AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Odisha Train Accident: ಇಲ್ಲ, ನನ್ನ ಮಗ ಸತ್ತಿಲ್ಲ, ಈ ಸುದ್ದಿಯನ್ನು ನಾನು ನಂಬುವುದಿಲ್ಲ, ಹತಾಶನಾಗುವುದಿಲ್ಲ!

Father and Son : ''ಫೋನಿನಲ್ಲಿ ಮಗನ ಕ್ಷೀಣಧ್ವನಿ ಕೇಳುತ್ತಿತ್ತು. ಸ್ಥಳಕ್ಕೆ ಬಂದಾಗ ಶವಗಳ ಮಧ್ಯೆ ಕೈಯೊಂದು ನಡಗುತ್ತಿತ್ತು. ಅರೆಜೀವಗೊಂಡ ಮಗನನ್ನು ಎತ್ತಿಕೊಂಡು 230 ಕೀ.ಮೀ.ಗಳಷ್ಟು ಆಸ್ಪತ್ರೆಗಳಿಗಾಗಿ ಅಲೆದೆ.'' ಹೆಲಾರಾಮ್ ಮಲಿಕ್

Odisha Train Accident: ಇಲ್ಲ, ನನ್ನ ಮಗ ಸತ್ತಿಲ್ಲ, ಈ ಸುದ್ದಿಯನ್ನು ನಾನು ನಂಬುವುದಿಲ್ಲ, ಹತಾಶನಾಗುವುದಿಲ್ಲ!
ಹೆಲಾರಾಮ್​ ಮಲಿಕ್ ತನ್ನ ಮಗನನ್ನು ಆಸ್ಪತ್ರೆಗೆ ಸಾಗಿಸುವ ದೃಶ್ಯ
ಶ್ರೀದೇವಿ ಕಳಸದ
|

Updated on:Jun 07, 2023 | 1:30 PM

Share

Odisha : “ಇಲ್ಲ, ನನ್ನ ಮಗ ಸತ್ತಿಲ್ಲ, ಈ ಸುದ್ದಿಯನ್ನು ನಾನು ನಂಬುವುದಿಲ್ಲ, ಹತಾಶನಾಗುವುದಿಲ್ಲ” ಎಂಬ ದೃಢನಿರ್ಧಾರದಿಂದ ಆ ತಂದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುಮಾರು 230 ಕಿ.ಮೀ ಓಡಾಡಿದ. ಕೊನೆಗೂ ತಾತ್ಕಾಲಿಕ ಶವಾಗಾರವೊಂದರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮಗನನ್ನು ಕಂಡ. ಸಾವಿಗೆ ತುತ್ತಾಗದೇ ಜೀವ ಹಿಡಿದುಕೊಂಡಿದ್ದ ಮಗನನ್ನು ಅಕ್ಷರಶಃ ಸಾವಿನ ಬಾಯಿಂದ ಬಿಡಿಸಿಕೊಡು ಬಂದ; ಬಂಗಾಲದ ಈ ತಂದೆಯ ಸಾಹಸದ ಕತೆ ಕೇಳಿದ ಜನ ದಂಗಾಗಿದ್ದಾರೆ. ನಿಜಕ್ಕೂ ವಾಸ್ತವ ಕಲ್ಪನೆಯನ್ನೂ ಮೀರಿ ವಿಚಿತ್ರವಾದುದು ಎಂದು ಉದ್ಗರಿಸಿದ್ದಾರೆ.

ಇತ್ತೀಚೆಗೆ ಒಡಿಶಾದಲ್ಲಿ ಆದ ರೈಲು ದುರ್ಘಟನೆ ಇಡೀ ದೇಶವನ್ನೇ ನಡುಗಿಸಿದೆ. ಅಪಘಾತದ ಹಾಗೂ ಅದರ ನಂತರದ ಘೋರ ನೋಟಗಳು ನಮ್ಮೆಲ್ಲರ ಮನದಾಳದಲ್ಲಿ ಬೇರೂರಿ ಮನಃಪಟಲದಲ್ಲಿ ಮೂಡುತ್ತ ಇನ್ನೂ ಕಾಡುತ್ತಿವೆ. ಇದು ಮರೆಯಲಾಗದ್ದು, ಮರೆಯಬಾರದ್ದು. ಇಂಥ ತೀವ್ರ ಹತಾಶೆಯ ಸಂದರ್ಭದಲ್ಲಿ ಈ ತಂದೆ ಮತ್ತು ಮಗನ ಸುದ್ದಿ ತುಸುವಾದರೂ ಜೀವನಪ್ರೀತಿ ಹಾಗೂ ಮರುಭರವಸೆಯನ್ನು ಹುಟ್ಟಿಸಿದೆ.

ಇದನ್ನೂ ಓದಿ : Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!

ಹೌರಾದಲ್ಲಿ ಅಂಗಡಿಯೊಂದನ್ನು ನಡೆಸುತ್ತಿರುವ ಹೆಲಾರಾಮ್ ಮಲಿಕ್ (Helaram Malik) ಕಳೆದ ಶುಕ್ರವಾರ ಶಾಲಿಮಾರ್ ನಿಲ್ದಾಣದಲ್ಲಿ ತಮ್ಮ 24 ವರ್ಷದ ಮಗನನ್ನು ಬೀಳ್ಕೊಟ್ಟು ಬಂದ ಕೆಲವು ಗಂಟೆಗಳ ನಂತರ ರೈಲು ಅಪಘಾತದ ಸುದ್ದಿ ಗೊತ್ತಾಗಿದೆ. ಮಗನಿಗೆ ಫೋನ್ ಮಾಡಿದರೆ ಗಾಯಗೊಂಡ ಮಗನಿಂದ ಕ್ಷೀಣ ದನಿಯಲ್ಲಿ ಉತ್ತರ. ಒಂದು ಕ್ಷಣವೂ ತಡಮಾಡದೆ ಪರಿಚಯದ ಆ್ಯಬುಲೆನ್ಸ್ ಚಾಲಕ ಹಾಗೂ ಇನ್ನೊಬ್ಬನೊಂದಿಗೆ ಬಾಲಾಸೋರ್​ನತ್ತ (Balasore) ರಾತೋರಾತ್ರಿ ಪ್ರಯಾಣ ಬೆಳಿಸಿ, ಪ್ರತಿ ಆಸ್ಪತ್ರೆಯನ್ನೂ ಜಾಲಾಡಿ, ಎದುರಾದ ಪ್ರತಿಯೊಬ್ಬರನ್ನೂ ವಿಚಾರಿಸಿದ್ದಾರೆ.

ಇದನ್ನೂ ಓದಿ : Viral Video: ಡ್ರಗ್ಸ್​ ಸೇವಿಸಿ ಕಾರ್​ ಪುಡಿಗಟ್ಟಿದ ಹದಿಹರೆಯದ ಟ್ರ್ಯಾಕ್ಟರ್​ ಚಾಲಕನಿಗೆ ಜೈಲುಶಿಕ್ಷೆ

ಆಸ್ಪತ್ರೆಯಲ್ಲಿಲ್ಲದಿದ್ದರೆ ಬಹುತೇಕ ಸತ್ತಿರಬೇಕು, ಹತ್ತಿರದ ಹೈಸ್ಕೂಲಿಗೆ ಹೋಗಿ, ಅಲ್ಲಿ ದೇಹಗಳನ್ನು ಇರಿಸಿದ್ದಾರೆ, ಎಂಬ ಉತ್ತರ ಬಂದಾಗ ಅದನ್ನು ನಂಬದಿದ್ದರೂ ಆ ತಾತ್ಕಾಲಿಕ ಶವಾಗಾರಕ್ಕೆ ಹೋಗಿದ್ದಾರೆ. ಅಲ್ಲಿನ ದೇಹಗಳನ್ನು ನೋಡಲೂ ಅವಕಾಶವಿರಲಿಲ್ಲ. ಆ ಗದ್ದಲದ ನಡುವೆ ಆಕಸ್ಮಿಕವಾಗಿ ಒಬ್ಬರು ಅಲ್ಲಿದ್ದ ಒಂದು ದೇಹದ ಕೈ ನಡುಗುತ್ತಿದ್ದುದನ್ನು ಗಮನಕ್ಕೆ ತಂದರು. ಕೂಡಲೇ ಅದು ಮಗ ಬಿಸ್ವಜಿತ್ ಕೈ ಎಂದು ಗೊತ್ತಾಗಿ ಅವನನ್ನು ಅಲ್ಲಿಂದ ಸಾಗಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ!

ಇದನ್ನೂ ಓದಿ : Viral Video: ಭಜ್ಜಿಯ ಅಜ್ಜನಲ್ಲರಳಿರುವ ನಗುವಿಗೆ ಬೆಲೆ ಎಷ್ಟೆಂದು ತಿಳಿದಿದೆಯೇ?; ಕಲಾವಿದನಿಗೆ ಶಭಾಷ್​ ಎಂದ ನೆಟ್ಟಿಗರು

ಈ ನಂಬಲಸಾಧ್ಯ ಘಟನೆ ಜನರಲ್ಲಿ ಆಘಾತ ಮೂಡಿಸಿದೆ. “ಅಪಘಾತಕ್ಕೆ ಈಡಾದವರನ್ನು ಗಾಯಗೊಂಡವರು, ಸತ್ತವರು ಎಂದು ವಿಂಗಡಿಸುವವರು ಯಾರು? ವೈದ್ಯರೋ ತರಬೇತಿಯಿಲ್ಲದ ಸಾಮಾನ್ಯರೊ?” “ಟ್ರಕ್ಕುಗಳಲ್ಲಿ ದೇಹಗಳನ್ನು ಎಸೆಯುತ್ತಿದ್ದ ರೀತಿ ನೋಡಿದರೆ ಅದರಲ್ಲಿ ಕೆಲವರಾದರೂ ಜೀವ ಹಿಡಿದುಕೊಂಡಿರುವ ಸಾಧ್ಯತೆ ಇದೆ. ಇದಕ್ಕೆ ಯಾರು ಹೊಣೆ?” ಈ ಇಡೀ ಘಟನೆ ನಮ್ಮನ್ನು ಆಳವಾಗಿ ತಟ್ಟಬೇಕಾದ್ದಂತೂ ನಿಜ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:27 pm, Wed, 7 June 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ