Viral Video: ಡ್ಯಾನ್ಸಿಂಗ್​​ ಗೋಲ್ಗಪ್ಪಾ, ಶೀ… ಅಯ್ಯಯ್ಯಪ್ಪಾ; ತಿಂದವರಿಗೆ ಆಸ್ಪತ್ರೆಯೇ ಗತಿ!

Jaipur : ಕೆಲ ವರ್ಷಗಳ ಹಿಂದೆ ಮುಂಬೈನ ಪಾನಿಪುರೀವಾಲಾ ಮತ್ತು ಮೂತ್ರದ ಕಥೆ ನೆನಪಾಗುತ್ತಿದೆಯೇ? ಎಂದು ಕೇಳಿದ್ಧಾರೆ ಒಬ್ಬರು. ಮೇರಾ ಭಾರತ್ ಮಹಾನ್​! ಅದ್ಭುತವಾದ ರೋಗನಿರೋಧಕ ಶಕ್ತಿ ಭಾರತೀಯರಿಗಿದೆ ಎಂದಿದ್ದಾರೆ ಇನ್ನೊಬ್ಬರು.

Viral Video: ಡ್ಯಾನ್ಸಿಂಗ್​​ ಗೋಲ್ಗಪ್ಪಾ, ಶೀ... ಅಯ್ಯಯ್ಯಪ್ಪಾ; ತಿಂದವರಿಗೆ ಆಸ್ಪತ್ರೆಯೇ ಗತಿ!
ಜೈಪುರದ ಬೀದಿಯಲ್ಲಿರುವ ಈ ಗೋಲ್ಗಪ್ಪಾವಾಲಾ

Updated on: Jun 22, 2023 | 1:54 PM

Golgappa: ಹಿಂದೊಮ್ಮೆ ಡ್ಯಾನ್ಸಿಂಗ್​ ಭೇಲ್​ಪುರಿ ವೈರಲ್ ವಿಡಿಯೋ ನೋಡಿದ್ದಿರಿ. ಇದೀಗ ಡ್ಯಾನ್ಸಿಂಗ್​ ಗೋಲ್ಗಪ್ಪಾದ ವಿಡಿಯೋ ನೋಡುವ ಕರ್ಮ ನಿಮ್ಮದು! ಹೀಗೆ ಹೇಳಿದ್ದಕ್ಕೆ ಗೋಲ್ಗಪ್ಪಾ ಪ್ರಿಯರಾದ ಹಲವರಿಗೆ ಸ್ವಲ್ಪ ಬೇಜಾರಾಗಬಹುದು. ಏಕೆಂದರೆ ಸಂಜೆಯಾದೊಡನೆ ತಿಂಡಿಬೀದಿಯಲ್ಲಿ ನಿಂತು ಈ ಕುರುಕುರು ಪುರಿ, ಸಿಹಿ, ಹುಳೀ, ಖಾರ ಮಿಶ್ರಿತ ಖಾದ್ಯವನ್ನು ಬಾಯಿ ಚಪ್ಪರಿಸಿ ಸ್ವರ್ಗಸುಖ ಅನುಭವಿಸಿರುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಈ ಡ್ಯಾನ್ಸಿಂಗ್​ ಗೋಲ್ಗಪ್ಪಾವಾಲಾನನ್ನು ಬಯ್ಯಲು ಪದಗಳನ್ನು ಹುಡುಕುತ್ತಿದ್ದಾರೆ, ಅವರಿಗೆ ನೀವು ಹೇಗೆ ಸಹಾಯ ಮಾಡಬಲ್ಲಿರಿ?

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!


ರಾಜಸ್ಥಾನದ ಜೈಪುರದಲ್ಲಿರುವ ಟ್ರಿಪೋಲಿಯಾ ಬಝಾರ್​ನಲ್ಲಿ ಗೋಲ್ಗಪ್ಪಾ ಮಾರಾಟ ಮಾಡುವ ಈತ ತಿಂಡಿ ತಯಾರಿಸುವಾಗ ಡ್ಯಾನ್ಸ್ ಮಾಡುತ್ತಾ ಗ್ರಾಹಕರ ಗಮನವನ್ನು ಸೆಳೆಯುತ್ತಿರುತ್ತಾನೆ. ಡ್ಯಾನ್ಸ್​ ಯಾಕೆ ಯೋಗಾಸನ, ಸಾಹಸ ಇನ್ನೊಂದೇನೋ ಮಾಡಲಿ. ಆದರೆ ಆಹಾರ ಎಂದಾಗ ರುಚಿ ಮೊದಲ ಆದ್ಯತೆಯಾದರೂ ಶುಚಿ ಎನ್ನುವುದು ಮರೆಗೆ ಸರಿಯಬಾರದಲ್ಲವೆ?

ಇದನ್ನೂ ಓದಿ : Viral Video:ನಾಯಿಯಿಂದ ಯೋಗ ಮಾಡಿಸಿ ಯೋಗವನ್ನು ಅವಮಾನಿಸಿದ್ದೀರಿ

ಖಂಡಿತ ಇವನು ಜನರನ್ನು ಅತಿಸಾರಕ್ಕೆ ಗುರಿ ಮಾಡುತ್ತಿದ್ದಾನೆ. ಇವನು ಕೈಗವಸು ಧರಿಸಿಲ್ಲ. ಮೂಗು ತಿಕ್ಕಿಕೊಳ್ಳುತ್ತಿದ್ದಾನೆ. ಅದೇ ಕೈಯಿಂದ ಆಲೂಭಾಜಿಯನ್ನು ಪುರಿಯಲ್ಲಿ ತುಂಬುತ್ತಿದ್ದಾನೆ. ಗ್ರಾಹಕರಿಗೆ ಪ್ಲೇಟ್​ ಕೊಡುವ ಮೊದಲು ಪಾನೀ ರುಚಿ ಹೇಗಿದೆಯೆಂದು ಅಂಗೈನೆಕ್ಕುತ್ತಿದ್ದಾನೆ.

ಇದನ್ನೂ ಓದಿ : Viral Video: ಈ ಮುದ್ದಿನ ಸೊಕ್ಕು ಗೋಲ್​ಕೀಪರ್ ಆದೀತೇ?

ಇಂಥ ಗೋಲ್​ಗಪ್ಪಾವನ್ನು ನೀವು ತಿನ್ನಲು ಇಷ್ಟಪಡುತ್ತೀರೇ? ಎಂದು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಲಾಗಿದೆ. ನೆಟ್ಟಿಗರು ವಾಕರಿಕೆ ಬರುತ್ತಿದೆ ಎನ್ನುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಮುಂಬೈನ ಪಾನಿಪುರೀವಾಲಾ ಮತ್ತು ಮೂತ್ರದ ಕಥೆ ನಿಮಗೆ ನೆನಪಾಗುತ್ತಿದೆಯೇ? ಎಂದು ಒಬ್ಬರು ಕೇಳಿದ್ದಾರೆ. ಸ್ವಚ್ಛತೆಯ ಬಗ್ಗೆ ಅರಿವಿರುವವರು ಇಲ್ಲಿ ಒಂದು ಕ್ಷಣವೂ ನಿಲ್ಲುವುದಿಲ್ಲ. ಹೀಗೆ ಇಲ್ಲಿ ನಿಂತು ತಿನ್ನುತ್ತಾರೆಂದರೆ ಅವರಿಗೆ ಅರಿವೇ ಇಲ್ಲವೆಂದರ್ಥ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral: ಪ್ರಾಣಿಲೋಕದ ಬುದ್ಧಿಮತ್ತೆ, ಸಂವಹನಾ ಸಾಮರ್ಥ್ಯಕ್ಕೆ ಇದಕ್ಕಿಂತ ದಂಗುಬಡಿಸುವ ಉದಾಹರಣೆ ಬೇಕೆ?

ಅಂಕಲ್​ ಗೆ ಮೂತ್ರ ವಿಸರ್ಜಿಸಲು ಇವರಿಗೆ ಅವಸರವಾಗಿರಬೇಕು. ಲಕ್ವಾ ಹೊಡೆದಿರಬೇಕು ಅಂತೆಲ್ಲ ನೆಟ್ಟಿಗರು ಹೇಳಿದ್ದಾರೆ. ಆದರೆ ಒಬ್ಬರು ಮಾತ್ರ ಮೇರಾ ಭಾರತ್ ಮಹಾನ್​! ನಮ್ಮ ಜನ ಏನು ತಿಂದರೂ ಆರೋಗ್ಯವಂತರಾಗಿರುತ್ತಾರೆ. ಅವರಲ್ಲಿ ಅಗಾಧವಾದ ರೋಗನಿರೋಧಕ ಶಕ್ತಿ ಇದೆ ಎಂದು ಮಗದೊಬ್ಬರು ಹೇಳಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ