ಹಿಟ್ಲರ್​ನ ಸಹಚರ ವಾಸವಿದ್ದ ಈ ವಿಲ್ಲಾವನ್ನು ಫ್ರೀ ಆಗಿ ಕೊಡ್ತಿದ್ದಾರಂತೆ ತಗೋತೀರಾ?

|

Updated on: May 06, 2024 | 9:33 AM

ಹಿಟ್ಲರ್​ನ ಸಹಚರ ವಾಸವಿದ್ದ ಐಷಾರಾಮಿ ವಿಲ್ಲಾವನ್ನು ಜರ್ಮನಿ ಸರ್ಕಾರ ಉಚಿತವಾಗಿ ನೀಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಜರ್ಮನಿಯಲ್ಲಿ 42 ಎಕರೆಯಲ್ಲಿ ನಿರ್ಮಿಸಿರುವ ಐಷಾರಾಮಿ ಮನೆಯನ್ನು ಸರ್ಕಾರ ಉಚಿತವಾಗಿ ಕೊಡ್ತೀನಿ ಅಂದರೂ ಜನರು ತೆಗೆದುಕೊಳ್ಳಲು ಮುಂದೆ ಬರ್ತಿಲ್ಲ.

ಹಿಟ್ಲರ್​ನ ಸಹಚರ ವಾಸವಿದ್ದ ಈ ವಿಲ್ಲಾವನ್ನು ಫ್ರೀ ಆಗಿ ಕೊಡ್ತಿದ್ದಾರಂತೆ ತಗೋತೀರಾ?
ವಿಲ್ಲಾ
Follow us on

ಪ್ರತಿಯೊಬ್ಬರಿಗೂ ಸ್ವಂತ ಮನೆಯೊಂದನ್ನು ಕಟ್ಟಿಸಬೇಕೆಂಬ ಕನಸಿರುತ್ತೆ, ಆದರೆ ಅದು ಸುಲಭದ ಮಾತಲ್ಲ, ಸೈಟ್​ಗಳ ಬೆಲೆ ಗಗನಕ್ಕೇರಿದೆ. ಆದರೆ ಜರ್ಮನಿಯಲ್ಲಿ 42 ಎಕರೆಯಲ್ಲಿ ನಿರ್ಮಿಸಿರುವ  ವಿಲ್ಲಾವನ್ನು ಸರ್ಕಾರ ಉಚಿತವಾಗಿ ಕೊಡ್ತೀನಿ ಅಂದರೂ ಜನರು ತೆಗೆದುಕೊಳ್ಳಲು ಮುಂದೆ ಬರ್ತಿಲ್ಲ. ಯಾರೂ ಇಲ್ಲಿ ಇರಲು ಮನಸ್ಸು ಮಾಡುತ್ತಿಲ್ಲ ಇದಕ್ಕೆ ಕಾರಣನೂ ಇದೆ.
ಈ ಮೊದಲು ಅಡಾಲ್ಫ್​ ಹಿಟ್ಲರ್​(Adolf Hitler) ನ ಸಹಚರ ಇಲ್ಲಿ ವಾಸಿಸುತ್ತಿದ್ದಂತೆ ಇಲ್ಲಿ ಅನಾಚಾರ ನಡೆಸುತ್ತಿದ್ದ, ಎಷ್ಟೋ ಜನರನ್ನು ಹತ್ಯೆ ಕೂಡ ಮಾಡಿದ್ದ, ಹಾಗಾಗಿ ಈ ಮನೆಯೊಳಗೆ ಯಾರೂ ಕೂಡ ಇರಲು ಬಯಸುವುದಿಲ್ಲ.

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಬೊಗೆನ್ಸೆ ಸರೋವರದ ಬಳಿ ಕಾಡಿನಲ್ಲಿ ನಿರ್ಮಿಸಲಾದ ಈ ವಿಲ್ಲಾ ಖಾಲಿ ಇದೆ.
ಮೊದಲು ಸರ್ಕಾರ ಅದನ್ನು ಮಾರಾಟ ಮಾಡಲು ಪ್ರಯತ್ನಿಸಿತು, ಆದರೆ ಯಾರೂ ಮುಂದೆ ಬಂದಿಲ್ಲ.ಹಾಗಾಗಿ ರಾಜ್ಯ ಸರ್ಕಾರ ಇದನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

ಇದರಲ್ಲಿ ಯಾರೂ ವಾಸಿಸಲು ಬಯಸುವುದಿಲ್ಲ, ಇದನ್ನು ಕೆಡವಬೇಕಾಗುತ್ತದೆ ಆ ಜಾಗದಲ್ಲಿ ಮನೆ ನಿರ್ಮಾಣ ಮಾಡಬೇಕಾಗುತ್ತದೆ ಅದಕ್ಕೆ 375 ಮಿಲಿಯನ್ ಡಾಲರ್​ ವೆಚ್ಚವಾಗಲಿದೆ. ಸರ್ವಾಧಿಕಾರಿ ಹಿಟ್ಲರ್​ನ ಸಹಚರ ಜೋಸೆಫ್​ ಗೋಬೆಲ್ಸ್​ ಇಲ್ಲಿ ವಾಸವಾಗಿದ್ದ, ಇದನ್ನು ಅಧರ್ಮದ ಗುಹೆ ಎಂದೇ ಕರೆಯಲಾಗುತ್ತಿತ್ತು. ಎರಡನೇ ಮಹಾಯುದ್ಧದ ನಂತರ ಇದನ್ನು ಮಿಲಿಟರಿ ಆಸ್ಪತ್ರೆಯಾಗಿ ಬಳಸಲಾಯಿತು. ಅನೇಕ ವರ್ಷಗಳಿಂದ ಇದು ಸೋವಿಯತ್ ಒಕ್ಕೂಟದ ಒಡೆತನದಲ್ಲಿದೆ ಮತ್ತು ಈಗ ಬರ್ಲಿನ್ ಸರ್ಕಾರ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಮತ್ತಷ್ಟು ಓದಿ: ನಿದ್ದೆಗೆ ಜಾರಿದ ಸ್ಟೇಷನ್ ಮಾಸ್ಟರ್​, ಗ್ರೀನ್​ ಸಿಗ್ನಲ್​ ಸಿಗದೆ ಅರ್ಧ ಗಂಟೆ ನಿಂತಿತ್ತು ರೈಲು

ಈ ವಿಲ್ಲಾವನ್ನು ಖರೀದಿಮಾಡಬಯದುವವರು ಯಾರಾದರೂ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ. ಸರ್ಕಾರದಿಂದ ಉಚಿತವಾಗಿ ನೀಡಲಿದ್ದೇವೆ, ಈ ಮಹಲ್​ನ್ನು 1936 ರಲ್ಲಿ ಗೋಬೆಲ್ಸ್ ನಿರ್ಮಿಸಿದರು.

ನಂತರ, ಹಿಟ್ಲರನ ಮರಣದ ನಂತರ, ಅವನು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಮಹಲ್ ನಿರ್ವಹಣೆ ಸರ್ಕಾರಕ್ಕೆ ತೊಡಕಾಗಿ ಪರಿಣಮಿಸಿದೆ. ಯಾರೂ ಅದನ್ನು ತೆಗೆದುಕೊಳ್ಳದಿದ್ದರೆ, ಅದನ್ನು ಕೆಡವುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ. ಇದರಿಂದ ಸರ್ಕಾರಕ್ಕೆ ಸುಮಾರು 55 ಮಿಲಿಯನ್ ಡಾಲರ್ ನಷ್ಟವಾಗಲಿದೆ ಎನ್ನುವ ವಿಚಾರ ತಿಳಿದುಬಂದಿದೆ.

 

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ