ಚಿಕಿತ್ಸೆಗೆಂದು ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವೈದ್ಯನ ಬಂಧನ

|

Updated on: Mar 30, 2024 | 1:04 PM

ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳ ಆಧಾರ ಮೇಲೆ ದೂರು ದಾಖಲಾಗುತ್ತಿದ್ದಂತೆ ಡಾ. ಅಹ್ಮದ್ ತಲೆ ಮರೆಸಿಕೊಂಡಿದ್ದ. ಕೊನೆಗೂ ಮಹಬೂಬ್‌ನಗರ ಜಿಲ್ಲೆಯ ಉದ್ದಾನಪುರದಲ್ಲಿ ಶುಕ್ರವಾರ(ಮಾರ್ಚ್​​​ 29) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಚಿಕಿತ್ಸೆಗೆಂದು ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವೈದ್ಯನ ಬಂಧನ
Doctor Arrested
Follow us on

ತೆಲಂಗಾಣ: ಚಿಕಿತ್ಸೆಗೆಂದು ಬರುವ ಮಹಿಳಾ ರೋಗಿಗಳ ನಗ್ನ ಫೋಟೋಗಳನ್ನು ತೆಗೆದು, ಅವರೊಂದಿಗೆ ಅಸಭ್ಯವಾಗಿ ವರ್ತಿಸುವ ಆರೋಪದ ಮೇಲೆ ವಿಕಾರಾಬಾದ್ ಜಿಲ್ಲೆಯ ತಾಂಡೂರ್ ಪಟ್ಟಣದ ಡಾ. ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ತಾಂಡೂರಿನ ಅಹ್ಮದ್ ಆರ್‌ಎಂಪಿ ವೈದ್ಯರಾಗಿ ಸ್ಥಳೀಯ ಕ್ಲಿನಿಕ್ ನಡೆಸುತ್ತಿದ್ದು, ಅಲ್ಲಿಗೆ ಬರುವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಚಿಕಿತ್ಸೆಗೆಂದು ಆತನ ಬಳಿಗೆ ಹೋದಾಗ ಆಕೆಯನ್ನು ಪರೀಕ್ಷೆಯ ಹೆಸರಿನಲ್ಲಿ ಬೆತ್ತಲೆಯಾಗಿಟ್ಟು ವಿಡಿಯೋ ಮಾಡಿದ್ದಾನೆ. ಇದಲ್ಲದೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಇದರಿಂದ ಸಂತ್ರಸ್ತೆ ತೀವ್ರ ನೊಂದಿದ್ದು, ಮಾರ್ಚ್​​​ 11ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳ ಆಧಾರ ಮೇಲೆ ದೂರು ದಾಖಲಾಗುತ್ತಿದ್ದಂತೆ ಡಾ. ಅಹ್ಮದ್ ತಲೆ ಮರೆಸಿಕೊಂಡಿದ್ದ. ಕೊನೆಗೂ ಮಹಬೂಬ್‌ನಗರ ಜಿಲ್ಲೆಯ ಉದ್ದಾನಪುರದಲ್ಲಿ ಶುಕ್ರವಾರ(ಮಾರ್ಚ್​​​ 29) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ತನಿಖೆ ನಡೆಸಿದಾಗ, ಆತನನ್ನು ಆರ್‌ಎಂಪಿ ಎಂದು ಗುರುತಿಸುವ ಯಾವುದೇ ಗುರುತಿನ ದಾಖಲೆಗಳಿಲ್ಲ. ಇಷ್ಟು ದಿನಗಳ ವರೆಗೆ ಸ್ಥಳೀಯರನ್ನು ಮೋಸಗೊಳಿಸಿದ್ದ ಎಂದು ತಿಳಿದುಬಂದಿದೆ.

​​​ಇದನ್ನೂ ಓದಿ: ಯುವತಿಯ ಕಿಡ್ನಿ ವೈಫಲ್ಯಕ್ಕೆ ಕಾರಣವಾದ ಹೇರ್ ಸ್ಟ್ರೈಟ್ನಿಂಗ್ ಟ್ರೀಟ್​​ಮೆಂಟ್​​​​​​

ಇದೀಗಾ ಈ ನಕಲಿ ವೈದ್ಯನ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ವಂಚನೆ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಬೇರೆ ಯಾರಾದರೂ ಸಂತ್ರಸ್ತರಾಗಿದ್ದರೆ ಅವರ ವಿವರ ನೀಡಿ.ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ