Viral Video: ರಷ್ಯಾ; ‘ನಾಲ್ಕು ವರ್ಷದ ನನ್ನ ಮಗಳಷ್ಟೇ ಎತ್ತರ ಈ ನನ್ನ ಬೆಕ್ಕು’

|

Updated on: Aug 02, 2023 | 6:07 PM

Big Cat : ಅಮೆರಿಕದ ಮೈನೆ ಕೂನ್ಸ್​ ಎಂಬ ದೊಡ್ಡ ತಳಿಯ ಈ ಬೆಕ್ಕು ದಟ್ಟ ಮತ್ತು ಹೊಳೆಯುವ ರೋಮದಿಂದಾಗಿ ಎಂಥ ಶೀತಲ ಹವಾಮಾನಕ್ಕೂ ಒಗ್ಗಿಕೊಳ್ಳುತ್ತದೆ. ಇದೀಗ ತನ್ನ ದೈತ್ಯಾಕಾರದಿಂದ ಜಾಲತಾಣಿಗರ ಗಮನ ಸೆಳೆಯುತ್ತಿದೆ.

Viral Video: ರಷ್ಯಾ; ನಾಲ್ಕು ವರ್ಷದ ನನ್ನ ಮಗಳಷ್ಟೇ ಎತ್ತರ ಈ ನನ್ನ ಬೆಕ್ಕು
ತನ್ನ ಪೋಷಕಿಯೊಂದಿಗೆ ರಷ್ಯಾದಲ್ಲಿರುವ ಕೆಫೈರ್ ಎಂಬ ದೊಡ್ಡ ಬೆಕ್ಕು.
Follow us on

Cat : ಈತನಕ ನೀವು ನೋಡಿದ ಬೆಕ್ಕುಗಳಲ್ಲಿ ಇಷ್ಟು ದೊಡ್ಡ ಗಾತ್ರದ ಬೆಕ್ಕನ್ನು ನೋಡಿದ್ದಿದೆಯೇ? ಇಲ್ಲವಾದಲ್ಲಿ ನೋಡಿ. ರಷ್ಯಾದ ಬೆಲ್ಗೊರೋಡ್​ನ ಸ್ಟಾರಿ ಓಸ್ಕೋಲ್​ನಲ್ಲಿ ವಾಸವಾಗಿರುವ ಯುಲಿನಾ ಮಿನಿನಾ ಅವರು ಸಾಕಿದ ಬೆಕ್ಕು ಇದು. ದೈತ್ಯದೇಹಿಯಾದ ಇದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಗಮನ ಸೆಳೆಯುತ್ತಿದೆ. ನನ್ನ ನಾಲ್ಕು ವರ್ಷದ ಮಗಳು ಅನೆಚ್ಕಾಳಷ್ಟೇ ದೊಡ್ಡದಾಗಿದೆ ನಮ್ಮ ಈ ಬೆಕ್ಕು ಎಂದು ಯುಲಿನಾ ಈ ಕೆಳಗಿನ ವಿಡಿಯೋ ಅನ್ನು ಇನ್ಸ್ಟಾನಲ್ಲಿ ಹಂಚಿಕೊಂಡಿದ್ದಾರೆ.

ಕೆಫೀರ್​ ಎಂಬ ಹೆಸರಿನ ಈ ಬೆಕ್ಕು ದೊಡ್ಡ ಬೆಕ್ಕುಗಳ ತಳಿಗಳಿಗೆ ಸೇರುತ್ತದೆ. ಅಮೆರಿಕಾದ ಅತ್ಯಂತ ಹಳೆಯ ತಳಿಯಾದ ಮೈನೆ ಕೂನ್ಸ್​ (Maine Coons) ತಳಿಯು ಇದರ ಮೂಲ. ಜೂ. 4 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಅನೇಕರು ಈ ಬೆಕ್ಕನ್ನು ನೋಡಿ ಅಚ್ಚರಿಗೊಳಗಾಗಿದ್ದಾರೆ. ಇದು ತುಂಬಾ ಮುದ್ದಾದ ಮಗು, ಮನುಷ್ಯರಿಗಿಂತ ಸಾಕುಪ್ರಾಣಿಗಳೇ ಉತ್ತಮ ಎಂದು ಒಬ್ಬರು ಹೇಳಿದ್ಧಾರೆ. ಈ ಮಗುವಿನ ಆರೋಗ್ಯವನ್ನು ಚೆನ್ನಾಗಿ ನೋಡಿಕೋ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಇನ್ನೊಬ್ಬರು. ಈ ನಾಲ್ಕು ವರ್ಷದ ಬೆಕ್ಕು, ನಾಲ್ಕು ವರ್ಷದ ಮಗುವಿಗಿಂತಲೂ ಚೆನ್ನಾಗಿ ಊಟ ಮಾಡುತ್ತದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಫಿಟ್​ನೆಸ್​; 68ನೇ ವಯಸ್ಸಿಗೆ ಜಿಮ್ ವರ್ಕೌಟ್ ಶುರು ಮಾಡಿದ ಮಹಿಳೆ

ನಾನೂ ಇಂಥ ಬೆಕ್ಕನ್ನು ಸಾಕಬೇಕು ಎಂದುಕೊಂಡಿದ್ದೇನೆ, ಇವುಗಳನ್ನು ಹೇಗೆ ಎಲ್ಲಿ ಖರೀದಿಸುವುದು? ಎಂದು ಕೇಳಿದ್ದಾರೆ ಒಬ್ಬರು. ಇತರೇ ಬೆಕ್ಕುಗಳಂತೆಯೇ ಇವುಗಳನ್ನು ಸಾಕಬಹುದೆ? ಎಂದು ಮತ್ತೊಬ್ಬರು ಕೇಳಿದ್ದಾರೆ. ಅಮೆರಿಕ ಮೂಲಕ ಈ ಬೆಕ್ಕುಗಳು ಎಂಥ ಹವಾಮಾನಗಳಿಗೂ ಒಗ್ಗಿಕೊಳ್ಳುತ್ತವೆ. ಕಾರಣ ಇವುಗಳ ದಟ್ಟ ಮತ್ತು ಹೊಳಪುಳ್ಳ ರೋಮಗಳು ನೀರನ್ನು ಹೀರಿಕೊಳ್ಳಲಾರವು. ಪೊದೆಯಂತ ಬಾಲ ಮತ್ತು ಮೈತುಂಬ ಇರುವ ಉದ್ದ ರೋಮಗಳು ಚಳಿ ಮಳೆಯಿಂದ ಇವುಗಳನ್ನು ರಕ್ಷಿಸುತ್ತವೆ.

ನಿಮಗೂ ಬೇಕೆ ಇಂಥ ಬೆಕ್ಕು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 6:03 pm, Wed, 2 August 23