ತಿರುವನಂತಪುರ: ಅನುಮಾನಸ್ಪದವಾಗಿ ಓಡಾಡುತ್ತಿದ್ದ ಬುರ್ಖಾಧಾರಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಬುರ್ಖಾ (burqa) ತೆಗೆಸಿದಾಗ ಎಲ್ಲರಿಗೂ ಗೊತ್ತಾಗಿದ್ದು ಅವಳಲ್ಲ ಅವನು ಎಂದು.
ಹೌದು…ಸಾಮಾನ್ಯವಾಗಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಈ ಬುರ್ಖಾ ಧರಿಸುತ್ತಾರೆ. ಆದ್ರೆ, ಕೇರಳದ(Kerala) 28ರ ಹರೆಯದ ಜಿಷ್ಣು ನಂಬೂದಿರಿ ಅನ್ನೋ ಅರ್ಚಕ ಬುರ್ಖಾ ಧರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮೆಪ್ಪಾಯೂರ್ ಬಳಿ ಇರುವ ದೇವಸ್ಥಾನದಲ್ಲಿ ಅರ್ಚಕನಾಗಿರುವ ಜಿಷ್ಣು, ಅಕ್ಟೋಬರ್ 7 ರಂದು ಬುರ್ಖಾ ಹಾಕಿ ಕೊಂಡು ನಗರ ಸುತ್ತಾಡಲು ತೆರಳಿದ್ದಾನೆ. ಕೊಯ್ಲಾಂಡಿ ಜಂಕ್ಷನ್ ಬಳಿ ಆಟೋ ರಿಕ್ಷಾ ಹತ್ತಿದ ಅರ್ಚಕ ಮಾತುಗಳು, ನಡತೆಯಲ್ಲಿ ಅನುಮಾನ ಬಂದಿದೆ. ಹೀಗಾಗಿ ಆಟೋ ಚಾಲಕ ಅರ್ಚಕನನ್ನು ಹಿಡಿದಿದ್ದಾನೆ. ಬಳಿಕ ಸ್ಥಳೀಯರು ಸೇರಿ ಅರ್ಚಕನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಹುಡುಗಿಯನ್ನು ಒಲಿಸಿಕೊಳ್ಳಲು ಸ್ಟಂಟ್ ಮಾಡಲು ಹೋದ ಈ ಹುಡುಗನ ಪರಿಸ್ಥಿತಿ ನೋಡಿ
ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದು, ಪೊಲೀಸರ ಬಳಿಕ ತನಗೆ ಚಿಕನ್ ಫಾಕ್ಸ್ ಇದೆ ಎಂದಿದ್ದಾನೆ. ಆದರೆ ಪೊಲೀಸರು ಪರಿಶೀಲಿಸಿದಾಗ ಈತನಲ್ಲಿ ಯಾವುದೇ ಚಿಕನ್ ಫಾಕ್ಸ್ ಲಕ್ಷಣ ಕಾಣಿಸಿಲ್ಲ. ಆದರೂ ಪೊಲೀಸರು ಪೂಜಾರಿಯನ್ನು ಬಿಟ್ಟು ಕಳುಹಿಸಿದ್ದಾರೆ.
ಬಿಡುವ ಮುನ್ನ ಪೊಲೀಸರು ಈತನ ಮೇಲೆ ಏನಾದರೂ ಪ್ರಕರಣಗಳು ಇವೆ ಅಂತ ಚೆಕ್ ಮಾಡಿದ್ದು, ಈತನ ವಿರುದ್ಧ ಯಾವುದೇ ಅಪರಾಧ ದಾಖಲೆಗಳಿಲ್ಲ. ಹೀಗಾಗಿ ಆತನ ಮನೆಯವರನ್ನು ಠಾಣೆಗೆ ಕರೆಯಿಸಿ, ಆತನ ಹೆಸರು ವಿಳಾಸ ಪಡೆದು ಬಿಟ್ಟು ಕಳುಹಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಯುವಕರು ಬುರ್ಖಾ ಧರಿಸಿ ಓಡಾಡಿ ಸಿಕ್ಕಿ ಬೀಳುತ್ತಿರುವುದು ಹೊಸದೇನಲ್ಲ. ಕೆಲ ದಿನಗಳ ಹಿಂದೆ ವಿಜಯಪುರದ ಆಲಮಟ್ಟಿ ಡ್ಯಾಂ ಬಳಿ ಬುರ್ಖಾ ಧರಿಸಿ ಓಡಾಡ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದರು. ಈತ ಆಲಮಟ್ಟಿ ಡ್ಯಾಂ ಬಳಿ ಓಡಾಡುತ್ತಾ ಪೊದೆಯ ಬಳಿ ಹೋಗಿ ಲಿಪ್‌ಸ್ಟಿಕ್ ಹಾಕಿದ್ದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದನ್ನು ಇಲ್ಲಿ ಸ್ಮರಿಸಹುದು.
ಒಟ್ಟಿನ;ಲ್ಲಿ ಅರ್ಚಕ ನೀಡಿರುವ ಕಾರಣಗಳನ್ನು ಒಪ್ಪುವಂತೆ ಇಲ್ಲ. ಅರ್ಚಕ ಬುರ್ಖಾ ಧರಿಸಿದ್ದು ಯಾಕೆ ಅನ್ನೋದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ