Viral: ಗಣಿತವೆಂದರೆ ಕಬ್ಬಿಣದ ಕಡಲೆ ಎಂದೇ ಬಹುಜನರ ನಂಬಿಕೆ. ಅನೇಕ ಕಾರಣಗಳಿಂದ ಜಗತ್ತಿನಾದ್ಯಂತ ಮಂದಿ ಗಣಿತವೆಂದರೆ ಗಡಗಡ ನಡುಗುವರು. ವಾಸ್ತವದಲ್ಲಿ ಈ ಮಾತನ್ನು ಯಾವುದೇ ವಿಷಯ ಅಥವಾ ಕ್ಷೇತ್ರಕ್ಕೂ ಅನ್ವಯಿಸಬಹುದು. ಆಸಕ್ತಿ ಇದ್ದು ತಕ್ಕ ಶ್ರಮ ವಹಿಸಿದಾಗ ಮೊದಲಿಗೆ ವಜ್ಜೆಯೆನ್ನಿದ್ದು ನಂತರ ಹೂವಿನಷ್ಟು ಹಗುರವೂ ಆಗಬಹುದು. ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡದಿರುವುದಕ್ಕೆ ಮುಖ್ಯ ಕಾರಣಗಳಲ್ಲೊಂದು ಆ ವಿಷಯವನ್ನು ಕಲಿಸುವ ರೀತಿ. ಎಲ್ಲೆಡೆ ಶಿಕ್ಷಣ ವ್ಯವಸ್ಥೆಗಳಲ್ಲಿ ಹೇಳತೀರದಷ್ಟು ಕೊರತೆಗಳಿವೆ. ಅದರ ಮಾದರಿಯೊಂದನ್ನು ಕೆಳಗಿನ ಚಿತ್ರದಲ್ಲಿ ಗಮನಿಸಬಹುದು.
ಇದನ್ನೂ ಓದಿ— Orwell & Goode (@OrwellNGoode) May 22, 2023
ಗಣಿತ ಮತ್ತು ತಾರ್ಕಿಕ ಚಿಂತನೆ ಬಳಸಿಕೊಂಡು ಪರಿಹರಿಸಬೇಕಾದ ಸಮಸ್ಯೆಯೊಂದು ಇಲ್ಲಿದೆ. ಒಂದು ಕಟ್ಟಿಗೆಯ ಹಲಗೆಯನ್ನು ಇಬ್ಭಾಗ ಮಾಡಲು ಹತ್ತು ನಿಮಿಷ ಬೇಕಾಗುತ್ತದೆ. ಹಾಗಿದ್ದಲ್ಲಿ ಅಂಥದೇ ಇನ್ನೊಂದು ಹಲಗೆಯನ್ನು ಮೂರು ಭಾಗವಾಗಿ ಕತ್ತರಿಸಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದು ಪ್ರಶ್ನೆ. ಚಿತ್ರದಲ್ಲಿ ವಿದ್ಯಾರ್ಥಿ ಬರೆದ ಸರಿಯಾದ ಉತ್ತರವನ್ನು ಕೆಂಪು ಪೆನ್ನಿನಿಂದ ಹೊಡೆದು ಹಾಕಿದ ಶಿಕ್ಷಕರು ಅಸಮರ್ಪಕ ತರ್ಕ ಬಳಸಿ ತಪ್ಪಾದ ಉತ್ತರ ಬರೆದಿದ್ದಾರೆ.
ಇದನ್ನೂ ಓದಿ : Viral Video: ಊರ್ಫಿಯ ಹೊಸ ಅವತಾರ; ಸೆಗಣಿ ಮೆತ್ತಿಕೊಂಡಂತಿದೆ ಎನ್ನುತ್ತಿರುವ ನೆಟ್ಟಿಗರು
ಇದು ಟ್ವಿಟರ್ನಲ್ಲಿ ಅಲೆಯೆಬ್ಬಿಸಿದೆ. ‘ಶಿಕ್ಷಣ ವ್ಯವಸ್ಥೆಯ ಉತ್ಕೃಷ್ಟ ಮಾದರಿ’ ಎಂದು ವ್ಯಂಗ್ಯವಾಡಿದ್ದಾರೆ. ಹಲವರು ಸರಿಯಾದ ಉತ್ತರವನ್ನು ಪಡೆಯುವ ಬಗೆಯನ್ನು ವಿವರಿಸಿದ್ದರೆ, ಇನ್ನೂ ಕೆಲವರು ಆವೇಶದಿಂದ ಶಿಕ್ಷಕರ ತಪ್ಪು ತರ್ಕವನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಂದಿಬ್ಬರು ಈ ಸರಳ ಪ್ರಶ್ನೆಯನ್ನು ಸಂಕೀರ್ಣಗೊಳಿಸಿ ಇದನ್ನು ಈ ರೀತಿ ನೋಡಿದರೆ ಶಿಕ್ಷಕರ ಉತ್ತರ ಸರಿಯಾಗುವುದು ಎಂದು ಪಾಂಡಿತ್ಯ ಪ್ರದರ್ಶಿಸಿದ್ದಾರೆ. ಅವರ ಪ್ರಯತ್ನದಿಂದ ಬಸವಳಿದವರು ಏನೂ ಹೇಳದೇ ಹಣೆ ಚಚ್ಚಿಕೊಳ್ಳುವ ಗಿಫ್‌ನಿಂದ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಹೈದರಾಬಾದಿನ 76 ವರ್ಷದ ಈ ಯುವಕನ ಲಗೇಜು ತಾಲೀಮು
ಈ ನಿರ್ದಿಷ್ಟ ಪ್ರಶೆಯನ್ನು ಸ್ವಲ್ಪಮಟ್ಟಿಗೆ ‘trick question’ ಎಂದು ನಾವು ಒಪ್ಪಿಕೊಳ್ಳುವುದಾದರೂ ಒಟ್ಟಾರೆಯಾಗಿ ಶಿಕ್ಷಣ ವ್ಯವಸ್ಥೆಯ ಬಗೆಗಿನ ಮೇಲಿನ ಒಕ್ಕಣೆ ಸರಿಯೆಂದೇ ಹೇಳಬೇಕು. ಈ ಗಣಿತದ ಸಮಸ್ಯೆಗೆ ಸರಿಯುತ್ತರ ನಿಮಗೆ ಗೊತ್ತಾಯಿತೇ? ಮನೆಯಲ್ಲಿ ಇದನ್ನು ನಿಮ್ಮ ಮಕ್ಕಳಿಗೆ ಕೇಳಿ. ನಾವು ಗಣಿತ ಅಥವಾ ಇತರ ವಿಷಯಗಳನ್ನು ಸರಿಯಾಗಿ ಕಲಿಸುತ್ತಿದ್ದೇವೆಯೇ? ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:47 pm, Wed, 24 May 23