ಭಗವಂತನೇ ನನ್ನ ಪತಿ, ಕೃಷ್ಣನ ಮೂರ್ತಿಯನ್ನು ಮದುವೆಯಾದ ಯುವತಿ

ನನ್ನ ಜೀವನವನ್ನೇ ಶ್ರೀಕೃಷ್ಣನಿಗೆ ಅರ್ಪಿಸುತ್ತಿರುವೇ ಎಂದು ಹಸೆಮನೆ ಏರಿ, ವಿಗ್ರಹದೊಂದಿಗೆ ವಿವಾಹವಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಭಗವಂತನೇ ನನ್ನ ಪತಿ, ಕೃಷ್ಣನ ಮೂರ್ತಿಯನ್ನು ಮದುವೆಯಾದ ಯುವತಿ
ಶ್ರೀಕೃಷ್ಣನ ಮೂರ್ತಿಯನ್ನು ಮದುವೆಯಾದ ಯುವತಿ
Image Credit source: Zee News

Updated on: Mar 14, 2023 | 1:11 PM

ತನ್ನ ಸರ್ವಸ್ವವನ್ನೂ ಶ್ರೀಕೃಷ್ಣನಿಗೆ ಮುಡಿಪಾಗಿಟ್ಟ ಮೀರಾಬಾಯಿಯ ಕಥೆಗಳನ್ನು ನೀವೂ ಕೇಳಿರುತ್ತೀರಿ. ಆದರೆ ಇಂತದ್ದೇ ಘಟನೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತಾನು ಮದುವೆಯಾದರೇ ಶ್ರೀಕೃಷ್ಣನನ್ನೇ, ನನ್ನ ಜೀವನವನ್ನೇ ಶ್ರೀಕೃಷ್ಣನಿಗೆ ಅರ್ಪಿಸುತ್ತಿರುವೇ ಎಂದು ಶ್ರೀಕೃಷ್ಣನ ವಿಗ್ರಹದೊಂದಿಗೆ ಹಣೆಮನೆ ಏರಿದ್ದಾಳೆ. ಭಗವಂತನನ್ನೇ ನಾನು ಪತಿಯಾಗಿ ಸ್ವೀಕರಿಸಿಕೊಂಡಿದ್ದೇನೆ ಎಂದು ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ಇದರಂತೆಯೇ ಪೋಷಕರ ಒಪ್ಪಿಗೆಯ ಮೇರೆಗೆ ಉತ್ತರ ಪ್ರದೇಶದ ಔರೈಯಾದಲ್ಲಿ ಅದ್ದೂರಿಯಾಗಿ ವಿವಾಹ ನಡೆದಿದೆ.

ಈಕೆಯ ಹೆಸರು ರಕ್ಷಾ (30) ಸ್ನಾತಕೋತ್ತರ ಪದವಿ ಮುಗಿಸಿ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದಾರೆ. ನಿವೃತ್ತ ಶಿಕ್ಷಕ ರಂಜಿತ್ ಸಿಂಗ್ ಸೋಲಂಕಿ ಅವರ ಪುತ್ರಿ. ಮಗಳ ಅಪಾರವಾದ ಕೃಷ್ಣ ಭಕ್ತಿಯನ್ನು ಕಂಡ ತಂದೆ ರಂಜಿತ್ ಸಿಂಗ್ ಮಗಳ ಇಷ್ಟದಂತೆ ಅದ್ದೂರಿಯಾಗಿ ನಡೆಸಿಕೊಟ್ಟಿದ್ದಾರೆ. ಮದುವೆ ಮಂಟಪವನ್ನು ವೈಭವದಿಂದ ಅಲಂಕರಿಸಲಾಗಿದೆ. ಶ್ರೀಕೃಷ್ಣನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಮಂಟಪಕ್ಕೆ ತೆಗೆದುಕೊಂಡು ಬರಲಾಗಿದೆ. ಸಾಕಷ್ಟು ಅತಿಥಿಗಳನ್ನು ಆಹ್ವಾನಿಸಲಾಗಿದೆ. ಜೊತೆಗೆ ಶ್ರೀಕೃಷ್ಣನಿಗೆ ಪ್ರಿಯವಾದ ಭಕ್ಷ್ಯ ಭೋಜನಗಳನ್ನು ಏರ್ಪಡಿಸಲಾಗಿದೆ.

ಇದನ್ನೂ ಓದಿ: ತಾಳಿ ಕಟ್ಟುವ ಶುಭ ವೇಳೆ, ಹಸೆಮಣೆ ಮೇಲೆ ಕುಳಿತ ವಧು ಮದುವೆ ಮಂಟಪದಲ್ಲಿ ಏನು ಮಾಡಿದಳು ನೋಡಿ! ವೈರಲ್ ವಿಡಿಯೋ ಇಲ್ಲಿದೆ

ವಿವಾಹ ಸಂಭ್ರಮದ ನಂತರ ವಧು ಕೃಷ್ಣನ ಮೂರ್ತಿಯೊಂದಿಗೆ ಸುಖಚೈನ್‌ಪುರ ಪ್ರದೇಶದಲ್ಲಿನ ತನ್ನ ಸಂಬಂಧಿಕರ ಮನೆಗೆ ಕಳುಹಿಸಿಕೊಡಲಾಗಿದೆ. ನಂತರ, ವಧು ತನ್ನ ಮಡಿಲಲ್ಲಿ ಕೃಷ್ಣನ ವಿಗ್ರಹವನ್ನು ಹೊತ್ತು ತನ್ನ ತಾಯಿಯ ಮನೆಗೆ ಮರಳಿದ್ದಾಳೆ. ಒಟ್ಟಾರೆಯಾಗಿ ಆಕೆಯ ಆಸೆಯಂತೆ ಮದುವೆ ಕಾರ್ಯ ನೆರವೇರಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:10 pm, Tue, 14 March 23