Viral Video: ಡ್ಯಾನ್ಸಿಂಗ್​ ಭೇಲ್​ ಪುರಿ; 60 ಪದಾರ್ಥಗಳಲ್ಲಿ ಇವನ ಬೆವರೂ ಸೇರಿ ರುಚಿ ಹೆಚ್ಚಿದೆಯಾ? ನೆಟ್ಟಿಗರ ಪ್ರಶ್ನೆ

Street Food : ಎಲಾ ಇವನ, ಪಾತ್ರೆ ಬೆಳಗುತ್ತಿದ್ದಾನೋ? ಅಯ್ಯೋ ಅರ್ಧದಷ್ಟು ಭೇಲ್​ ಕೆಳಕ್ಕೇ ಬಿದ್ದು ಹೋಗಿದೆ. ಇವ ಕ್ಯಾಪ್ಟನ್​ ಆಗಿದ್ದರೆ ಎರಡೇ ಸೆಕೆಂಡಿನಲ್ಲಿ ಹೆಲಿಕಾಪ್ಟರ್​ ಲ್ಯಾಂಡ್ ಮಾಡಿಬಿಡುತ್ತಿದ್ದ! ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

Viral Video: ಡ್ಯಾನ್ಸಿಂಗ್​ ಭೇಲ್​ ಪುರಿ; 60 ಪದಾರ್ಥಗಳಲ್ಲಿ ಇವನ ಬೆವರೂ ಸೇರಿ ರುಚಿ ಹೆಚ್ಚಿದೆಯಾ? ನೆಟ್ಟಿಗರ ಪ್ರಶ್ನೆ
ಸಾಯೀರಾಮನ ಭೇಲ್​ಪುರಿ ತಯಾರಿಸುವ ವೈಖರಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 07, 2023 | 2:21 PM

Bhelpuri: ಎಳೆಯರಿಂದ ಹಿಡಿದು ಮುಪ್ಪಾನುಮುದುಕರು ಕೂಡ ಭೇಲ್​ಪುರಿ (Street Food) ಎಂದರೆ ಬಾಯಿ ಚಪ್ಪರಿಸುತ್ತಾರೆ. ವಾರಕ್ಕೊಮ್ಮೆ ಅದು ಉದರ ಸೇರದಿದ್ದರೆ ಜೀವನವೇ ನಶ್ವರ ಎಂಬಂಥ ಭಾವವನ್ನು ಅನೇಕರು ಅನುಭವಿಸಿರುತ್ತಾರೆ. ಇನ್ನೂ ಕೆಲವರು ಅಯ್ಯೋ, ರುಚಿ ಇದ್ದರೆ ಆಯಿತೇ ಶುಚಿ ಬೇಡವೇ? ಎಂದು ಮೂಗು ಮುರಿಯುತ್ತಾರೆ. ಆ ರುಚಿಯನ್ನು ತಮ್ಮ ಅಡುಗೆಮನೆಯೊಳಗೆ ಹುಡುಕಾಡಿ ಸೋಲುತ್ತಾರೆ ಎನ್ನುವುದು ಬೇರೆ ಮಾತು! ಇದೀಗ ವೈರಲ್ ಆಗಿರುವ ವಿಡಿಯೋ ಇದೇ ಭೇಲ್​ಪುರಿಗೆ ಸಂಬಂಧಿಸಿದ್ದು; ಡ್ಯಾನ್ಸಿಂಗ್​ ಭೇಲ್​ಪುರಿ! .

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Rajanmishra (@aapkabhai_foody)

ಭೇಲ್​ಪುರಿ ಮಾರಿ ಲಕ್ಷಾಧಿಪತಿಯಾಗಿದ್ದಾರೆ ಈತ ಎಂದು ಈ ವಿಡಿಯೋದ ಒಕ್ಕಣೆ ಹೇಳುತ್ತಿದೆ. ಈ ಅಂಗಡಿಯ ಮಾಲಿಕ ಸಾಯೀರಾಮ್, ಈ ಭೇಲ್​ಪುರಿಯಲ್ಲಿ 60 ಪದಾರ್ಥಗಳನ್ನು ಹಾಕಲಾಗಿದೆ ಎಂದಿದ್ಧಾನೆ. ಇದನ್ನು ತಯಾರಿಸುವಾಗ ಅವನಲ್ಲಿ ಉತ್ಸಾಹ ಇಮ್ಮಡಿಸುವುದನ್ನು ಗಮನಿಸಿದ್ದೀರಾ? ಈ ಕಾರಣಕ್ಕಾಗಿಯೇ ಫುಡ್ ಬ್ಲಾಗರ್ ಡ್ಯಾನ್ಸಿಂಗ್ ಭೇಲ್​ಪುರಿ ಎಂದು ಹೆಸರಿಟ್ಟಿರುವ ಸಾಧ್ಯತೆ ಇದೆ. ಈ ಶೀರ್ಷಿಕೆಯಿಂದಾಗಿಯೇ ಸುಮಾರು 1 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!

ಈ ವ್ಯಕ್ತಿ ಕ್ಯಾಪ್ಟನ್ ಆಗಿದ್ದರೆ ಎರಡೇ ಸೆಕೆಂಡಿನಲ್ಲಿ ಹೆಲಿಕಾಪ್ಟರ್​ ಅನ್ನು ಟೇಕ್​ ಆಫ್ ಮಾಡುವಂತೆ ಕಾಣುತ್ತಾನೆ ಈ ವ್ಯಕ್ತಿ. ಆರಂಭದಲ್ಲಿ ಈತ ಪಾತ್ರೆ ಬೆಳಗುತ್ತಿದ್ದಾನೆ ಎಂದುಕೊಂಡೆ. ಅರ್ಧದಷ್ಟು ಭೇಲ್​ಪುರಿಯಲ್ಲಿ ಕೆಳಗೆ ಬಿದ್ದುಹೋಗಿದೆ. ಈ ಆಹಾರವೂ ಆರೋಗ್ಯಕರವಲ್ಲ ಮತ್ತು ಇದನ್ನು ತಯಾರಿಸಲು ಶಕ್ತಿ, ಸಮಯ ಎಲ್ಲವ ವ್ಯರ್ಥ. ಅನೇಕರು ಹೀಗೆ ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral Video: ಬಸ್ಸಿನಲ್ಲಿ ಬಿಸಿಬಿಸಿ ಕಜ್ಜಾಯ ತಿಂದ ಪೋಲಿ; ಮಂಡ್ಯದ ಮಹಿಳೆಗೆ ಭಲೇ ಎಂದ ನೆಟ್ಟಿಗರು

ಶುಚಿತ್ವವನ್ನೇ ಈತ ಕಾಪಾಡುತ್ತಿಲ್ಲ. ಇದು ರುಚಿಯಾಗಿರಲು ಇವನಿಂದ ಹರಿದು ಪಾತ್ರೆಯೊಳಗೆ ಸೇರುವ ಬೆವರು ಕೂಡ ಮುಖ್ಯ ಪದಾರ್ಥ! ನಮಗಂತೂ ಭಯವಾಗುತ್ತಿದೆ ಇವನು ಈ ಪರಿ ಕುಣಿದಾಡಿಕೊಂಡು ತಯಾರಿಸುವ ಈ ಭೇಲ್​ಪುರಿ ನೋಡಿ. ಗ್ರಾಹಕರ ಆರೋಗ್ಯದ  ಬಗ್ಗೆ ಇವನಿಗೆ ಕಾಳಜಿ ಇದ್ದಂತಿಲ್ಲ. ಹಾಗೆಯೇ ಇಂಥವರ ಹುಚ್ಚನ್ನು ಮತ್ತೇರಿಸುವ ಫುಡ್​ ಬ್ಲಾಗರ್​ಗಳೋ… ಸಾಕುಸಾಕು. ಅಂತೆಲ್ಲ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್