿಲ್ಲ ಎಂದು ಆತ ನಿರಾಶೆಯಿಂದ ತನ್ನ ಜೇಬಿನಲ್ಲಿದ್ದ 20 ರೂ. ಹಣವನ್ನು ಟೇಬಲ್‌ ಮೇಲೆ ಇಟ್ಟು ವಾಪಸ್‌ ಹೋಗಿದ್ದಾನೆ. ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಮಹೇಶ್ವರಂನಲ್ಲಿ ರಾತ್ರಿ ಹೊತ್ತಿನಲ್ಲಿ ಬೀಗ ಒಡೆದು ಹೊಟೇಲ್‌ ಒಂದಕ್ಕೆ ನುಗ್ಗಿದ್ದ ಕಳ್ಳ, ಹಣ ಸಿಗದೆ ನಿರಾಶೆಗೊಂಡು ತಾನೇ ಕ್ಯಾಶಿಯರ್‌ ಟೇಬಲ್‌ ಮೇಲೆ 20 ರೂ. ಹಣ ಇಟ್ಟು ಬರಿಗೈಲಿ ವಾಪಸ್‌ ಹೋಗಿದ್ದಾನೆ. ಈ ದೃಶ್ಯ ಹೊಟೇಲ್‌ನಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉಮಾ ಸುಧೀರ್‌ (umasudhir) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಹೊಟೇಲ್‌ಗೆ ನುಗ್ಗಿದ ಕಳ್ಳನೊಬ್ಬ ಮೂಲೆ ಮೂಲೆ ಹುಡುಕಾಡುತ್ತಾ ಕಳ್ಳತನಕ್ಕೆ ಯತ್ನಿಸುವ ದೃಶ್ಯವನ್ನು ಕಾಣಬಹುದು. ಎಷ್ಟೇ ಹುಡುಕಿದ್ರೂ ಒಂದು ರೂಪಾಯಿಯೂ ಸಿಗದೇ ಇರುವಾಗ ನಿರಾಶೆಗೊಂಡ ಆತ ಸಿಸಿ ಕ್ಯಾಮೆರಾದ ಎದುರು ಬಂದು ಇದೇನ್‌ ಹೊಟೇಲ್‌ ಅಪ್ಪಾ, ಒಂದು ರೂಪಾಯಿ ಕೂಡಾ ಇಲ್ಲ ಎಂದು ತಲೆಯನ್ನು ಚಚ್ಚಿಕೊಂಡು, ನಂತ್ರ ತನ್ನ ಜೇಬಿನಲ್ಲಿದ್ದ 20 ರೂಪಾಯಿ ಹಣವನ್ನು ಟೇಬಲ್‌ ಮೇಲೆ ಇಟ್ಟು ಬರಿಗೈಲಿ ವಾಪಸ್‌ ಹೋಗಿದ್ದಾನೆ.

ಇದನ್ನೂ ಓದಿ: ಫೇಸ್​​ ಬುಕ್​​ ಲವ್​​; 2 ಮಕ್ಕಳ ತಂದೆಯಾಗಿರುವ ಪ್ರಿಯಕರನ ಭೇಟಿಗೆ ಭಾರತಕ್ಕೆ ಓಡೋಡಿ ಬಂದ ಪಾಕಿಸ್ತಾನಿ ಯುವತಿ

ಜುಲೈ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 94 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತುಂಬಾ ಒಳ್ಳೆಯ ಮನಸ್ಸಿನ ಕಳ್ಳನೀತʼ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಈ ದೃಶ್ಯ ತುಂಬಾನೇ ತಮಾಷೆಯಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ