Viral Video : ನಮಗಾದರೆ ಕೈಗಳಿವೆ ಕೆರೆದುಕೊಳ್ಳಲು. ಪ್ರಾಣಿಗಳೇನು ಮಾಡಬೇಕು? ಎಮ್ಮೆ ದನಕರುಗಳು ಲೈಟಿನ ಕಂಬಗಳಿಗೆ ಮೈ ತಿಕ್ಕಿಕೊಳ್ಳುವುದನ್ನು ನೋಡಿದ್ದೀರಿ. ಹಂದಿಗಳು ಗೋಡೆಗಳಿಗೆ ಮೈ ಉಜ್ಜಿಕೊಳ್ಳುವುದನ್ನು ನೋಡಿದ್ದೀರಿ. ಕಾಡಿನ ಆನೆಗಳು ಹೇಗೆ ಮೈಯುಜ್ಜಿಕೊಳ್ಳುತ್ತವೆ ಹಾಗಿದ್ದರೆ? ವೈರಲ್ ಆಗಿರುವ ಈ ವಿಡಿಯೋ ನೋಡಿ. ಮೈ ಕೆರೆದುಕೊಳ್ಳುವುದೂ ಒಂದು ಕಲೆ! ಎನ್ನುವಂತಿದೆ ಈ ವಿಡಿಯೋ.
ನ್ಯಾಂಬೆನಿ ಇದು ಈ ಆನೆಮರಿಯ ಹೆಸರು. ಸಾಮಾನ್ಯವಾಗಿ ಆನೆಗಳಿಗೆ ಮಣ್ಣಿನಿಂದ ಸ್ನಾನ ಮಾಡುವುದು ಮತ್ತು ಮೈ ಕೆರೆದುಕೊಳ್ಳುವುದು ಬಹಳ ಪ್ರಿಯ. ಮರಿಗಳು ಇದಕ್ಕಾಗಿ ಪೋಷಕರನ್ನು ಆಶ್ರಯಿಸುತ್ತವೆ. ಆದರೆ ಈ ನ್ಯಾಂಬೆನಿ ಪುಟ್ಟ ವಯಸ್ಸಿನಲ್ಲಿಯೇ ಸ್ವಾವಲಂಬಿಯಾಗಿದ್ದಾಳೆ. ತನ್ನ ಮೈ ತಾನೇ ಕೆರೆದುಕೊಳ್ಳುತ್ತಿದ್ದಾಳೆ. ಸುಮಾರು ಐದು ನಿಮಿಷಗಳ ತನಕ ತನ್ನ ಮೈಯನ್ನು ತಾನೇ ಕೆರೆದುಕೊಂಡಿದ್ದಾಳೆ. ಈ ವಿಡಿಯೋ ಅನ್ನು 1 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. 19,000ಕ್ಕೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ಮುದ್ದಾದ ನ್ಯಾಂಬೆನಿ, ಎಷ್ಟು ಚೆಂದ ಇದೆ ಈ ಆನೆಮರಿ ಎಂದಿದ್ದಾರೆ ಹಲವರು. ಇವಳು ನನ್ನ ಸಾಕುಮಗಳು ಎಂದು ಅನೇಕರು ಹೇಳಿದ್ದಾರೆ.
ಈ ಕುರಿತು ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ